ಬೆಂಗಳೂರು: ನಾಳೆಯಿಂದ ನಿಮ್ಮ ಮನೆಯ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಬಹುದು. ಅದಕ್ಕೆ ಕಾರಣ KPTCL, ಎಸ್ಕಾಂ, ಬೆಸ್ಕಾಂ ನೌಕರರು ಹಮ್ಮಿಕೊಂಡಿರುವ ಪ್ರತಿಭಟನೆ.
ಸರ್ಕಾರಿ ನೌಕರರ ಸಂಘದ ಮುಷ್ಕರದ ಬಳಿಕ, ತಮ್ಮ ವೇತನವನ್ನೂ ಪರಿಷ್ಕರಣೆ ಮಾಡಿಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಹಾಗೂ ಒಕ್ಕೂಟ ಸಿಡಿದೆದ್ದಿದೆ. ಬೇಡಿಕೆಗಳನ್ನು ಈಡೇರಿಸದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದೆ.
ನಾಳೆಯಿಂದ ರಾಜ್ಯಾದ್ಯಂತ ಕೆಲಸಕ್ಕೆ ಗೈರಾಗಿ ಮುಷ್ಕರ ನಡೆಸಲು ನೌಕರರ ಸಂಘ ನಿರ್ಧಾರ ಮಾಡಿದೆ. ಕೆಲಸಕ್ಕೆ ಸಂಪೂರ್ಣವಾಗಿ ಗೈರು ಹಾಜರಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದು, ಈಗಾಗಲೇ ಮುಷ್ಕರ ಮಾಡುವುದಾಗಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದುವರೆಗೂ ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ.
KPTCL ನೌಕರರ ಬೇಡಿಕೆ ಏನು?
- ಪ್ರತಿ 5 ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ ಆಗಬೇಕಿತ್ತು, ಆದರೆ ಅದು ಆಗಿಲ್ಲ
- ಈ ಕೂಡಲೇ ವೇತನ ಪರಿಷ್ಕರಣೆ ಮಾಡಬೇಕು
- ಸರ್ಕಾರಿ ನೌಕರರಿಗೆ ಮಧ್ಯಂತರ ಶೇಕಡಾ 17ರಷ್ಟು ವೇತನ ಪರಿಷ್ಕರಣೆ ಮಾಡಿದ್ದಾರೆ, ನಮಗೆ ಆಗಿಲ್ಲ
- 01-04-2022ರಿಂದ ಪೂರ್ವಾನ್ವಯ ಆಗುವಂತೆ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಬೇಕು.
ಇದನ್ನೂ ಓದಿ: KPTCL Strike : ಮಾ.16 ರಿಂದ ಕೆಪಿಟಿಸಿಎಲ್ ನೌಕರರ ಮುಷ್ಕರ ಖಚಿತ; ಎನ್‌ಪಿಎಸ್ ನೌಕರರ ಬೆಂಬಲ