ಮೈಸೂರು: ಮೈಸೂರು ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾಗಿರುವ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿ.ಎಸ್. ಶ್ರೀ ವತ್ಸ (73670) ಗೆಲುವು ಸಾಧಿಸಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಂ.ಕೆ ಸೋಮಶೇಖರ್ (66457) ವಿರುದ್ಧ 7213 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 78,573 ಮತಗಳನ್ನು ಪಡೆದ ಬಿಜೆಪಿಯ ಎಸ್ ಎ ರಾಮದಾಸ್ , 52,226 ಮತಗಳನ್ನು ಪಡೆದ ಕಾಂಗ್ರೆಸ್‌ನ ತಮ್ಮ ಸಮೀಪದ ಎದುರಾಳಿ ಎಂ ಕೆ ಸೋಮಶೇಖರ್ ವಿರುದ್ಧ 26,347 ಮತಗಳ ಅಂತರದ ಜಯ ದಾಖಲಿಸಿದ್ದರು.
ಇದುವರೆಗೂ ಈ ಕ್ಷೇತ್ರದಲ್ಲಿ ಒಟ್ಟು 15 ಚುನಾವಣೆಗಳು ನಡೆದಿವೆ. ಇದರಲ್ಲಿ ಒಂದು ಉಪಚುನಾವಣೆಯೂ ಸೇರಿದೆ. ಈ ಚುನಾವಣಾ ಲೆಕ್ಕಾಚಾರದಲ್ಲಿ, 9 ಬಾರಿ ಬ್ರಾಹ್ಮಣರು, ಎರಡು ಬಾರಿ ಒಕ್ಕಲಿಗರು, ಲಿಂಗಾಯತ-ವೀರಶೈವರು, ಕುರುಬರು ಆಯ್ಕೆಯಾಗಿದ್ದಾರೆ. ಎಸ್ ಎ ರಾಮದಾಸ್ ಒಬ್ಬರೇ ಈ ಕ್ಷೇತ್ರದಲ್ಲಿ ಮೂರು ಬಾರಿ ಆಯ್ಕೆಯಾಗಿದ್ದಾರೆ.
ಈ ಕ್ಷೇತ್ರದಲ್ಲಿ 58 ಸಾವಿರ ಬ್ರಾಹ್ಮಣ ಮತದಾರರಿದ್ದಾರೆ. 40 ಸಾವಿರ ಪರಿಶಿಷ್ಟ ಜಾತಿ, 32 ಸಾವಿರ ವೀರಶೈವರು, 25-28 ಸಾವಿರ ಕುರುಬರ ಮತಗಳು, 10 ಸಾವಿರ ನಾಯಕರು, 15 ಸಾವಿರ ಒಕ್ಕಲಿಗರು, 8 ಸಾವಿರ ಅಲ್ಪಸಂಖ್ಯಾತರು, 5 ಸಾವಿರ ಮರಾಠರು, 6 ಸಾವಿರ ಜೈನರು ಹಾಗೂ ಇತರ ಸಮುದಾಯಗಳು 35 ಸಾವಿರ ಮಂದಿ ಮತದಾರರು ಇದ್ದಾರೆ.