Site icon Vistara News

Krishnarajapet Election Results : ಕೆ.ಆರ್.ಪೇಟೆಯಲ್ಲಿ ಜೆಡಿಎಸ್​ನ ಎಚ್​ ಟಿ ಮಂಜುಗೆ ಜಯ

Krishnarajapet Election Results HT manju

#image_title

ಕೆ.ಆರ್.ಪೇಟೆ: ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ (Krishnarajapet Election Results) ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್​ನ ಎಚ್​ಟಿ ಮಂಜು (79844) ಕಾಂಗ್ರೆಸ್ ಬಿಎಲ್ ದೇವರಾಜು (57939) ವಿರುದ್ಧ 21905 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

2019ರ ಉಪಚುನಾವಣೆಯಲ್ಲಿ ಬಿಜೆಪಿಯ ನಾರಾಯಣಗೌಡ ಅವರು 66,094 ಮತ್ತು ಜೆಡಿಎಸ್‌ನ ಬಿ ಎಲ್ ದೇವರಾಜು 56,363 ಮತ ಪಡೆದಿದ್ದರು. ನಾರಾಯಣಗೌಡ ಅವರು 9,731 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಕ್ಷೇತ್ರದಲ್ಲಿ ಈ ಹಿಂದೆ ಒಂದೇ ಪಕ್ಷದಲ್ಲಿದ್ದ ಮೂವರು ಅಭ್ಯರ್ಥಿಗಳು ಈಗ ಮೂರು ಪಕ್ಷಗಳಿಂದ ಪರಸ್ಪರ ಎದುರಾಳಿಗಳಾಗಿದ್ದರು. 2013, 2018 ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ಸಚಿವ ನಾರಾಯಣಗೌಡ ಆಪರೇಷನ್ ಕಮಲದ ಮೂಲಕ 2019ರಲ್ಲಿ ಬಿಜೆಪಿ ಸೇರಿದರು. ಬಳಿಕ ಶಾಸಕರಾಗಿಯೂ ಆಯ್ಕೆಯಾದರು. ಅವರೀಗ ಬಿಜೆಪಿಯಿಂದ ಮತ್ತೆ ಸ್ಪರ್ಧಿಸಿದ್ದರು.

ಇದನ್ನೂ ಓದಿ: Karnataka Election 2023: ಮತಎಣಿಕೆ ದಿನ 144 ಸೆಕ್ಷನ್‌ ಜಾರಿ; ಮೆರವಣಿಗೆ ಮಾಡುವಂತಿಲ್ಲ, ಪಟಾಕಿ ಹೊಡೆಯುವಂತಿಲ್ಲ

ಈ ಮೊದಲು ಜೆಡಿಎಸ್‌ನಲ್ಲೇ ಇದ್ದ ಬಿ ಎಲ್ ದೇವರಾಜ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಎಚ್ ಟಿ ಮಂಜುನಾಥ ಅವರಿಗೆ ದಳಪತಿಗಳು ಟಿಕೆಟ್ ನೀಡಿದ ಕಾರಣ ಬಿ ಎಲ್ ದೇವರಾಜ್ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದಿದ್ದರು. ಕೆ.ಆರ್. ಪೇಟೆ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಇವರಲ್ಲಿ 1 ಲಕ್ಷ ಮತದಾರರು ಒಕ್ಕಲಿಗರೇ ಆಗಿದ್ದಾರೆ. ಇನ್ನುಳಿದಂತೆ ದಲಿತರು ಹಾಗೂ ಕುರುಬರು ತಲಾ 35 ಸಾವಿರ ಇದ್ದಾರೆ.

Exit mobile version