Site icon Vistara News

KRS Dam | ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್‌ ತಾತ್ಕಾಲಿಕ ಮುಂದೂಡಿಕೆ? ಇನ್ನೂ ಗೆಸ್ಟ್‌ಹೌಸ್‌ನಲ್ಲೇ ಇದ್ದಾರೆ ವಿಜ್ಞಾನಿಗಳು!

ಮಂಡ್ಯ: ಕೆಆರ್‌ಎಸ್ ಡ್ಯಾಂ ಸಮೀಪದ [KRS Dam] ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಟ್ರಯಲ್‌ ಬ್ಲಾಸ್ಟ್‌ ಅನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿದೆ ಎಂದು ಜಿಲ್ಲಾಡಳಿತ ರೈತ ಮುಖಂಡರಿಗೆ ತಿಳಿಸಿದೆ. ಆದರೆ, ರೈತ ನಾಯಕರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಜಾರ್ಖಂಡ್‌ನಿಂದ ಬಂದಿರುವ ವಿಜ್ಞಾನಿಗಳ ತಂಡ ಇಲ್ಲಿಂದ ತೆರಳುವವರೆಗೂ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆಯಿಂದ ಅಪಾಯ ಆಗಲಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಏಳು ದಿನಗಳ ಕಾಲ ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಬೇಬಿ ಬೆಟ್ಟದ ಬಳಿ ಕರ್ನಾಟಕ ರಾಜ್ಯ ರೈತ ಸಂಘದವರು ಪ್ರತಿಭಟನೆ ನಡೆಸುತ್ತಾ ಬಂದಿದ್ದಾರೆ.

ತೀವ್ರ ವಿರೋಧದ ನಡುವೆಯೂ ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾಗಿದ್ದ ಜಿಲ್ಲಾಡಳಿತ ಕಡೆಗೂ ರೈತರ ಒತ್ತಡಕ್ಕೆ ತಾತ್ಕಾಲಿಕವಾಗಿ ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆ ಮುಂದೂಡಲಾಗಿದೆ ಎಂದು ಹೇಳಿದೆ. ಆದರೆ, ಟ್ರಯಲ್ ಬ್ಲಾಸ್ಟಿಂಗ್ ಬಗ್ಗೆ ಸ್ಪಷ್ಟ ತೀರ್ಮಾನ ತಿಳಿಸುವವರೆಗೆ ಹೋರಾಟವನ್ನು ಮುಂದುವರಿಸಲಾಗುವುದು ಎಂದು ತಿಳಿಸಿರುವ ರೈತ ಸಂಘಟನೆಯವರು, ಕೆಆರ್‌ಎಸ್ ಮತ್ತು ಬೇಬಿ ಬೆಟ್ಟದ ನಡುವೆ ಇರುವ ಪಾಂಡವಪುರ ತಾಲೂಕಿನ ಕಟ್ಟೇರಿ ಗ್ರಾಮದಲ್ಲಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಅಲ್ಲದೆ, ಮತ್ತೊಂದೆಡೆ ಜಾರ್ಖಂಡ್ ವಿಜ್ಞಾನಿಗಳ‌ ತಂಡ ಗೆಸ್ಟ್‌ಹೌಸ್‌ನಲ್ಲೇ ಉಳಿದುಕೊಂಡಿದ್ದು, ಅವರು ತೆರಳಬೇಕು ಎಂದು ಸಹ ರೈತರು ಆಗ್ರಹ ವ್ಯಕ್ತಪಡಿಸಿದ್ದಾರೆ.
ರೈತರ ನಿರ್ಧರಿಸಿದ್ದಾರೆ.

ಇದನ್ನೂ ಓದಿ | KRS Dam | ಜಾರ್ಖಂಡ್ ವಿಜ್ಞಾನಿಗಳ ತಂಡದಿಂದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ಆರಂಭ, ರೈತರ ವಿರೋಧ

Exit mobile version