Site icon Vistara News

KSET Results 2024:‌ ಕೆ-ಸೆಟ್‌ ಪರೀಕ್ಷೆ ಫಲಿತಾಂಶ; ಅಂಕಪಟ್ಟಿ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

KSET Results 2024

KSET Results 2024: How To Download Your Marks Card

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (KSET Results 2024) ಫಲಿತಾಂಶ ಪ್ರಕಟಿಸಿದೆ. ಕಳೆದ ಜನವರಿ 13ರಂದು ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಒಟ್ಟು 41 ವಿಷಯಗಳಿಗೆ ನಡೆದ ಪರೀಕ್ಷೆಯಲ್ಲಿ ಒಟ್ಟು 6,675 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು, ಅವರೆಲ್ಲರ ನೋಂದಣಿ ಸಂಖ್ಯೆ, ಅಂಕಪಟ್ಟಿಯನ್ನು ಕೆಇಎ ವೆಬ್‌ಸೈಟ್‌ನಲ್ಲಿ (KEA Website) ಪ್ರಕಟಿಸಲಾಗಿದೆ. ಇನ್ನು, ಫಲಿತಾಂಶ ಪರಿಶೀಲಿಸುವುದು ಹೇಗೆ? ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಫಲಿತಾಂಶವನ್ನು ಹೀಗೆ ಚೆಕ್‌ ಮಾಡಿ

  1. ಮೊದಲು ಕೆಇಎ ಅಧಿಕೃತ ವೆಬ್‌ಸೈಟ್‌ ಆಗಿರುವ https://cetonline.karnataka.gov.in/KEA ಗೆ ಭೇಟಿ ನೀಡಿ
  2. ಮುಖಪುಟದಲ್ಲಿ ಕಾಣಿಸುವ KSET ಫಲಿತಾಂಶ ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ
  3. ಕೆ-ಸೆಟ್‌ ನೋಂದಣಿ ಸಂಖ್ಯೆ ಹಾಗೂ ಜನ್ಮದಿನಾಂಕವನ್ನು ನಮೂದಿಸಿ
  4. ಕೆ-ಸೆಟ್ ಫಲಿತಾಂಶವನ್ನು ಪರದೆ ಮೇಲೆ ಪ್ರದರ್ಶಿಸಲಾಗುತ್ತದೆ
  5. ಕೊನೆಯ ಹಂತದಲ್ಲಿ ಫಲಿತಾಂಶವನ್ನು ವೀಕ್ಷಿಸುವ ಜತೆಗೆ ಡೌನ್‌ಲೋಡ್‌, ಪ್ರಿಂಟೌಟ್‌ ತೆಗೆದುಕೊಳ್ಳಬಹುದು

1,17,703 ಅಭ್ಯರ್ಥಿಗಳ ನೋಂದಣಿ

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟು 1,17,703 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ರಾಜ್ಯದ 7 ಕೇಂದ್ರಗಳಲ್ಲಿ ಜನವರಿ 13ರಂದು ನಡೆದ ಪರೀಕ್ಷೆಗೆ 95,201 ಜನ ಹಾಜರಾಗಿದ್ದರು. ಆದರೆ, ಪರೀಕ್ಷೆಯಲ್ಲಿ 3,398 ಪುರುಷರು ಹಾಗೂ 3,180 ಮಹಿಳೆಯರು ಸೇರಿ ಒಟ್ಟು 6,675 ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ 97 ತೃತೀಯ ಲಿಂಗಿಗಳು ಹಾಗೂ 350 ಅಭ್ಯರ್ಥಿಗಳು ವಿಶೇಷ ಚೇತನರಾಗಿದ್ದಾರೆ ಎಂಬುದಾಗಿ ಕೆಇಎ ತಿಳಿಸಿದೆ.

ಎಷ್ಟು ಅಂಕ ಪಡೆದರೆ ತೇರ್ಗಡೆ?

ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪೇಪರ್‌ 1 ಹಾಗೂ 2 ಸೇರಿ ಒಟ್ಟು 200 ಅಂಕಗಳಲ್ಲಿ ಶೇ.40ರಷ್ಟು ಅಂಕ ಪಡೆಯಬೇಕು. Cat-I, IIA, IIB, IIIA, IIIB, ಎಸ್‌ಸಿ, ಎಸ್‌ಟಿ, ವಿಶೇಷ ಚೇತನರು ಎರಡೂ ಪರೀಕ್ಷೆಗಳ ಒಟ್ಟು 200 ಅಂಕಗಳ ಪೈಕಿ ಶೇ.35ರಷ್ಟು ಅಂಕಗಳನ್ನು ಪಡೆಯಬೇಕು. ಆಗ ಅವರು ಕೆ-ಸೆಟ್‌ನಲ್ಲಿ ತೇರ್ಗಡೆ ಹೊಂದಿದಂತಾಗುತ್ತದೆ.

ಇದನ್ನೂ ಓದಿ: COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

Exit mobile version