ಕೊಡಗು: ಕಾರು-ಬಸ್ ಅಪಘಾತ ಪ್ರಕರಣವೊಂದರಲ್ಲಿ ಪರಿಹಾರ ನೀಡದೆ ರೂಟ್ ಬದಲಿಸಿದ ಕಾರಣಕ್ಕೆ ಕೊಡಗು ಜಿಲ್ಲೆಯ ವಿರಾಜಪೇಟೆ ನ್ಯಾಯಾಲಯವು (Virajpet Court) ಸರ್ಕಾರಿ ಬಸ್‌ನ್ನೇ ಜಪ್ತಿ (KSRTC Bus seized) ಮಾಡಿದ ಘಟನೆ ನಡೆದಿದೆ.
2010ರಲ್ಲಿ ಹುಣಸೂರಿನಲ್ಲಿ ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಪ್ರಕರಣ ನಡೆದಿತ್ತು. ಹೀಗಾಗಿ ಫಾತೀಮಾ ಅಪ್ಸರ್ ಎಂಬುವವರು ಕೆಎಸ್‌ಆರ್‌ಟಿಸಿ ವಿರುದ್ಧ ಅಪಘಾತ ವಿಮೆ ಪರಿಹಾರಕ್ಕೆ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ಪರಿಹಾರ ನೀಡಲು ಕೆಎಸ್‌ಆರ್‌ಟಿಸಿಗೆ 2020ರಲ್ಲಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: Farmer Death : ಮಳೆ ಇಲ್ಲದೆ ಬೆಳೆ ನಾಶ; ಮನನೊಂದ ರೈತ ನೇಣಿಗೆ ಶರಣು
ಇತ್ತ ಜಿಲ್ಲಾ ನ್ಯಾಯಲಯದ ತೀರ್ಪನ್ನು ಪ್ರಶ್ನಿಸಿ ಕೆಎಸ್‌ಆರ್‌ಟಿಸಿ ನಿಗಮವು ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗಿತ್ತು. ಜಿಲ್ಲಾ ನ್ಯಾಯಾಲಯದ ತೀರ್ಪನ್ನೇ ರಾಜ್ಯ ಉಚ್ಛ ನ್ಯಾಯಾಲಯವು ಎತ್ತಿ ಹಿಡಿದಿತ್ತು. ಅಪಘಾತ ವಿಮೆ ನೀಡಲೇಬೇಕಾದ ಅನಿವಾರ್ಯತೆಯಲ್ಲಿದ್ದ ಕೆಎಸ್‌ಆರ್‌ಟಿಸಿ ನಿಗಮವು, ಪರಿಹಾರ ನೀಡದೆ ಎಷ್ಟೇ ಸಮಯಾವಕಾಶ ನೀಡಿದರೂ ಕೋರ್ಟ್ ಆದೇಶವನ್ನು ಉಲ್ಲಂಘಿಸಿತ್ತು.
ಬೆನ್ನಟ್ಟಿ ಹಿಡಿದ ಕೋರ್ಟ್ ಸಿಬ್ಬಂದಿ
ನಿಗಮವು ಕೆಎಸ್‌ಆರ್‌ಟಿಸಿ ಬಸ್ ಮಾರ್ಗವನ್ನೇ ಬದಲಿಸಿತ್ತು. ಆದರೆ ಕೊಳ್ಳೇಗಾಲದಿಂದ ವಿರಾಜಪೇಟೆ ಪಟ್ಟಣಕ್ಕೆ ಬಂದಿದ್ದ ಬಸ್ ಅನ್ನು ವಿರಾಜಪೇಟೆ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಈ ವಿಷಯವನ್ನು ಚಾಲಕ ಮೇಲಾಧಿಕಾರಿ ಗಳಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ಅಪಘಾತದ ಪರಿಹಾರ ಹಣ ಕೊಟ್ಟು ವಾಹನ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ