Site icon Vistara News

Ksrtc Driver : ಕಿಕ್‌ ಏರಿಸಿಕೊಂಡು ಅಡ್ಡಾದಿಡ್ಡಿ ಬಸ್‌ ಚಲಾಯಿಸಿದ; ಭಯದಿಂದ ಇಳಿದು ಓಡಿದ ಪ್ರಯಾಣಿಕರು!

KSRTC driver drives bus under the influence of alcohol

ಮೈಸೂರು: ಕಂಠ ಪೂರ್ತಿ ಕುಡಿದ (Drinking addiction) ಕೆಎಸ್‌ಆರ್‌ಟಿಸಿ ಚಾಲಕನೊಬ್ಬ (Ksrtc Driver) ಬಸ್‌ ಚಲಾಯಿಸಲು ಆಗದೆ ರಸ್ತೆ ಮಧ್ಯೆಯೇ ನಿಲ್ಲಿಸಿದ ಘಟನೆ ನಡೆದಿದೆ. ಕರ್ತವ್ಯದಲ್ಲಿ ಇರುವಾಗಲೇ ಕಿಕ್‌ ಏರಿಸಿಕೊಂಡ ಡ್ರೈವರ್‌ಗೆ ಪ್ರಯಾಣಿಕರು ಹಿಡಿಶಾಪ ಹಾಕಿದರು. ಕೆಎಸ್ಆರ್‌ಟಿಸಿ ಬಸ್ ಚಾಲಕ ಗೋಪಾಲ ಕೃಷ್ಣನಿಗೆ ಪ್ರಯಾಣಿಕರು ತರಾಟೆ ತೆಗೆದುಕೊಂಡಿದ್ದಾರೆ.

ಎಚ್‌ಡಿ ಕೋಟೆಯಿಂದ ಮೈಸೂರಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಕುಡುಕ ಚಾಲಕ ಗೋಪಾಲ ಕೃಷ್ಣ ಗಾಡಿ ಓಡಿಸಲು ಸಾಧ್ಯವಾಗದೆ ಅಡ್ಡಾದಿಡ್ಡಿ ಚಲಾಯಿಸಿದ್ದಾನೆ. ಕಂಠ ಪೂರ್ತಿ ಕುಡಿದಿದ್ದರಿಂದ ಬಸ್‌ ಚಲಾಯಿಸಲು ಸಾಧ್ಯವಾಗದೆ ಇದ್ದಾಗ ಹ್ಯಾಂಡ್ ಪೋಸ್ಟ್ ಬಳಿ ಬಸ್ ನಿಲ್ಲಿಸಿದ್ದಾನೆ.

ಇದನ್ನೂ ಓದಿ: Chandrayaan 3 : ಇಸ್ರೋ ಚಂದ್ರಯಾನ ಯಶಸ್ಸಿಗಾಗಿ ಕುಕ್ಕೆ ಸುಬ್ರಹ್ಮಣದಲ್ಲಿ ಕಾರ್ತಿಕ ಪೂಜೆ

ಇತ್ತ ಚಾಲಕನ ನಡವಳಿಕೆಯಿಂದ ಎಚ್ಚೆತ್ತ ಪ್ರಯಾಣಿಕರು ಕೂಡಲೇ ಗಾಬರಿಯಾಗಿ ಬಸ್‌ನಿಂದ ಒಬ್ಬರ ಹಿಂದೆ ಒಬ್ಬರು ಇಳಿದು ಬಿಟ್ಟಿದ್ದಾರೆ. ಈ ಬಸ್‌ನಲ್ಲಿ ಪ್ರಯಾಣಿಸಿದರೆ ನೇರ ಕೈಲಾಸಕ್ಕೆ ಕಳಿಸಿಬಿಡುತ್ತಾನೆ, ನಾವ್ಯಾರು ಈ ಬಸ್‌ನಲ್ಲಿ ಪ್ರಯಾಣಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ. ಪ್ರಯಾಣಿಕರ ಪ್ರಾಣದ ಜತೆಗೆ ಆಟವಾಡುತ್ತಿಯಾ ಎಂದು ಕುಡಿದು ಟೈಟ್‌ ಆಗಿದ್ದ ಚಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಡ್ರೈವರ್ ಗೋಪಾಲಕೃಷ್ಣ ನಾನು ಮುಂಜಾನೆ ಕುಡಿದಿದ್ದು, ಈಗ ಕುಡಿದಿಲ್ಲ. ನಾನು ಕೆಲಸಕ್ಕೆ ಬರಲ್ಲ ಎಂದಿದ್ದೆ ಎಂದು ಸಾರ್ವಜನಿಕರಿಗೆ ಉತ್ತರಿಸಿದ್ದಾನೆ. ಇನ್ನು ಬಸ್‌ನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರು ಮೈಸೂರಿಗೆ ಹೊರಟಿದ್ದರು. ಕುಡುಕ ಚಾಲಕನಿಂದ ಎಲ್ಲರಿಗೂ ಅನಾನುಕೂಲ ಉಂಟಾಯಿತು. ಚಾಲಕನಿಗೆ ಬೈದುಕೊಂಡೆ ಬೇರೆ ಬಸ್‌ ಹತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version