ವಿಜಯನಗರ: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಎನ್.ಟಿ (1,40,753) ಗೆಲುವು ಗೆಲುವು ಸಾಧಿಸಿದ್ದಾರೆ. ಅವರು ಈ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಲೋಕೆಶ್ ಎನ್ ವಿ ನಾಯ್ಕ್ (50,403) ವಿರುದ್ಧ 54350 ಮತಗಳ ಅಂತರದಿಂದ ಜಯ ಸಾಧಿಸಿದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಎನ್ ವೈ ಗೋಪಾಲಕೃಷ್ಣ, ಅವರು ಜಯ ಸಾಧಿಸಿ ಶಾಸಕರಾಗಿದ್ದರು.
1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ 7 ಕ್ಷೇತ್ರಗಳು ಇದ್ದವು. 1962ರಲ್ಲಿ ಕೂಡ್ಲಿಗಿ, 1978ರಲ್ಲಿ ಕೊಟ್ಟೂರು ಸೇರಿ ನಂತರ ಒಂಬತ್ತು ಕ್ಷೇತ್ರಗಳಾದವು. ಕೂಡ್ಲಿಗಿ ಕ್ಷೇತ್ರ ಮರುವಿಂಗಡೆಯಾಗುವ ಮೊದಲು ಹಗರಿಬೊಮ್ಮನಹಳ್ಳಿ, ಹಡಗಲಿ, ಮರಿಯಮ್ಮನಹಳ್ಳಿ ಭಾಗವನ್ನು ಹೊಂದಿತ್ತು. ವಿಂಗಡಣೆಯಾದ ನಂತರ ಪರಿಶಿಷ್ಟ ಪಂಗಡದ ಮೀಸಲು ವಿಧಾನಸಭಾ ಕ್ಷೇತ್ರವಾಯಿತು. ಸದ್ಯ ಈ ಕ್ಷೇತ್ರವು ಬಳ್ಳಾರಿ ಲೋಕಸಭಾ ವ್ಯಾಪ್ತಿಯಲ್ಲಿದ್ದರೂ, ಹೊಸ ಜಿಲ್ಲೆಯಾದ ವಿಜಯನಗರ ಜಿಲ್ಲೆಯಲ್ಲಿದೆ.
ಇದನ್ನೂ ಓದಿ ವ: Mandya Election Results : ಮಂಡ್ಯದಲ್ಲಿ ಕಾಂಗ್ರೆಸ್ನ ಗಣಿಗ ರವಿಕುಮಾರ್ಗೆ ಗೆಲುವು
ಎನ್.ವೈ. ಗೋಪಾಲಕೃಷ್ಣ ಅವರು ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ನಾಲ್ಕು ಬಾರಿ ಮೊಳಕಾಲ್ಮೂರುವಿನಿಂದ (1993ರಿಂದ 2013) ಶಾಸಕರಾಗಿದ್ದಾರೆ. 2013ರಲ್ಲಿ ಕಾಂಗ್ರೆಸ್‌ನಿಂದ ಬಳ್ಳಾರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಅವರು, 2018ರಲ್ಲಿ ಬಿಜೆಪಿ ಸೇರಿ ಕೂಡ್ಲಿಗಿ ಶಾಸಕರಾದರು.
ಕ್ಷೇತ್ರದಲ್ಲಿ ಲಿಂಗಾಯತ, ಕುರುಬ, ವಾಲ್ಮೀಕಿ, ಲಂಬಾಣಿ, ಯಾದವ, ಮುಸ್ಲಿಂ ಮತದಾರರು ನಿರ್ಣಾಯಕವಾಗಿದ್ದರು. ಪುರುಷ ಮತದಾರರು 1,02,035, ಮಹಿಳೆಯರು 98,826 ಸೇರಿ 2,00,873 ಮಂದಿ ಮತದಾರರಿದ್ದರು.