ಬೆಂಗಳೂರು, ಕರ್ನಾಟಕ: ಕುಂದಗೋಳ ಕ್ಷೇತ್ರವು ಧಾರವಾಡ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಹಾಲಿ ಶಾಸಕಿ, ಕಾಂಗ್ರೆಸ್‌ನ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ವಿರುದ್ಧ ಬಿಜೆಪಿಯ ಎಂ ಆರ್ ಪಾಟೀಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ. 35230 ಮತಗಳ ಭರ್ಜರಿ ಅಂತರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಕುಸುಮಾವತಿ ಅವರು 40609 ಮತಗಳನ್ನು ಪಡೆದುಕೊಂಡರೆ, ಎಂ ಆರ್ ಪಾಟೀಲ್ ಅವರು 75839 ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಸ್ ಐ ಚಿಕ್ಕನಗೌಡ್ರು 30341 ಮತಗಳನ್ನು ಪಡೆದುಕೊಂಡಿದ್ದಾರೆ(Kundgol Election Results).
2023ರ ಚುನಾವಣೆಯ ಅಭ್ಯರ್ಥಿಗಳು
ಹಾಲಿ ಶಾಸಕಿ ಕಾಂಗ್ರೆಸ್‌ನ ಕುಸುಮಾ ಶಿವಳ್ಳಿ ಅವರು ಕಣದಲ್ಲಿದ್ದರು. ಈ ಬಾರಿ ಬಿಜೆಪಿ ಹೊಸ ಮುಖ ಎಂ ಆರ್ ಪಾಟೀಲ್ ಅವರಿಗೆ ಮಣೆ ಹಾಕಿತ್ತು. ಜಿಡಿಎಸ್‌ನಿಂದ ಹಜರತ್ ಅಲಿ ಅಲ್ಲಾಸಾಬ್ ಅವರು ಸ್ಪರ್ಧಿಸಿದ್ದಾರೆ.
2018ರ ಚುನಾವಣೆ ಫಲಿತಾಂಶ ಏನಾಗಿತ್ತು?
ಕುಂದಗೋಳ ಧಾರವಾಡ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. 1972ರಿಂದ ಅಸ್ತಿತ್ವದಲ್ಲಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆಯುತ್ತಾ ಬಂದಿದೆ. ಹಾಗಿದ್ದೂ, ಜನತಾ ಪರಿವಾರ ಹಾಗೂ ಪಕ್ಷೇತರರಿಗೆ ಇಲ್ಲಿ ಅವಕಾಶ ದೊರೆತಿದೆ. 2018ರಲ್ಲಿ ಸಿ ಎಸ್ ಶಿವಳ್ಳಿ ಅವರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಅವರು ಬಿಜೆಪಿಯ ಎಸ್ ಐ ಚಿಕ್ಕನಗೌಡ್ರ ವಿರುದ್ದ ಗೆಲವು ಸಾಧಿಸಿದ್ದರು. ಕುಸುಮಾವತಿ 77640 ಮತಗಳನ್ನು ಪಡೆದುಕೊಂಡರೆ, ಎಸ್ಐ ಚಿಕ್ಕನಗೌಡ್ರು 76,039 ಮತಗಳನ್ನು ಗಳಿಸಿದ್ದರು.