Site icon Vistara News

ಹೆಂಡ್ತಿಗೆ ಪಾಯಿಸನ್ ಇಂಜೆಕ್ಷನ್ ಚುಚ್ಚಿ ಕೊಂದನೇ ಲ್ಯಾಬ್ ಟೆಕ್ನೀಷಿಯನ್! ಅರ್ಧಕ್ಕೆ ನಿಂತ ಅಂತ್ಯಕ್ರಿಯೆ

Suspicious death in chikkamangaluru

ಚಿಕ್ಕಮಗಳೂರು: ಆರೋಗ್ಯವಾಗಿದ್ದ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ (Suspicious death) ಮನೆಯಲ್ಲೇ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಶ್ವೇತಾ (31) ಮೃತ ದುರ್ದೈವಿ.

ತರಾತುರಿಯಲ್ಲಿ ಶ್ವೇತಾಳ ಅಂತ್ಯಕ್ರಿಯೆಗೆ ಪತಿ ಕುಟುಂಬಸ್ಥರು ಸಿದ್ಧತೆಯನ್ನು ನಡೆಸುತ್ತಿದ್ದರು. ಇದರಿಂದ ಅನುಮಾನಗೊಂಡ ಮೃತಳ ಪೋಷಕರು ಅಂತ್ಯಕ್ರಿಯೆಯನ್ನು ಅರ್ಧಕ್ಕೆ ತಡೆದಿದ್ದಾರೆ. ಬಳಿಕ ಮಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Farmer Death : ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಒದ್ದಾಡಿ ಪ್ರಾಣಬಿಟ್ಟ ರೈತ!

ಅನೈತಿಕ ಸಂಬಂಧ

ಶ್ವೇತಾಳ ಪತಿ ದರ್ಶನ್‌ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಹೀಗಾಗಿ ಆತನೇ ಪಾಯಿಸನ್ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿರುವ ಆರೋಪವನ್ನು ಶ್ವೇತಾ ಪೋಷಕರು ಮಾಡಿದ್ದಾರೆ. ದರ್ಶನ್‌ ತನ್ನ ಹೆಂಡ್ತಿ ಮನೆಯವರಿಗೆ ಫೋನ್‌ ಮಾಡಿ ಶ್ವೇತಾಳಿಗೆ ಹೃದಯಘಾತವಾಗಿ ಮೃತಪಟ್ಟಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ದರ್ಶನ್ ಮತ್ತು ಶ್ವೇತಾ 4 ದಿನದ ಹಿಂದೆ ಬೆಂಗಳೂರಿನಿಂದ ದೇವವೃಂದಕ್ಕೆ ಆಗಮಿಸಿದ್ದರು, ಆಗ ಚೆನ್ನಾಗಿದ್ದ ಮಗಳ ದಿಢಿರ್‌ ಸಾವು ಅನುಮಾನಕ್ಕೆ ಕಾರಣ ಮಾಡಿಕೊಟ್ಟಿತ್ತು. ಮೂರು ವರ್ಷದ ಹಿಂದೆ ದರ್ಶನ್ ಜತೆ ಶ್ವೇತಾ ವಿವಾಹವಾಗಿದ್ದಳು. ಆದರೆ ಇತ್ತೀಚೆಗೆ ದರ್ಶನ್‌ ಮತ್ತೊಬ್ಬಳ ಸಹವಾಸಕ್ಕೆ ಬಿದ್ದಿದ್ದ. ಈತನಿಗೆ ಇದ್ದ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿ ಶ್ವೇತಾಳಿಗೆ ಇಂಜೆಕ್ಷನ್ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯ ಮೃತದೇಹವನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತ ಪೋಷಕರು ಈ ಸಂಬಂಧ ಗೋಣಿಬೀಡು ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಪತಿಯ ಮೋಸದಾಟವನ್ನು ಬಯಲು ಮಾಡಿದ್ದ ಶ್ವೇತಾ!

ಶ್ವೇತಾ ಹಾಗೂ ದರ್ಶನ್‌ ಪ್ರೀತಿಸಿ ಮದುವೆಯಾದವರು. ಆದರೆ ಬರಬರುತ್ತಾ ದರ್ಶನ್‌ ನಡವಳಿಕೆಯಲ್ಲಿ ಬದಲಾಣೆಯನ್ನು ಶ್ವೇತಾ ಗಮನಿಸಿದ್ದಳು. ಪತಿ ಮತ್ತೊಬ್ಬ ವಿವಾಹಿತೆಯೊಂದಿಗೆ ಸಂಬಂಧ ಹೊಂದಿದ್ದು ತಿಳಿದಾಗ ಅಘಾತಕ್ಕೆ ಒಳಗಾಗಿದ್ದಳು. ಹೇಗಾದರೂ ಮಾಡಿ ತನ್ನ ಕುಟುಂಬವನ್ನುಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಶ್ವೇತಾ, ಆಕೆಯನ್ನು ಮನೆಗೆ ಕರೆಸಿಕೊಂಡು ಮಾತನಾಡಿದ್ದಳು.

ಶ್ವೇತಾ ಸಾವಿಗೂ ಮುನ್ನ ಮಾತನಾಡಿದ ಆಡಿಯೋ ವೈರಲ್ ಆಗಿದ್ದು, ದರ್ಶನ್‌ ತನ್ನ ಸಹೋದ್ಯೋಗಿ ಜತೆಗಿನ ಲವ್ ಕಹಾನಿ ರಿವಿಲ್ ಆಗಿದೆ. ದರ್ಶನ್ ತನ್ನ ಸಹೋದ್ಯೋಗಿ ಅಶ್ವಿನಿ ಎಂಬಾಕೆಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದ. ಇದು ತಿಳಿದಾಗ ಶ್ವೇತಾ ಅಶ್ವಿನಿಯೊಂದಿಗೆ ಮಾತನಾಡಿ ಪತಿಯ ಸಹವಾಸಕ್ಕೆ ಬಾರದಂತೆ ಪರಿಪರಿಯಾಗಿ ಬೇಡಿಕೊಂಡಿದ್ದರು. ಇನ್ನೊಮ್ಮೆ ಪತಿಯೊಂದಿಗೆ ವೈಯಕ್ತಿಕ ವಿಷಯಗಳನ್ನು ಚರ್ಚಿಸಿದಂತೆಯೂ ಕೇಳಿಕೊಂಡಿದ್ದಾರೆ. ಇನ್ನು ಈ ದರ್ಶನ್‌ ಪತ್ನಿಗೆ ಸುಳ್ಳು ಹೇಳಿ ಸಹೋದ್ಯೋಗಿ ಜತೆಗೆ ರೆಸಾರ್ಟ್‌ ಹೋಗಿದ್ದರಾ ಬಗ್ಗೆಯೂ ಆಡಿಯೋದಲ್ಲಿದೆ.

ರಾಣಿ ತರ ನೋಡಿಕೊಳ್ಳುತ್ತೇನೆ, ಕಣ್ಣೀರು ಹಾಕಿಸಲ್ಲ ಎಂದು ದರ್ಶನ್‌ ಪತ್ನಿ ಶ್ವೇತಾಳಿಗೆ ಮಾತು ಕೊಟ್ಟಿದ್ದ. ಆದರೆ ಮತ್ತೆ ಅಶ್ವಿನಿಯೊಂದಿಗೆ ಸಹವಾಸವನ್ನು ಇಟ್ಟುಕೊಂಡಿದ್ದ. ನಿನ್ನೆ ಸೋಮವಾರವು ಈ ಬಗ್ಗೆ ಪ್ರಶ್ನೆ ಮಾಡಿದ್ದಳು. ಪತಿಯೊಂದಿಗೆ ಸಂಬಂಧ ಹೊಂದಿದ್ದ ಅಶ್ವಿನಿಗೂ ಮತ್ತೆ ಅದು ತಪ್ಪು ಮಾಡಿದ್ದೀರಾ ಎಂದು ಕೇಳಿದ್ದಾಳೆ. ಈ ನಡುವೆ ಆತನ ಸಹವಾಸ ಮಾಡುವುದಿಲ್ಲ ಎಂದಿರುವ ಆಡಿಯೋ ವೈರಲ್‌ ಆಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version