Farmer Death : ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಒದ್ದಾಡಿ ಪ್ರಾಣಬಿಟ್ಟ ರೈತ! - Vistara News

ಕರ್ನಾಟಕ

Farmer Death : ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಒದ್ದಾಡಿ ಪ್ರಾಣಬಿಟ್ಟ ರೈತ!

Farmer Death : ಸಾಲಭಾದೆಯಿಂದ ಬೇಸತ್ತು ಹೋದ ರೈತನೊಬ್ಬ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ.

VISTARANEWS.COM


on

farmer dead
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಪ್ಪಳ: ರೈತರ ಆತ್ಮಹತ್ಯೆ (Farmer Death) ಪ್ರಕರಣಗಳು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಬೆಳೆಯು ಕೈಗೆ ಬಾರದೇ ರೈತರು ಕಂಗಾಲಾಗಿದ್ದಾರೆ. ಭೀಕರ ಬರ ಹಿನ್ನೆಲೆಯಲ್ಲಿ ಬೆಳೆಯಿಂದ ಕೈ ಸುಟ್ಟುಕೊಂಡ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದ ಮಹೇಶ ಕುದ್ರಿಕೊಟಗಿ (37)ಮೃತ ದುರ್ದೈವಿ. ಮಹೇಶ್‌ ತನ್ನ ಪತ್ನಿ, ಮೂವರು ಮಕ್ಕಳು, ಸಹೋದರ ಹಾಗೂ ತಾಯಿಯನ್ನು ಅಗಲಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರೈತ ಮಹೇಶ್‌ ಬೆಳೆಗಾಗಿ ಖಾಸಗಿ ಬ್ಯಾಂಕ್ ಸೇರಿ ವಿವಿಧೆಡೆ ಕೈ ಸಾಲ ಮಾಡಿಕೊಂಡಿದ್ದರು. ಸಕಾಲಕ್ಕೆ ಮಳೆಯಾಗದಿರುವುದು ಹಾಗೂ ನೀರಾವರಿ ಆಶ್ರಿತ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿರಲಿಲ್ಲ. ಜತೆಗೆ ಸಾಲಗಾರರು ಬೆನ್ನಿಗೆ ಬಿದ್ದಿದ್ದರು. ಇದರಿಂದ ನೊಂದು ನಿನ್ನೆ ಸೋಮವಾರ ರಾತ್ರಿ ಹೊಲದಲ್ಲಿ ಕ್ರಿಮಿನಾಶಕ ಸೇವನೆ ಮಾಡಿದ್ದ.

ಕೂಡಲೇ ತೀವ್ರ ಅಸ್ವಸ್ಥಗೊಂಡಿದ್ದ ಮಹೇಶನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕೂಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bengaluru Traffic : ಆಂಬ್ಯುಲೆನ್ಸ್‌ಗೆ NO ಟ್ರಾಫಿಕ್‌ ಕಿರಿಕ್‌; ಬರಲಿದೆ ದಾರಿ ತೋರುವ ಆ್ಯಪ್‌!

ಸಾಲಬಾಧೆಯಿಂದ ಕೋಡ್ರಿಗೆ ಗ್ರಾಮದಲ್ಲಿ ರೈತ ಆತ್ಮಹತ್ಯೆ

ರಿಪ್ಪನ್‌ಪೇಟೆ: ಸಾಲಬಾಧೆ ತಾಳಲಾರದೇ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಪಟ್ಟಣ ಸಮೀಪದ ಬಾಳೂರು ಗ್ರಾಪಂ ವ್ಯಾಪ್ತಿಯ ಕೋಡ್ರಿಗೆ ಗ್ರಾಮದಲ್ಲಿ ಜರುಗಿದೆ.

ಹಾಲುಗುಡ್ಡೆ ಗ್ರಾಮದ ಕೋಡ್ರಿಗೆ ನಿವಾಸಿ ಕೃಷ್ಣಮೂರ್ತಿ ಮೃತಪಟ್ಟ ರೈತ. ಕೃಷಿ ಕೆಲಸಕ್ಕಾಗಿ ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್‌ನಲ್ಲಿ ಸುಮಾರು ಎರಡೂವರೆ ಲಕ್ಷ ರೂಪಾಯಿ ಸಾಲ ಹಾಗೂ ಸ್ವ-ಸಹಾಯ ಸಂಘದಲ್ಲಿ 60 ಸಾವಿರ ರೂ. ಸಾಲ ಹಾಗೂ ಕೈಗಡವಾಗಿ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಸಾಲ ಮಾಡಿಕೊಂಡಿದ್ದರು.

ಭತ್ತ, ಕಬ್ಬು, ಮತ್ತು ಶುಂಠಿ ಹಾಗೂ ಅಡಿಕೆ ಬೆಳೆ ಬೆಳೆಯುತ್ತಿದ್ದು, ಈ ವರ್ಷ ಮಳೆ ಸರಿಯಾಗಿ ಬಾರದೇ ಬೆಳೆ ನಾಶವಾಗಿದೆ. ಕೃಷಿಗಾಗಿ ಮಾಡಿಕೊಂಡ ಸಾಲವನ್ನು ಈ ವರ್ಷ ಹೇಗೆ ತೀರಿಸುವುದು ಎಂದು ಚಿಂತಿತರಾಗಿದ್ದರು ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ. ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಲಿಕಟ್ಟಿ ಗ್ರಾಮದಲ್ಲಿ ರೈತ ಆತ್ಮಹತ್ಯೆ

ರಪನಹಳ್ಳಿ: ಕೃಷಿಗಾಗಿ ಮಾಡಿದ ಸಾಲ ತೀರಿಸಲು ಆಗದೆ ರೈತನೊಬ್ಬ (Farmer) ನೇಣು ಹಾಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಹರಪನಹಳ್ಳಿ ತಾಲ್ಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

ಕುದುರೆ ಹನುಮಂತಪ್ಪ (53) ಆತ್ಮಹತ್ಯೆಗೆ ಶರಣಾದ ರೈತ. ಮೃತ ಹನುಮಂತಪ್ಪ ಹಾರಕನಾಳು ವಿ.ಎಸ್.ಎಸ್ ಎನ್ ಹಾಗೂ ಇತರೆ ಬ್ಯಾಂಕುಗಳಲ್ಲಿ 2 ಲಕ್ಷ ರೂ ಹಾಗೂ ಕೈಗಡ 2 ಲಕ್ಷ ಹೀಗೆ ಒಟ್ಟು 4 ಲಕ್ಷ ರೂ. ಸಾಲ ಮಾಡಿದ್ದು, ಜಮೀನಿನಲ್ಲಿ ಬೆಳೆ ಬರದೆ ಸಾಲ ತೀರಿಸುವ ಕುರಿತು ಚಿಂತೆಗೀಡಾಗಿದ್ದ ಎಂದು ಹೇಳಲಾಗಿದೆ.

ಸಾಲ ತೀರಿಸಲು ಆಗದೆ ಮನನೊಂದು ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಮೃತ ಹನುಮಂತಪ್ಪಗೆ ಮೃತನಿಗೆ 4 ಪುತ್ರಿಯರು, ಓರ್ವ ಪುತ್ರನಿದ್ದಾನೆಂದು ತಿಳಿದುಬಂದಿದೆ. ಮೃತ ರೈತನ ಮನೆಗೆ ಬಿಜೆಪಿ ಮುಖಂಡ ಎಚ್.ಎಂ.ಮಲ್ಲಿಕಾರ್ಜುನ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಚಂದ್ರಪ್ಪ, ಮುಖಂಡರಾದ ವೈ.ಕೆ.ಬಿ.ದುರುಗಪ್ಪ, ಎಚ್.ವಸಂತಪ್ಪ. ಎಸ್.ಆರ್ ತಿಮ್ಮಣ್ಣ ಕೆ.ಅಶೋಕ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ದಸರಾ ಸಂಭ್ರಮ

Dasara 2024 : ಮೈಸೂರು ದಸರಾ ಉತ್ಸವದಲ್ಲಿ ಕಣ್ಮನ ಸೆಳೆಯುತ್ತಿದೆ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ

Dasara 2024 : ಮೈಸೂರು ದಸರಾ ಉತ್ಸವದಲ್ಲಿ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ ಗಮನ ಸೆಳೆಯುತ್ತಿದ್ದು, ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ.

VISTARANEWS.COM


on

By

dasara 2024
Koo

ಬೆಂಗಳೂರು: ವೈಭವದ ದಸರಾ ಉತ್ಸವ (Dasara 2024 ) ಜೋರಾಗಿದ್ದು, ಭಿನ್ನ-ವಿಭಿನ್ನ ರೀತಿಯಲ್ಲಿ ಗೊಂಬೆಗಳನ್ನು ಕೂರಿಸಿ ಜನರು ಸಂಭ್ರಮಿಸುತ್ತಿದ್ದಾರೆ. ಸದ್ಯ ಮೈಸೂರು ದಸರಾ ಉತ್ಸವದಲ್ಲಿ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನವು ಎಲ್ಲರ ಕಣ್ಮನ ಸೆಳೆಯುತ್ತಿದೆ.

ಕ್ರಿ. ಶ.12-14 ನೆಯ ಶತಮಾನದವರೆಗೆ ಪ್ರವರ್ಧಮಾನಕ್ಕೆ ಬಂದಿದ್ದ ಈ ಹೊಯ್ಸಳ ದೇವಾಲಯ ಶೈಲಿಯು, ಹೊಯ್ಸಳ ಸಾಮ್ರಾಜ್ಯದ ಪತನದೊಂದಿಗೆ ಲುಪ್ತವಾಗಿ ಹೋಯಿತು. ಹಾಗೂ ಸುಮಾರು 800 ವರ್ಷಗಳಿಂದೀಚೆಗೆ ಈ ಶೈಲಿಯಲ್ಲಿ ಯಾವುದೇ ದೇವಾಲಯವು ನಿರ್ಮಾಣವಾಗಿರುವುದು ಕಂಡು ಬಂದಿರುವುದಿಲ್ಲ.

ಪ್ರಸ್ತುತ ಆರ್ಕಿಟೆಕ್ಟ್ ಮೈತ್ರೇಯಿ ಎಂಬುವವರು 7 ಅಡಿ ಎತ್ತರದ ಹೊಯ್ಸಳ ದೇವಾಲಯದ ಮಾದರಿಯನ್ನು ಮರದಲ್ಲಿ ರಚಿಸುವ ವಿನಮ್ರ ಪ್ರಯತ್ನವನ್ನು ಮಾಡಿದ್ದಾರೆ. ಸದ್ಯಕ್ಕೆ 7’ಎತ್ತರ, 7’ಅಗಲ ಹಾಗೂ 7’ ಉದ್ದವಿರುವ ಗರ್ಭಗೃಹ ಮತ್ತು ಶುಕನಾಸಿಯ ಭಾಗದ ರಚನೆಯನ್ನು ಮಾಡಿದ್ದು, ನವರಂಗ ಮತ್ತು ಮಂಟಪಗಳನ್ನು ರಚಿಸಿ ಜೋಡಿಸಲಾಗುವುದು.

Hoysala temple model showcased at Mysuru Dasara festival
dasara 2024

ಮಾದರಿಯ ಪೂರ್ಣ ಹಂತದಲ್ಲಿ ಒಟ್ಟು 9’x 11’ ವಿಸ್ತೀರ್ಣವನ್ನು ಹೊಂದಿರುತ್ತದೆ. ಈ ಮಾದರಿಯನ್ನು ಶಿಲ್ಪಾಶಾಸ್ತ್ರದ ಅಳತೆಗಳಿಗೆ ಅನುಗುಣವಾಗಿ ನಿರ್ಮಿಸಲಾಗಿರುತ್ತದೆ. ಪ್ರಸ್ತುತ ಮೈಸೂರು ದಸರಾ ಉತ್ಸವದ ಪ್ರದರ್ಶನದಲ್ಲಿ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗಿದೆ.

ಭಾರತೀಯ ಪರಂಪರೆಯು ಅನಾದಿ ಕಾಲದಿಂದಲೂ ಆಧ್ಯಾತ್ಮಿಕ, ತತ್ವಶಾಸ್ತ್ರ, ವೈಚಾರಿಕತೆ, ನಂಬಿಕೆ, ಶ್ರದ್ಧೆಗಳನ್ನೊಳಗೊಂಡ ಸಂಸ್ಕೃತಿಯೆಂಬ ಮೂಲಸ್ತೋತ್ರದಿಂದ ಹರಿದುಬಂದಿದೆ. ಭಾರತೀಯ ಸಂಸ್ಕೃತಿಯ ಭಾಗವಾಗಿ ಬೆಳೆದ ಶಿಲ್ಪ ಶಾಸ್ತ್ರಗಳ, ಆಗಮಗಳ ಆಧಾರದಲ್ಲಿ ಹಲವು ಪೂಜಾ ಪದ್ಧತಿಗಳು ಹಾಗೂ ದೇವಾಲಯ ವಾಸ್ತುಶಿಲ್ಪಗಳು ವಿವಿಧ ಆಯಮಗಳಲ್ಲಿ ಮೂರ್ತಗೊಂಡವು.

ಅವು ಕ್ರಿ. ಶ.ಆರನೆಯ ಶತಮಾನದ ನಂತರ ಶಿಲಾ ಮಾಧ್ಯಮದಲ್ಲಿ ಭಾರತದ ವಿವಿಧ ಪ್ರಾಂತ್ಯಗಳಲ್ಲಿ ವಿವಿಧ ಶೈಲಿಯಲ್ಲಿ ನಿರ್ಮಾಣಗೊಂಡವು. ಕರ್ನಾಟಕದಲ್ಲಿ ಚಾಲುಕ್ಯ, ರಾಷ್ಟ್ರಕೂಟ ಹಾಗೂ ಹೊಯ್ಸಳರ ಕಾಲಘಟ್ಟದಲ್ಲಿ, ಅಂದರೆ ಕ್ರಿ. ಶ. 6-14 ನೇ ಶತಮಾನದವರೆಗೆ ಸುಮಾರು 800 ವರ್ಷಗಳಲ್ಲಿ ವೇಸರ ಅಥವಾ ಕರ್ಣಾಟ ದ್ರಾವಿಡ ಎಂದು ಕರೆಯಲ್ಪಡುವ ಒಂದು ವಿಶಿಷ್ಟ ಶೈಲಿಯುಲ್ಲಿ ದೇವಾಲಯ ಶಿಲ್ಪವು ವಿಕಸಿತಗೊಂಡಿತು.

dasara 2024
dasara 2024

ಹೊಯ್ಸಳರ ಕಾಲದಲ್ಲಿ (11 ರಿಂದ 14 ನೇ ಶತಮಾನ) ಈ ಶೈಲಿಯುಲ್ಲಿ ರಚಿತಗೊಂಡ ದೇವಾಲಯಗಳು ತಮ್ಮ ವಿನ್ಯಾಸ, ಆಕಾರ, ಅಲಂಕರಣ ಮತ್ತು ಕಲಾ ನೈಪುಣ್ಯತೆದಲ್ಲಿ ಪರಾಕಷ್ಟೆಯನ್ನು ತಲುಪಿದ್ದು ಹೊಯ್ಸಳ ದೇವಾಲಯಗಳೆಂದು ಪ್ರಸಿದ್ಧವಾಗಿದೆ. ಈ ಕಾಲಘಟ್ಟದಲ್ಲಿ ಹಲವು ಚಿಕ್ಕ ದೊಡ್ಡ ದೇವಾಲಯಗಳು ನಿರ್ಮಾಣಗೊಂಡಿದ್ದು, ಬೇಲೂರಿನ ಚೆನ್ನಕೇಶ್ವರ, ಹಳೆಬೀಡಿನ ಹೊಯ್ಸಳೇಶ್ವರ, ಸೋಮನಾಥಪುರದ ಕೇಶವ ದೇವಾಲಯಗಳು ಜಗತ್ಪ್ರಸಿದ್ಧವಾಗಿವೆ.

ಕ್ರಿ. ಶ. 14 ನೆಯ ಶತಮಾನದಲ್ಲಿ ಹೊಯ್ಸಳ ಶೈಲಿಯಿ ಲುಪ್ತವಾಗಿದ್ದು, ಅಲ್ಲಿಂದ ಈಚೆಗೆ ಅಂದರೆ ಸುಮಾರು 700 ವರ್ಷಗಳಿಂದ ಯಾವುದೇ ದೇವಾಲಯವು ವೇಸರ ಅಥವಾ ಹೊಯ್ಸಳ ಶೈಲಿಯಲ್ಲಿ ನಿರ್ಮಾಣಗೊಂಡಿರುವುದಿಲ್ಲ. ಹೀಗಾಗಿ ಪ್ರಸ್ತುತ ಆಧುನಿಕ ಆಕರ ಗ್ರಂಥ ಹಾಗೂ ಪ್ರಾಚೀನ ಶಾಸ್ತ್ರ ಗ್ರಂಥಗಳ ಕೂಲಂಕುಷ ಅಧ್ಯಯನದೊಂದಿಗೆ ಹೊಯ್ಸಳ ದೇವಾಲಯಗಳ ತುಲನಾತ್ಮಕ ವಿಶ್ಲೇಷಣೆ ಮಾಡಿ, 7 ಅಡಿ ಎತ್ತರದ ಹೊಯ್ಸಳ ದೇವಾಲಯದ ಮಾದರಿ ನಿರ್ಮಾಣದ ಪ್ರಯತ್ನವನ್ನು ಮಾಡಲಾಗಿದೆ. ಸೀಮಿತ ಸಂಪನ್ಮೂಲ ಹಾಗೂ ಸಮಯದಲ್ಲಿ ಹೊಯ್ಸಳ ವಾಸ್ತು ಶೈಲಿಯ ಪ್ರಮುಖ ಅಂಶಗಳನ್ನು ಅಳವಡಿಸಿ ಮಹಾಗನಿ ಮರ ಮತ್ತು plywood ಬಳಸಿ ರಚಿಸಲಾಗಿದೆ.

ಹೊಯ್ಸಳ ದೇವಾಲಯಗಳಲ್ಲಿ ಪ್ರಮುಖವಾಗಿ ನಾಲ್ಕು ಭಾಗಗಳಿವೆ. (1)ಗರ್ಭಗೃಹ (2)ಶುಕನಾಸಿ (3)ನವರಂಗ ; (4)ಮಂಟಪ ಹಾಗೂ ಹಲವು ಬಾರಿ 2, 3, 4 ಅಥವಾ 5 ಗರ್ಭಗೃಹಗಳನ್ನು ಹೊಂದಿರುತ್ತದೆ. ಆಗ ಅವುಗಳನ್ನು ದ್ವಿಕೂಟ, ತ್ರಿಕೂಟ, ಚತುಷಕೂಟ, ಪಂಚಕೂಟ ಎಂದು ಕ್ರಮವಾಗಿ ಕರೆಯುತ್ತಾರೆ. ಸಾಧಾರಣವಾಗಿ ಗರ್ಭಗೃಹ ಚೌಕ ಅಥವಾ ನಕ್ಷತ್ರಕಾರದ ತಲ ವಿನ್ಯಾಸವನ್ನು ಹೊಂದಿರುತ್ತದೆ. ಚೌಕ ವಿನ್ಯಾಸವು ಹಿಂಬಣೆ, ಮುಂಬಣೆಗಳನ್ನು ಹೊಂದಿದ್ದು ವಿಪುಲ ಅಲಂಕಾರಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಒಟ್ಟಾಗಿ ವಿನ್ಯಾಸ ಮತ್ತು ಯೋಜನೆಯಲ್ಲಿ ಸಂಕೀರ್ಣವಾಗಿದ್ದು ಆಕರ್ಷಕವಾಗಿ ಮೂಡಿ ಬಂದಿರುತ್ತದೆ.

ಇದರ ಊರ್ಧ್ವಚ್ಛಂದದಲ್ಲಿ (Elevation) ಕೆಲವು ವರಗಗಳನ್ನು ಹೀಗೆ ಗುರುತಿಸಬಹುದು
⦁ ಜಗತಿ; ದೇವೇಲಾಯಗಳು ಎತ್ತರದ ಜಗತಿಯ ಮೇಲೆ ನಿಂತಿರುತ್ತವೆ. ಇದು ಪ್ರದಕ್ಷಿಣ ಪಥವಾಗಿ ಬಳಸಲ್ಪಡುತ್ತದೆ.
⦁ ಪೀಠ; ಜಗತಿಯ ಮೇಲೆ ಅಡ್ಡ ಪಟ್ಟಿಕೆಗಳ ಅಲಂಕರಣವುಳ್ಳ ಪೀಠವಿರುತ್ತದೆ.
⦁ ಜಂಘ; ಪೀಠದ ಮೇಲೆಯಿರುವ ಗೋಡೆಯನ್ನು ಜಂಘ ಎಂದು ಕರೆಯುತ್ತಾರೆ. ಕೂಟಛಾದ್ಯ ಎಂಬ ಮುಂಚಾಚು ಗೋಡೆಯನ್ನು ಜಂಘ ಮತ್ತು ಉಪರಿ ಜಂಘ ಎಂದು ವಿಂಗಡಿಸುತ್ತದೆ. ಜಂಘವು ಮೂರ್ತಿ ಶಿಲ್ಪದಿಂದಲೂ ಉಪರಿ ಜಂಘವು ಪಂಜರಗಳಿಂದ ಅಲಂಕೃತಗೊಂಡಿರುತ್ತದೆ.
⦁ ಛಾದ್ಯ; ವಿಶಾಲವಾದ ಮುಂಚಾಚು ಇರುವ ಸ್ತರ. ಇದು ಜಂಘ ಮತ್ತು ಶಿಖರವನ್ನು ವಿಂಗಡಿಸುತ್ತದೆ.
⦁ ಶಿಖರ; ಛಾದ್ಯದ ಮೇಲಿನ ಶಿಖರವು ಹಲವು ಅಂತಸ್ತು ಅಥವಾ ಭೂಮಿಗಳನ್ನು ಹೊಂದಿರುತ್ತದೆ. ಇಲ್ಲಿಯ ವಿಶೇಷ ಅಲಂಕಾರಣವು ಅಂತಸ್ತುಗಳನ್ನು ಗುರುತಿಸುವ ರೇಖೆಗಳನ್ನು ಮುಚ್ಚಿತ್ತವೆ.
⦁ ಕಂಠ/ಗಲ; ಶಿಖರ ಮತ್ತು ಘಂಟಾ ರಚನೆಯ ನಡುವೆ ಕಿರದಾದ ಕಂಠ ಅಥವಾ ಗಲ ಎಂಬ ವರ್ಗವಿರುತ್ತದೆ.
⦁ ಘಂಟಾ; ಶಿಖರದ ಮೇಲೆ ಘಂಟಾ ರಚನೆಯಿದ್ದು ಅದರ ಮೇಲ್ತುದಿಯಲ್ಲಿ ಅತಿ ಸುಂದರವಾದ ಕಲ್ಲಿನ ಕಲಶವಿರುತ್ತದೆ.
⦁ ಕಲಶ
ಹೀಗೆ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ಕ್ರಮಭದ್ದವಾದ ಅಲಂಕರಣ, ಅಂಗಾಂಗ ಪ್ರಮಾಣ, ಬೇರೆ ಬೇರೆ ಭಾಗಗಳಲ್ಲಿರುವ ಸಂತುಲನ, ಯೋಜನಬದ್ದವಾದ ವಿನ್ಯಾಸಗಳಿಂದ ಹೊಯ್ಸಳ ದೇವಾಲಯವು ಅತ್ಯದ್ಭುತ ಸೌಂದರ್ಯದ ಆಗರವಾಗಿ ರೂಪಿತಗೊಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ; ಫೈನಲ್‌ ಮ್ಯಾಚ್‌ ಗೆದ್ದ ಕೊಲ್ಕತ್ತಾ ರೀಜನ್‌ ಶಾಲೆ ಮಕ್ಕಳು

ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂ ಎಫ್‌ನಲ್ಲಿ 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ 2024-25ರ (KVS Sports Meet) ಮುಕ್ತಾಯಗೊಂಡಿದೆ. ಬಾಲಕರ ರೋಚಕ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ರೀಜನ್‌ ಶಾಲೆ ಮಕ್ಕಳು ಮೊದಲ ಸ್ಥಾನ ಗಳಿಸಿದ್ದಾರೆ.

VISTARANEWS.COM


on

By

53rd KVS National Games Kolkata Region School children win final match
Koo

ಬೆಂಗಳೂರು: ಬೆಂಗಳೂರಿನ ಯಲಹಂಕ ಕೇಂದ್ರೀಯ ವಿದ್ಯಾಲಯದಲ್ಲಿ ಸೆ. 30 ರಿಂದ ಅ. 6 ರವರೆಗೆ 53ನೇ ರಾಷ್ಟ್ರೀಯ ಕ್ರೀಡಾಕೂಟ ನಡೆಸಲಾಯಿತು. ಕ್ರೀಡೆಯಲ್ಲಿ ಹಲವಾರು ಆಟಗಳಿವೆ. ಅದರಲ್ಲಿ ಕ್ರಿಕೆಟ್ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ದೇಶದ ನಾನಾ ರಾಜ್ಯಗಳಿಂದ ಅಂದರೆ ಒಟ್ಟು 18 ರಾಜ್ಯಗಳಿಂದ ಮಕ್ಕಳು ಕ್ರಿಕೆಟ್ ಆಡಲು ಕೆ .ವಿ .ಆರ್ ಡಬ್ಲ್ಯೂ ಎಫ್‌ಗೆ ಬಂದಿದ್ದರು. ಒಟ್ಟು 269 ಶಾಲೆಯ ಮಕ್ಕಳು ನಾಲ್ಕು ವಿವಿಧ ಆಟದ ಮೈದಾನದಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ಪ್ರದರ್ಶಿಸಿದರು. ಅ.6 ರಂದು ಫೈನಲ್ ಮ್ಯಾಚ್‌ ನಡೆಸಲಾಯಿತು.

ಪ್ರಥಮ ಸ್ಥಾನವನ್ನು ಕೊಲ್ಕತ್ತಾ ರೀಜನ್ ಶಾಲೆ ಮಕ್ಕಳು ಮತ್ತು ದ್ವಿತೀಯ ಸ್ಥಾನವನ್ನು ಜಬಲ್ ಪುರ್ ರೀಜನ್ ಶಾಲೆ ಮಕ್ಕಳು ಗಳಿಸಿಕೊಂಡರು. ನಂತರ ಶಾಲೆ ಆವರಣದಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ ಪಿ. ದೇವಕುಮಾರ್(ಜಂಟಿ ಆಯುಕ್ತ ಕೆ ವಿ ಎಸ್ ಪ್ರಧಾನ ಕಛೇರಿ) ಹಾಗೂ ವಿಶೇಷ ಅತಿಥಿಗಳಾಗಿ ಧರ್ಮೇಂದ್ರ ಪಟ್ಲೆ. (ಉಪ ಆಯುಕ್ತ ಕೆ ವಿ ಎಸ್ ಬೆಂಗಳೂರು), ಆರ್ ಪ್ರಮೋದ್.(ಸಹಾಯಕ ಆಯುಕ್ತ ಕೆ ವಿ ಎಸ್ ಬೆಂಗಳೂರು), ಹೇಮಾ ಕೆ( ಸಹಾಯಕ ಆಯುಕ್ತ ) ಆಗಮಿಸಿದ್ದರು.

ಅತಿಥಿಗಳಿಗೆ ಶಾಲೆಯ ವರ್ಣ ರಂಜಿತಾ NCC ಬ್ಯಾಂಡ್ ತಂಡದ ಮಕ್ಕಳು ಸ್ವಾಗತ ಕೋರಿದರು. ಗಾಯನ ತಂಡದಿಂದ ಸ್ವಾಗತ ಗಾಯನವನ್ನು ಹಾಡಿದರು ನಂತರ ಸ್ವಾಗತ ಭಾಷಣವನ್ನು ಧರ್ಮೇಂದ್ರ ಪಟ್ಲೆ ಮಾಡಿದರು. ನೃತ್ಯ ತಂಡದಿಂದ ಮಕ್ಕಳು ಸ್ವಾಗತ ನೃತ್ಯವನ್ನು ಮಾಡಿದರು.

Continue Reading

ಬೆಂಗಳೂರು

Food Poisoning : ಬೆಂಗಳೂರಿನಲ್ಲಿ ಕೇಕ್ ತಿಂದು 5 ವರ್ಷದ ಮಗು ಸಾವು; ದಂಪತಿ ಸ್ಥಿತಿ ಗಂಭೀರ

Food Poisoning : ಬೆಂಗಳೂರಿನಲ್ಲಿ ಕೇಕ್ ತಿಂದು 5 ವರ್ಷದ ಮಗು ಮೃತಪಟ್ಟಿದೆ. ಮಗುವಿನ ಜತೆಗೆ ತಂದೆ-ತಾಯಿ ಕೂಡ ಕೇಕ್‌ ತಿಂದು ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದಾರೆ. ದಂಪತಿ ಸ್ಥಿತಿ ಕೂಡ ಚಿಂತಾಜನಕವಾಗಿದೆ.

VISTARANEWS.COM


on

By

5-year-old boy dies after eating cake in Bengaluru Couple's condition critical
Koo

ಬೆಂಗಳೂರಿನ ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಕೇಕ್‌ ತಿಂದು ಒಂದೇ ಕುಟುಂಬದ ಮೂವರು (Food Poisoning) ಅಸ್ವಸ್ಥಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಧೀರಜ್ (5) ಎಂಬ ಮಗು ಸಾವನ್ನಪ್ಪಿದೆ. ತಂದೆ ಬಾಲರಾಜ್, ತಾಯಿ ನಾಗಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಲರಾಜ್‌ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಮಗನಿಗಾಗಿ ಮನೆಗೆ ಕೇಕ್‌ ತೆಗೆದು ಕೊಂಡು ಹೋಗಿದ್ದರು. ಮನೆಯಲ್ಲಿ ಪತ್ನಿ ಮತ್ತು ಮಗುವಿನ ಜತೆ ಸೇರಿ ಮೂವರು ಕೇಕ್ ತಿಂದಿದ್ದರು. ಕೇಕ್ ತಿಂದ ನಂತರ ಮೂವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.

ಕೂಡಲೇ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತಿತ್ತು. ಆದರೆ ಧೀರಜ್‌ ತೀವ್ರ ಅಸ್ವಸ್ಥಗೊಂಡಿದ್ದರಿಂದ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಬಾಲರಾಜ್ , ನಾಗಲಕ್ಷ್ಮಿ ದಂಪತಿ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೆಪಿ ಅಗ್ರಹಾರ ಠಾಣೆ ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೇಕ್ ತಂದಿದ್ದು ಯಾವ ಬೇಕರಿಯಿಂದ? ಕೇಕ್‌ನಲ್ಲಿರೋ ಅಂಶಗಳಿಂದ ಅಸ್ವಸ್ಥರಾಗಿದ್ದಾರಾ ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಪುಡ್ ಪಾಯನ್ಸ್‌ನಿಂದ ಸಾವು ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ವೈದ್ಯರ ವರದಿಗಾಗಿ ಕಾಯುತ್ತಿದ್ದಾರೆ.

ಬಾಲಕ ಧೀರಜ್‌ ತಂದೆ ಬಾಲರಾಜ್‌ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ವ್ಯಕ್ತಿಯೊಬ್ಬರು ಕೇಕ್ ಆರ್ಡರ್ ಮಾಡಿ, ನಂತರ ಕ್ಯಾನ್ಸಲ್ ಮಾಡಿದ್ದರಂತೆ. ಹೀಗಾಗಿ ಬಾಲರಾಜ್‌ ಕೇಕ್ ಮನೆಗೆ ತಂದು ಕುಟುಂಬದೊಂದಿಗೆ ತಿಂದಿದ್ದಾರೆ. ನಂತರ ಮೂವರು ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡು ಧೀರಜ್‌ ಮೃತಪಟ್ಟಿದ್ದಾನೆ.
ಸದ್ಯ ಈ ಪ್ರಕರಣ ಹಲವು ಅನುಮಾನ ಮೂಡಿಸಿದೆ. ಕೇಕ್ ನಿಂದನೇ ಘಟನೆ ಸಂಭವಿಸಿದ್ಯಾ? ಅಥವಾ ಆತ್ಮಹತ್ಯೆಗೆ ಏನಾದರೂ ಪ್ರಯತ್ನ ಮಾಡಿದ್ರಾ? ಎಂಬ ಅನುಮಾನ ಇದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Electric shock : ರಸ್ತೆ ಬದಿ ನಿಂತಿದ್ದ ಮಹಿಳೆ ಮೇಲೆ ತುಂಡಾಗಿ ಬಿದ್ದ ವಿದ್ಯುತ್‌ ತಂತಿ; ಕ್ಷಣಾರ್ಧದಲ್ಲೆ ಸುಟ್ಟುಕರಕಲು

Electric shock : ರಸ್ತೆ ಬದಿ ನಿಂತಿದ್ದ ಮಹಿಳೆ ಮೇಲೆ ತುಂಡಾಗಿ ವಿದ್ಯುತ್‌ ತಂತಿ ಬಿದ್ದಿದ್ದು, ಕ್ಷಣಾರ್ಧದಲ್ಲೆ ಸುಟ್ಟುಕರಕಲಾಗಿದ್ದಾರೆ.

VISTARANEWS.COM


on

By

An electric wire fell on the woman Death due to electric shock
Koo

ಬೆಂಗಳೂರು: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆಯೊಬ್ಬರು (Electric shock) ಬಲಿಯಾಗಿದ್ದಾರೆ. ನೆಲಮಂಗಲ ಶಾಸಕ ಶ್ರೀನಿವಾಸ್ ಅವರ ಮನೆ ಸಮೀಪವೇ ಈ ದುರ್ಘಟನೆ ನಡೆದಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕನಹಳ್ಳಿ ಬಳಿ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿದ್ದು ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಮಂಜಮ್ಮ (55) ಮೃತ ದುರ್ದೈವಿ.

ಮಂಜಮ್ಮ ಹಾಗೂ ಮತ್ತಿಬ್ಬರು ಮಹಿಳೆಯರು ಸೇರಿ ರಸ್ತೆ ಬದಿ ನಿಂತು ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ಹೈಟೆನ್ಷನ್‌ ವೈರ್‌ ಮಂಜಮ್ಮ ಮೇಲೆ ಬಿದ್ದಿದೆ. ಅಷ್ಟೇ ಏಕಾಏಕಿ ಬೆಂಕಿ ಕಿಡಿ ಹೊತ್ತುಕೊಂಡಿದ್ದು, ಕ್ಷಣಾರ್ಧದಲ್ಲೇ ಕರೆಂಟ್‌ ಶಾಕ್‌ ಹೊಡೆದಿದೆ. ಈ ವೇಳೆ ಮಂಜಮ್ಮ ಕೆಳಗೆ ಬಿದ್ದಿದ್ದು, ಬೆಂಕಿಯು ಹೊತ್ತಿ ಉರಿದಿದೆ. ಜತೆಗೆ ಇದ್ದ ಮಹಿಳೆಯು ಮಂಜಮ್ಮರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅವರಿಗೂ ಕರೆಂಟ್‌ ಶಾಕ್‌ ಹೊಡೆದಿದೆ. ಕೂಡಲೇ ಅಕ್ಕ-ಪಕ್ಕದ ಜನರು ಓಡಿ ಬಂದಿದ್ದು, ಮಹಿಳೆಯನ್ನು ಎಳೆದುಕೊಂಡು ರಕ್ಷಿಸಿದ್ದಾರೆ.

ಬಳಿಕ ನೋಡುನೋಡುತ್ತಿದ್ದಂತೆ ಮಂಜಮ್ಮ ಬೆಂಕಿಯಿಂದ ಸುಟ್ಟುಹೋಗಿದ್ದಾರೆ. ಇನ್ನು ಇದೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕೇಕ್ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥ

ಬೆಂಗಳೂರಿನ ಕೆ.ಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಕ್‌ ತಿಂದು ಒಂದೇ ಕುಟುಂಬದ ಮೂವರು ಅಸ್ವಸ್ಥಗೊಂಡಿದ್ದಾರೆ. ತಂದೆ, ತಾಯಿ ಸೇರಿ ಮಗು ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮನೆಗೆ ಕೇಕ್‌ ತೆಗೆದು ಕೊಂಡು ಹೋಗಿದ್ದರು. ಮನೆಯಲ್ಲಿ ಪತ್ನಿ ಮತ್ತು ಮಗುವಿನ ಜತೆ ಸೇರಿ ಕೇಕ್ ತಿಂದಿದ್ದರು. ಕೇಕ್ ತಿಂದ ನಂತರ ಮೂವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ.

ಕೂಡಲೇ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಪಿ ಅಗ್ರಹಾರ ಠಾಣೆ ಪೊಲೀಸರಿಂದ ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕೇಕ್ ತಂದಿದ್ದು ಯಾವ ಬೇಕರಿಯಿಂದ? ಕೇಕ್‌ನಲ್ಲಿರೋ ಅಂಶಗಳಿಂದ ಅಸ್ವಸ್ಥರಾಗಿದ್ದಾರಾ ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ವೈದ್ಯರ ವರದಿಗಾಗಿ ಕಾಯುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
dasara 2024
ದಸರಾ ಸಂಭ್ರಮ12 ಗಂಟೆಗಳು ago

Dasara 2024 : ಮೈಸೂರು ದಸರಾ ಉತ್ಸವದಲ್ಲಿ ಕಣ್ಮನ ಸೆಳೆಯುತ್ತಿದೆ ಹೊಯ್ಸಳ ದೇವಾಲಯದ ಮಾದರಿ ಪ್ರದರ್ಶನ

53rd KVS National Games Kolkata Region School children win final match
ಬೆಂಗಳೂರು12 ಗಂಟೆಗಳು ago

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ; ಫೈನಲ್‌ ಮ್ಯಾಚ್‌ ಗೆದ್ದ ಕೊಲ್ಕತ್ತಾ ರೀಜನ್‌ ಶಾಲೆ ಮಕ್ಕಳು

5-year-old boy dies after eating cake in Bengaluru Couple's condition critical
ಬೆಂಗಳೂರು13 ಗಂಟೆಗಳು ago

Food Poisoning : ಬೆಂಗಳೂರಿನಲ್ಲಿ ಕೇಕ್ ತಿಂದು 5 ವರ್ಷದ ಮಗು ಸಾವು; ದಂಪತಿ ಸ್ಥಿತಿ ಗಂಭೀರ

An electric wire fell on the woman Death due to electric shock
ಬೆಂಗಳೂರು13 ಗಂಟೆಗಳು ago

Electric shock : ರಸ್ತೆ ಬದಿ ನಿಂತಿದ್ದ ಮಹಿಳೆ ಮೇಲೆ ತುಂಡಾಗಿ ಬಿದ್ದ ವಿದ್ಯುತ್‌ ತಂತಿ; ಕ್ಷಣಾರ್ಧದಲ್ಲೆ ಸುಟ್ಟುಕರಕಲು

Actor darshan
ಬೆಂಗಳೂರು15 ಗಂಟೆಗಳು ago

Actor Darshan : ರೇಣುಕಾಸ್ವಾಮಿ ಫೋಟೊಗಳು ನೈಜವಲ್ಲ!ಮತ್ತೆ ಎಫ್‌ಎಸ್‌ಎಲ್ ಮೊರೆ ಹೋದ ಖಾಕಿ ಪಡೆ

Bomb threat e-mails a headache for Bengaluru police
ಬೆಂಗಳೂರು16 ಗಂಟೆಗಳು ago

Bomb Threat : ಬೆಂಗಳೂರು ಪೊಲೀಸರಿಗೆ ತಲೆನೋವು ತಂದ ಬಾಂಬ್ ಬೆದರಿಕೆ‌ E-Mails

Road Accident
ಬಾಗಲಕೋಟೆ17 ಗಂಟೆಗಳು ago

Road Accident : ಬೈಕ್‌ ಸವಾರನ ಮುಖಕ್ಕೆ ಟ್ರ್ಯಾಕ್ಟರ್‌ ಬಡಿದು ಸಾವು;‌ ಪಾದಚಾರಿಗೆ ಡಿಕ್ಕಿ ಹೊಡೆದ ಚಿಗರಿ ಬಸ್

Self harming
ದಕ್ಷಿಣ ಕನ್ನಡ17 ಗಂಟೆಗಳು ago

Self Harming: ಮಾಜಿ ಶಾಸಕ‌ ಮೊಯ್ದೀನ್ ಬಾವಾ ಸಹೋದರನ ಮೃತದೇಹ ಪತ್ತೆ; ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದವರ ವಿರುದ್ಧ ಎಫ್‌ಐಆರ್‌

Assault Case
ಬೆಂಗಳೂರು18 ಗಂಟೆಗಳು ago

Assault Case : ಜಸ್ಟ್‌ 20 ರೂಪಾಯಿಗೆ ನಡೆಯಿತು ಕೊಲೆ ಯತ್ನ; ಬಾರ್‌ ಕ್ಯಾಶಿಯರ್‌ಗೆ ಥಳಿಸಿದವರು ಅರೆಸ್ಟ್‌

Actor Darshan
ಬೆಂಗಳೂರು19 ಗಂಟೆಗಳು ago

Actor Darshan : ದರ್ಶನ್‌ ಬೇಲ್‌ ಭವಿಷ್ಯ! ಹೈದರಾಬಾದ್ CFSLನಲ್ಲೇ ಇರುವ ನಟನ ಐಫೋನ್‌ನಲ್ಲಿ ಅಡಗಿದ್ಯಾ ಸತ್ಯ?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ4 ದಿನಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌