Site icon Vistara News

Labourer death : ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ದುರ್ಮರಣ

Mannu kusitha death

ಬೆಂಗಳೂರು: ಕಟ್ಟಡ ಕಾಮಗಾರಿ (Mud Collapse) ವೇಳೆ ಮಣ್ಣು ಕುಸಿದು ಕಾರ್ಮಿಕನೊಬ್ಬ ಮೃತಪಟ್ಟ (Labourer death) ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಬ್ಬರು ಕಾರ್ಮಿಕರು ಮಣ್ಣಿನ ಅಡಿಯಲ್ಲಿ ಸಿಲುಕಿದ್ದು, ಒಬ್ಬ ಮೃತಪಟ್ಟರೆ, ಇನ್ನೊಬ್ಬನನ್ನು ಜೀವಂತವಾಗಿ ರಕ್ಷಿಸಲಾಗಿದೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಗುಂಟೆಪಾಳ್ಯದಲ್ಲಿ ಮನೆ‌ ನಿರ್ಮಾಣಕ್ಕೆ‌ ಕಾಮಗಾರಿ ನಡೆಸುತ್ತಿರುವ ವೇಳೆ ಈ ದುರಂತ ನಡೆದಿದೆ. ಮಾರ್ಗದ ಬದಿಯ ದೊಡ್ಡ ಸೈಟಿನಲ್ಲಿ ಕಟ್ಟಡ ಕಾಮಗಾರಿ ನಡೆಸಲಾಗುತ್ತಿದೆ. ಇದಕ್ಕಾಗಿ ಸೆಲ್ಲರ್‌ ತೆಗೆಯಲು ಆಳ ಗುಂಡಿ ಮಾಡುತ್ತಿದ್ದಾಗ ಇಬ್ಬರು ಕಾರ್ಮಿಕರ ಮೇಲೆ ಮಣ್ಣು ಕುಸಿದು ಬಿದ್ದಿದೆ.

ಜೆಸಿಬಿಯಲ್ಲಿ ಮಣ್ಣು ತೆಗೆಯುತ್ತಿದ್ದಾಗ ಗುಂಡಿಯ ಪಕ್ಕದ ಮಣ್ಣು ಜಾರಿ ಬಿದ್ದಿದೆ. ಮಣ್ಣಿನೊಂದಿಗೆ ಇಬ್ಬರು ಕಾರ್ಮಿಕರು ಕೂಡಾ ಗುಂಡಿಯೊಳಗೆ ಬಿದ್ದಿದ್ದಾರೆ. ಅವರ ಮೇಲೆ ಮಣ್ಣು ಬಿದ್ದಿದೆ. ಕೂಡಲೇ ಒಬ್ಬ ಕಾರ್ಮಿಕನನ್ನು ರಕ್ಷಿಸಿ ಮೇಲೆ ಎತ್ತಲಾಯಿತು. ತಕ್ಷಣವೇ ಮತ್ತೊಬ್ಬರನ್ನು ಮಣ್ಣಿನ ಒಳಗಿನಿಂದ ಹೊರ ತೆಗೆಯುವ ಕಾರ್ಯಾಚರಣೆ ಆರಂಭಗೊಂಡಿದೆ. ಆದರೆ, ಮಣ್ಣು ಮತ್ತೆ ಕುಸಿದು ಆ ವ್ಯಕ್ತಿ ಪೂರ್ಣ ಪ್ರಮಾಣದಲ್ಲಿ ಸಮಾಧಿಯಾದರು. ಹೀಗಾಗಿ ಮಣ್ಣೊಳಗೆ ಸಿಲುಕಿದ ಕಾರ್ಮಿಕ ಉಸಿರುಗಟ್ಟಿ ಸಾವು ಕಂಡಿದ್ದಾರೆ. ವಿಷಯ ತಿಳಿದು ಸುದ್ದಗುಂಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮೃತ ಕಾರ್ಮಿಕನನ್ನು ಬಿಹಾರದ ಸೋಮ್ ಪುರ್ ಮೂಲದ ರಂಜನ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: KC Cariappa : ಮಾಜಿ ಪ್ರೇಯಸಿಯ ವಿರುದ್ಧ ಬೆದರಿಕೆ ದೂರು ನೀಡಿದ ಕ್ರಿಕೆಟಿಗ ಕೆ. ಸಿ ಕಾರಿಯಪ್ಪ

ಎಣ್ಣೆ ವಿಷ್ಯ; ತಲೆ ಮೇಲೆ ಕಲ್ಲು ಹೊತ್ತು ಹಾಕಿ ನಿವೃತ್ತ ಎಎಸ್‌ಐ ಪುತ್ರನ ಕೊಲೆ

ರಾಮನಗರ: ಕುಡಿತದ ಕಾರಣಕ್ಕಾಗಿ (liquor Party) ನಿತ್ಯವೂ ಹತ್ತಾರು ಕೊಲೆಗಳು (Murder Case) ಸಂಭವಿಸುತ್ತಿವೆ. ಕುಡಿತದ ಮತ್ತಿನಲ್ಲಿ ಕೊಲೆ ಮಾಡುವುದು, ಕುಡಿಯುವುದಕ್ಕಾಗಿ ಕರೆದುಕೊಂಡು ಹೋಗಿ ಕೊಲೆ ಮಾಡುವುದು, ಕುಡಿಸಿ ಕೊಲೆ ಮಾಡುವುದು, ಮದ್ಯ ಸೇವನೆ ಮಾಡಿಲ್ಲ ಎಂದು ಕೊಲ್ಲುವುದು.. ಹೀಗೆ ಹಲವಾರು ಅನಾಹುತಗಳು ನಡೆಯುತ್ತಿವೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಲ್ಕೆರೆ ದೊಡ್ಡಿ ಗ್ರಾಮದಲ್ಲಿ ಎಎಸ್‌ಐ ‌ಒಬ್ಬರ ಪುತ್ರನನ್ನು (Son of Retired ASI Killed) ಇದೇ ರೀತಿ ಕೊಲೆ ಮಾಡಲಾಗಿದೆ.

ನಿವೃತ್ತ ಎಎಸ್ಐ ಮಗನಾಗಿರುವ ಬೆಂಗಳೂರು ಮೂಲದ ದೀಪಕ್‌ (23) ಎಂಬಾತನನ್ನು ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಈ ಕೊಲೆಯನ್ನು ಮಾಡಿದ ಆರೋಪಿ ಪ್ರಸಾದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ದೀಪಕ್‌ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ನಿವಾಸಿ. ಆತ ಕನಕಪುರ ತಾಲೂಕಿನ ಕಲ್ಕೆರೆ ದೊಡ್ಡಿ ಗ್ರಾಮಕ್ಕೆ ಹೋಗಿದ್ದ. ಅಲ್ಲಿ ಪ್ರಸಾದ್‌ನನ್ನು ಭೇಟಿಯಾಗಿದ್ದ. ಅವರಿಬ್ಬರು ಅಲ್ಲಿನ ಶೆಡ್‌ ಒಂದರಲ್ಲಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ನಡುವೆ ಅವರ ಮಧ್ಯೆ ಜಗಳವಾಗಿದೆ ಎಂದು ಹೇಳಲಾಗಿದೆ. ಕುಡಿತದ ಮತ್ತಿನಲ್ಲಿ ರಾತ್ರಿ ಶೆಡ್‌ನಲ್ಲೇ ಮಲಗಿದ್ದ ದೀಪಕ್‌ನ ತಲೆ ಮೇಲೆ ಪ್ರಸಾದ್‌ ಕಲ್ಲು ಹೊತ್ತು ಹಾಕಿದ್ದಾನೆ. ಹೀಗಾಗಿ ದೀಪಕ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕನಕಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಸಾದ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯ ಹಿಂದಿನ ನಿಜವಾದ ಕಾರಣ ಇನ್ನಷ್ಟೇ ಬಯಲಾಗಬೇಕಾಗಿದೆ.

Exit mobile version