ಶಿವಮೊಗ್ಗ: ಸಿಗಂದೂರು ಸೇತುವೆ ಕಾಮಗಾರಿ ವೇಳೆ ಕೆಳಗೆ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಜಿಲ್ಲೆಯ ತುಮರಿ ಸಮೀಪ ನಡೆದಿದೆ. ಕಾಮಗಾರಿ ವೇಳೆ ಮೂರ್ಛೆ ಬಂದಿದ್ದರಿಂದ ಕಾರ್ಮಿಕ ಕೆಳಗೆ ಬಿದ್ದು ಗಾಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ದಿಲೀಪ್ ಬಿಲ್ಡ್ ಕಂಪನಿಯ ಕಾರ್ಮಿಕ, ಪಶ್ಚಿಮ ಬಂಗಾಳದ ರಬಿ ಉಲ್ ಇಸ್ಮಾಯಿಲ್ (42) ಮೃತ ವ್ಯಕ್ತಿ. ಸೇತುವೆ ಕಾಮಗಾರಿ ವೇಳೆ ಮೂರ್ಛೆ ಬಂದು ಕೆಳಗೆ ಬಿದ್ದ ಕಾರ್ಮಿಕನನ್ನು ಸಾಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಾರ್ಮಿಕ ಕೊನೆಯುಸಿರೆಳೆದಿದ್ದಾರೆ.
ಮೃತ ಕಾರ್ಮಿಕನ ಸಹೋದರ ತಾಜಿನ್ ಅಲಿ, ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ | Exam Scam: ಪ್ರಶ್ನೆ ಪತ್ರಿಕೆ ಲೀಕ್ ಮಾಡಿದವರ ಬಗ್ಗೆ ತುಟಿ ಬಿಚ್ಚದ ಆರ್.ಡಿ. ಪಾಟೀಲ್
ಯಮನಂತೆ ಬಂದ ಟಿಪ್ಪರ್‌ಗೆ ಮಹಿಳೆ ಬಲಿ! ಸವಾರ ಗಂಭೀರ
ಬಾಗಲಕೊಟೆ: ಇಲ್ಲಿನ ಸೀಮಿಕೇರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬೈಕ್ ಹಿಂಬದಿಗೆ ಟಿಪ್ಪರ್ ವಾಹನ (Road Accident) ಡಿಕ್ಕಿಯಾಗಿದೆ. ಸ್ಥಳದಲ್ಲೇ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ತಬಶುಮ್ ಅತ್ತಾರ್ ಮೃತ ದುರ್ದೈವಿ.
ಗಲಗಲಿ ಮೂಲದ ತಬಶುಮ್ ಅತ್ತಾರ್ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಿಂದ ನವನಗರಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಗದ್ದನಕೇರಿ ಗ್ರಾಮದಿಂದ ಬರುತ್ತಿದ್ದ ಟಿಪ್ಪರ್ ವಾಹನ ಒಮ್ಮೆಲೆ ಬೈಕ್‌ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ತಬಶುಮ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ.
ಸ್ಥಳದಲ್ಲಿ ಮೃತ ತಬಶುಬ್ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Murder Case : ಕೇವಲ 15 ನಿಮಿಷಕ್ಕೆ ನಾಲ್ವರನ್ನು ಬಲಿ ಪಡೆದ ಕೊಲೆಗಡುಕ
ಬೈಕ್ ವ್ಹೀಲಿಂಗ್ ಮಾಡಿದ ಯುವಕನ ಸೆರೆ
ರಾಮನಗರ: ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಯುವಕನ ಬಂಧಿಸಿ ಸೈಲೆನ್ಸರ್‌ನನ್ನು ಪೊಲೀಸರು ಧ್ವಂಸ ಮಾಡಿದ್ದಾರೆ. ವಸೀಂ (19) ಎಂಬಾತನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ತಾಲೂಕಿನ ಅಗಲಕೋಟೆ ಗ್ರಾಮದ ವಸೀಂ, ಕರ್ಕಶ ಶಬ್ಧ ಬರುವ ರೀತಿಯಲ್ಲಿ ಪಟ್ಟಣದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ. ಹೀಗಾಗಿ ಆತನಿಂದಲೇ ಬೈಕ್ ಸೈಲೆನ್ಸರ್ ಬಿಚ್ಚಿಸಿ ಕಲ್ಲಿನಿಂದ ಜಜ್ಜಿಸಿದ್ದಾರೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬೈಕ್ ಸೀಜ್ ಮಾಡಿದ್ದಾರೆ.
ವಾಕಿಂಗ್ ಹೋಗಿದ್ದ ಅಜ್ಜಿ-ಮೊಮ್ಮಗಳಿಗೆ ಕಾರು ಡಿಕ್ಕಿ
ಬೆಂಗಳೂರು: ಕಲ್ಯಾಣ ನಗರದ ಚಳ್ಳಿಕೆರೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಅಜ್ಜಿ ಮತ್ತು ಮೊಮ್ಮಗಳಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಶೀಲಾ (60) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊಮ್ಮಗಳಿಗೆ ಸಣ್ಣಪುಟ್ಟ ಗಾಯವಾಗಿದೆ.
ಅತಿವೇಗವಾಗಿ ಬಂದ ಕಾರು ಚಾಲಕ ಕುಮಾರ್ ಎಂಬಾತ ಮೊದಲಿಗೆ ಇಬ್ಬರಿಗೂ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಡಿಕ್ಕಿಯಾಗಿ ಕಾಂಪೌಂಡ್‌ಗೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಬಾಣಸವಾಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ