Site icon Vistara News

Compound Collapse: ಚರಂಡಿ ಕಾಮಗಾರಿ ವೇಳೆ ಮನೆ ಕಾಂಪೌಂಡ್ ಕುಸಿದು ಕಾರ್ಮಿಕ ಸಾವು, ಮತ್ತೊಬ್ಬನಿಗೆ ಗಾಯ

compound collapsed in surathkal

ಮಂಗಳೂರು: ಚರಂಡಿ ಕಾಮಗಾರಿ ವೇಳೆ ಮನೆ ಕಾಂಪೌಂಡ್ ಕುಸಿದು ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ (Compound Collapse) ಸುರತ್ಕಲ್ ಸಮೀಪದ ಕೃಷ್ಣಾಪುರದ ಕೆಇಬಿ ಬಳಿ ನಡೆದಿದೆ. ಬಜ್ಪೆ ಕರಂಬಾರು ನಿವಾಸಿ ಹನೀಫ್ (51) ಮೃತರು. ಮಣಿ ಗಾಯಾಳುವಾಗಿದ್ದಾರೆ.

ರಸ್ತೆ ಬದಿ ಚರಂಡಿ ಕಾಮಗಾರಿ ನಡೆಸುತ್ತಿದ್ದಾಗ ಪಕ್ಕದಲ್ಲಿದ್ದ ಮನೆ ತಡೆಗೋಡೆ ಏಕಾಏಕಿ ಕುಸಿದಿದೆ. ಈ ವೇಳೆ ಅಲ್ಲಿ ಗುತ್ತಿಗೆ ಕೆಲಸ ಮಾಡುತ್ತಿದ್ದ ಹನೀಫ್‌ ಮೇಲೆ ಗೋಡೆ ಬಿದ್ದಿದ್ದರಿಂದ ಅವರು ಮೃತಪಟ್ಟಿದ್ದು, ಮಣಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮನೆಯ ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಸುರತ್ಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Assault Case : ಜಾತ್ರೆಯಲ್ಲಿ ಹುಡುಗಿಯರನ್ನು ಚುಡಾಯಿಸಿದ್ದಕ್ಕೆ ಜಳಪಿಸಿದ ಮಚ್ಚು!

ಬಸ್‌- ಲಾರಿ ಡಿಕ್ಕಿ; ಚಾಲಕನ ನರಳಾಟ, ಪ್ರಯಾಣಿಕರ ಒದ್ದಾಟ

ಬೆಳಗಾವಿ: ಸರ್ಕಾರಿ ಬಸ್‌ಗೆ ಗೂಡ್ಸ್ ಲಾರಿ ಡಿಕ್ಕಿ ಹೊಡೆದ (Road Accident) ಪರಿಣಾಮ ಲಾರಿ ಚಾಲಕ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸವದಿ ದರ್ಗಾ ಸಮೀಪ ಅಪಘಾತ ಸಂಭವಿಸಿದೆ.

Ksrtc bus accident

ಜಮಖಂಡಿ ಘಟಕಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ ಜಮಖಂಡಿಯಿಂದ ಅಥಣಿ ಪಟ್ಟಣಕ್ಕೆ ಬರುವಾಗ ಈ ಅಪಘಾತ ನಡೆದಿದೆ. ಅಪಘಾತದಲ್ಲಿ ಬಸ್‌ ಹಾಗೂ ಲಾರಿಯ ಮುಂಭಾಗದ ಗಾಜು ಪುಡಿ ಪುಡಿಯಾಗಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಗಾಯಾಳುಗಳನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಾಗಿದೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Road Accident : ತಿರುವಿನಲ್ಲಿ ಕಾದು ಕುಳಿತಿದ್ದ ಯಮ; ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ಕಂಡಕ್ಟರ್‌ ದುರ್ಮರಣ!

ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕೆಎಸ್ಆರ್‌ಟಿಸಿ ಬಸ್

ದಾವಣಗೆರೆ ತಾಲೂಕಿನ ಹದಡಿ ಗ್ರಾಮದ ಬಳಿ ನಿಯಂತ್ರಣ ತಪ್ಪಿ ಕೆಎಸ್ಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಹದಡಿ-ಕನಕಗೊಂಡನಹಳ್ಳಿ ಮಾರ್ಗದ ಕಡೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿದೆ. ಬಸ್‌ನಲ್ಲಿ 45 ಜನರಿದ್ದು, 8 ಮಂದಿಗೆ ಸಣ್ಣಪುಟ್ಟ ಗಾಯವಾಗಿವೆ. ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಸ್ತೆ ಬದಿಗೆ ಬಿದ್ದ ಕೆಎಸ್‌ಆರ್‌ಟಿಸಿ
Exit mobile version