Site icon Vistara News

Lake encroachment | ಹೇಳುವುದು ಒಂದು ಮಾಡುವುದು ಇನ್ನೊಂದು; ಸರ್ಕಾರಿ ಸಂಸ್ಥೆಗಳಿಂದಲೇ ಕೆರೆ ಒತ್ತುʼವರಿʼ

Rajakaluve Encroachment

ಬೆಂಗಳೂರು: ಸಾಮಾನ್ಯ ಜನರ ಮೇಲೆ ಪ್ರತಾಪವನ್ನು ತೋರುತ್ತಾ ಒತ್ತುವರಿದಾರರಿಗೆ ಶಾಕ್‌ ನೀಡುತ್ತಿರುವ ಸರ್ಕಾರದ ಅಧೀನ ಸಂಸ್ಥೆಗಳೇ ಕೆರೆ ನುಂಗಣ್ಣರು (Lake encroachment) ಎಂಬ ಆರೋಪ ಕೇಳಿ ಬಂದಿದೆ. ರಾಜಧಾನಿ ಬೆಂಗಳೂರಿನಲ್ಲಿರುವ ಬಹುತೇಕ ಕೆರೆ ಒತ್ತುವರಿಯಲ್ಲಿ ಸರ್ಕಾರಿ ಸಂಸ್ಥೆಗಳೇ ಇರುವುದು ಕಂಡು ಬಂದಿದೆ. ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಾಗಿದೆ.

ಒಂದು ಗಂಟೆ ಕಾಲ ಸುರಿದ ಮಳೆಗೆ ಉದ್ಯಾನಗರಿಯ ಹಲವು ಪ್ರದೇಶಗಳು ಜಲಾವೃತಗೊಂಡಿತ್ತು. ಬೆಂಗಳೂರು ನೀರಿನಲ್ಲಿ ಮುಳುಗಲು ರಾಜಕಾಲುವೆ, ಕೆರೆ ಒತ್ತುವರಿಗಳೇ ಕಾರಣ ಎನ್ನಲಾಯಿತಾದರೂ, ಈ ಒತ್ತುವರಿದಾರರ ಮೊದಲ ಸಾಲಿನಲ್ಲಿ ಸರ್ಕಾರಿ ಸಂಸ್ಥೆಗಳೇ ನಿಲ್ಲುತ್ತಿದೆ ಎಂಬ ಅಂಶಗಳು ಬೆಳಕಿಗೆ ಬಂದಿದೆ.

ಕೆರೆ ಒತ್ತುವರಿದಾರರ ಮೊದಲ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದ್ದು, ಎರಡನೇ ಸ್ಥಾನದಲ್ಲಿ ಬಿಬಿಎಂಪಿ ಇದೆ. ಈ ಸಾಲಿಗೆ ಅಗ್ನಿಶಾಮಕ ಇಲಾಖೆ, ಬಿಡಬ್ಲೂಎಸ್‌ಎಸ್‌ಬಿ, ಸ್ಲಂ ಬೋರ್ಡ್ ಇಲಾಖೆಗಳೂ ಸೇರ್ಪಡೆಯಾಗಿವೆ.

ನಗರದ ಎಂಟು ವಲಯದಲ್ಲಿಯೂ ಸರ್ಕಾರಿ ಸಂಸ್ಥೆಗಳಿಂದ ಒತ್ತುವರಿ ನಡೆದಿದೆ. ಕೆರೆ ಜಾಗದಲ್ಲಿ ಒತ್ತುವರಿ ಮಾಡಿ ಸೈಟ್ ನಿರ್ಮಾಣ, ರಸ್ತೆ, ಕಚೇರಿಯನ್ನು ನಿರ್ಮಿಸಿಕೊಂಡಿವೆ. ಕೇಂದ್ರ ಸರ್ಕಾರದ ಸಂಸ್ಥೆಗಳು ಸಹ ಒತ್ತುವರಿ ಮಾಡಿ ಕಚೇರಿ ನಿರ್ಮಾಣ ಮಾಡಿಕೊಂಡಿವೆ. ನೂರಾರು ಎಕರೆ ಕೆರೆ ಜಾಗ ಗುಳುಂ ಮಾಡಿದ್ದು, ಸಂಸ್ಥೆಗಳು ಮಾಡಿರುವ ಒತ್ತುವರಿ ಸರ್ಕಾರ ತೆರವುಗೊಳಿಸುತ್ತಾ? ಎಂದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಮೂಡಿದೆ.

ಎಂಟು ವಲಯಗಳಲ್ಲಿ ಸರ್ಕಾರಿ ಸಂಸ್ಥೆಗಳ ಒತ್ತುವರಿ ಅಂಕಿ ಅಂಶ ಹೀಗಿದೆ

ಬೊಮ್ಮನಹಳ್ಳಿ ವಲಯ
• ಒಟ್ಟು ಕೆರೆಗಳ ಸಂಖ್ಯೆ- 47
• ಒಟ್ಟು ಜಾಗ- 1,167 ಎಕರೆ
• ಒತ್ತುವರಿ- 196.33 ಎಕರೆ
• ಒತ್ತುವರಿ ತೆರವು ಬಾಕಿ- 196 ಎಕರೆ
ಬೊಮ್ಮನಹಳ್ಳಿ ವಲಯ ಒತ್ತುವರಿದಾರರು
• ಬಿಡಿಎ – 59 ಎಕರೆ ಒತ್ತುವರಿ
• ಸ್ಲಂ ಬೋರ್ಡ್ – 25.76 ಎಕರೆ
• ಬಿಬಿಎಂಪಿ – 2.43 ಎಕರೆ
ಬೆಂಗಳೂರು ದಕ್ಷಿಣ ವಲಯ
• ಒಟ್ಟು ಕೆರೆಗಳ ಸಂಖ್ಯೆ -12
• ಒಟ್ಟು ಜಾಗ -162.7 ಎಕರೆ
• ಒತ್ತುವರಿ – 77.19 ಎಕರೆ
• ಒತ್ತುವರಿ ತೆರವು ಬಾಕಿ – 77.19 ಎಕರೆ
ಬೆಂಗಳೂರು ದಕ್ಷಿಣ ವಲಯ ಒತ್ತುವರಿದಾರರು
• ಬಿಬಿಎಂಪಿ- 2.45 ಎಕರೆ ಒತ್ತುವರಿ
• ಬಿಡಿಎ- 1 ಎಕರೆ
• ಸ್ಲಂ ಬೋರ್ಡ್- 0.22 ಎಕರೆ
• ಕೆಎಚ್‌ಬಿ (KHB) – 0.8 ಎಕರೆ
ಮಹದೇವಪುರ ವಲಯ
• ಕೆರೆಗಳ ಸಂಖ್ಯೆ – 52
• ಒಟ್ಟು ಜಾಗ -1845.6 ಎಕರೆ
• ಒತ್ತುವರಿ – 225.15 ಎಕರೆ
• ಒತ್ತುವರಿ ತೆರವು ಬಾಕಿ – 2142 ಎಕರೆ
ಮಹದೇವಪುರ ವಲಯ ಒತ್ತುವರಿದಾರರು
• ಮಿಲಿಟರಿ – 131 ಎಕರೆ
• ಕೆಐಎಡಿಬಿ- 0.6 ಎಕರೆ
• ಬಿಡಬ್ಲೂಎಸ್‌ಎಸ್‌ಬಿ(BWSSB)- 0.13
ಯಲಹಂಕ ವಲಯ
• ಕೆರೆಗಳ ಸಂಖ್ಯೆ – 28
• ಒಟ್ಟು ಜಾಗ -1371.20 ಎಕರೆ
• ಒತ್ತುವರಿ – 133.5 ಎಕರೆ
ಒತ್ತುವರಿ ತೆರವು ಬಾಕಿ – 50.21 ಎಕರೆ
ಯಲಹಂಕ ವಲಯ ಒತ್ತುವರಿದಾರರು
• ರೈಲ್ವೆ ಇಲಾಖೆ – 5.19
• ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ – 4.5 ಎಕರೆ
• ಬಿಬಿಎಂಪಿ – 3.2 ಎಕರೆ
• ಬಿಡಬ್ಲೂಎಸ್‌ಎಸ್‌ಬಿ – 0.44 ಎಕರೆ
• ಕೆಹೆಚ್ ಬಿ- 0.33 ಎಕರೆ
ಪೂರ್ವ ವಲಯ
• ಕೆರೆಗಳ ಸಂಖ್ಯೆ – 10
• ಒಟ್ಟು ಜಾಗ – 303.24 ಎಕರೆ
• ಒತ್ತುವರಿ – 116.35 ಎಕರೆ
• ಒತ್ತುವರಿ ತೆರವು ಬಾಕಿ – 113.32 ಎಕರೆ
ಪೂರ್ವ ವಲಯ ಒತ್ತುವರಿದಾರರು
• ಬಿಡಿಎ – 47.7 ಎಕರೆ
• ಅರಣ್ಯ ಇಲಾಖೆ – 13.23
• ರೈಲ್ವೆ ಇಲಾಖೆ – 1.19 ಎಕರೆ
• ಅಗ್ನಿಶಾಮಕ ಇಲಾಖೆ – . 30 ಎಕರೆ
ಆರ್ ಆರ್ ನಗರ ವಲಯ
• ಕೆರೆಗಳ ಸಂಖ್ಯೆ – 37
• ಒಟ್ಟು ಜಾಗ – 852 ಎಕರೆ
• ಒತ್ತುವರಿ – 160.6 ಎಕರೆ
• ಒತ್ತುವರಿ ತೆರವು ಬಾಕಿ – 160.6 ಎಕರೆ
ಆರ್ ಆರ್ ನಗರ ಒತ್ತುವರಿದಾರರು
• ಬಿಬಿಎಂಪಿ – 71.84 ಎಕರೆ
• ಬಿಡಿಎ – 2.24 ಎಕರೆ
ಪಶ್ಚಿಮ ವಲಯ
• ಕೆರೆಗಳ ಸಂಖ್ಯೆ – 6
• ಒಟ್ಟು ಜಾಗ – 86 ಎಕರೆ
• ಒತ್ತುವರಿ – 30 ಎಕರೆ
• ಒತ್ತುವರಿ ತೆರವು ಬಾಕಿ – 29.34 ಎಕರೆ
ಪಶ್ಚಿಮ ವಲಯ ಒತ್ತುವರಿದಾರರು
• ಕರ್ನಾಟಕ ಮಾಲಿನ್ಯ ಮಂಡಳಿ – 15.24 ಎಕರೆ
• ಬಿಬಿಎಂಪಿ – 8.35 ಎಕರೆ
• ಸ್ಲಂ ಬೋರ್ಡ್ – 2.02ಎಕರೆ

ಇದನ್ನೂ ಓದಿ | ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿ ತೆರವು, ಸರ್ವೆ ಕಾರ್ಯ ಮುಂದುವರಿಕೆ

Exit mobile version