Site icon Vistara News

lalbagh flower show 2023 : ಆ.4ಕ್ಕೆ ಲಾಲ್‌ಬಾಗ್‌ ಫ್ಲವರ್‌ ಶೋ; ಹೂವಲ್ಲಿ ಅರಳುವ ಕೆಂಗಲ್ ಹನುಮಂತಯ್ಯ

Lalbagh Flower Show

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ (lalbagh flower show 2023) ಸಜ್ಜಾಗಿದ್ದು, ಈ ಬಾರಿ ಬಗೆ ಬಗೆಯ ಹೂಗಳ ಮೂಲಕ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯರ (Kengal Hanumanthaiah) ಕಲಾಕೃತಿ ಸೃಷ್ಟಿಯಾಗಲಿದೆ. ಆಗಸ್ಟ್‌ 15ರ ಸ್ವಾತಂತ್ರ್ಯ ದಿನದ ಅಂಗವಾಗಿ ತೋಟಗಾರಿಕೆ ಇಲಾಖೆ 214ನೇ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತಿದೆ. ಆಗಸ್ಟ್‌ 4 ರಿಂದ 15ರವರಗೆ ಒಟ್ಟು 12 ದಿನಗಳ ಕಾಲ ಫ್ಲವರ್‌ ಶೋ ನಡೆಯಲಿದೆ.

ಆಗಸ್ಟ್ 04 ರಂದು ಸಿಎಂ ಸಿದ್ದರಾಮಯ್ಯ ಫ್ಲವರ್ ಶೋಗೆ ಚಾಲನೆ ನೀಡಲಿದ್ದಾರೆ. ಈ ಬಾರಿ ಫ್ಲವರ್ ಶೋಗೆ 2 ಕೋಟಿ ರೂ ಅಧಿಕ ಖರ್ಚು ಮಾಡಲಾಗಿದೆ. ಫ್ಲವರ್‌ ಶೋಗೆ 10 ರಿಂದ 12 ಲಕ್ಷದಷ್ಟ ಮಂದಿ ಬರುವ ನಿರೀಕ್ಷೆ ಇದೆ.

ಫ್ಲವರ್ ಶೋಗೆ ಈ ಬಾರಿ ಕೊಲ್ಕತ್ತ, ಕೇರಳ, ತಮಿಳುನಾಡು, ಆಂಧ್ರ ಸೇರಿ ಇತರ ರಾಜ್ಯಗಳಿಂದ ಹೂಗಳು ಬರುತ್ತಿದೆ. ಒಟ್ಟು 15 ರಿಂದ 17 ಲಕ್ಷ ಹೂಗಳನ್ನು ಬಳಸಿಕೊಳ್ಳಲಾಗುತ್ತಿದೆ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಮಕ್ಕಳಿಗೆ, ಮಹಿಳೆಯರಿಗೂ ಸಹ ಕೆಲ‌ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.

ಟಿಕೆಟ್ ದರ ಏರಿಕೆ ಇಲ್ಲ

ವಾರಾಂತ್ಯದಂದು ಪ್ರವೇಶಕ್ಕೆ ಹಿರಿಯರಿಗೆ 70 ರೂಪಾಯಿ ಹಾಗೂ ಮಕ್ಕಳಿಗೆ 30 ರೂಪಾಯಿ ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಐಡಿ ಕಾರ್ಡ್‌ ತೋರಿಸಿದರೆ ಉಚಿತ ಪ್ರವೇಶ ಇರಲಿದೆ. ಭದ್ರತೆ ದೃಷ್ಟಿಯಿಂದ 200 ಸಿಸಿ ಟಿವಿ ಕ್ಯಾಮೆರಾ, 300-400 ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. 12 ದಿನವೂ ಹೆಲ್ತ್ ಕ್ಯಾಂಪ್ ವ್ಯವಸ್ಥೆ ಇರಲಿದೆ. ಲಾಲ್‌ಬಾಗ್‌ನಲ್ಲಿ ಶ್ವಾನಗಳು ಹೆಚ್ಚಾಗಿ ಇದೆ. ಹೀಗಾಗಿ ಶ್ವಾನಗಳಿಂದ ಜನರಿಗೆ ಸಮಸ್ಯೆ ಆಗಬಾರದೆಂದು ಶ್ವಾನಗಳಿಗೆ ವ್ಯಾಕ್ಸಿನೇಷನ್ ಮಾಡಲಾಗಿದೆ.

ಇದನ್ನೂ ಓದಿ: CM Siddaramaiah : ಗೃಹಲಕ್ಷ್ಮಿ ದುಡ್ಡು ನಿಂಗೆ ಸಿಗಲ್ಲ, ಅಮ್ಮಂಗೆ ಕೊಡ್ತೀವಿ ಆಯ್ತಾ; ಹಾಸ್ಟೆಲ್‌ ಮಕ್ಕಳ ಜತೆ ಸಿದ್ದರಾಮಯ್ಯ ಆತ್ಮೀಯ ಮಾತು

ಲಾಲ್‌ಬಾಗ್‌ನಲ್ಲಿ ಸಹ್ಯಾದ್ರಿ ಸಸ್ಯಲೋಕ ಅನಾವರಣ

ಲಾಲ್‌ ಬಾಗ್ ಎಂದರೆ ಥಟ್ ಎಂದು ನೆನಪಾಗುವುದು ಹಸಿರ ಸೌಂದರ್ಯ ಹೊತ್ತ ಗಿಡ-ಮರ, ಹೂಗಳ ರಾಶಿ. ಬೆಂಗಳೂರಿನಂತ ನಗರದಲ್ಲಿ ಕೊಂಚ ರಿಲ್ಯಾಕ್ಸ್ ಬೇಕು ಎನ್ನುವವರು ಇಲ್ಲಿಗೆ ಬರುತ್ತಾರೆ. ಇಂತಹ ಹಸಿರತಾಣದ ಸಸ್ಯ ಸಂಕುಲಕ್ಕೆ ಇದೀಗ ಸಹ್ಯಾದ್ರಿ ಸಾಲಿನ ಸಸ್ಯಗಳು ಕೂಡ ಸೇರ್ಪಡೆಯಾಗಿವೆ. ಲಾಲ್ ಬಾಗ್‌ನ ಬಂಡೆಯ ಹಿಂದೆ ನಿರುಪಯುಕ್ತವಾಗಿದ್ದ 6 ಎಕರೆ ಜಾಗದಲ್ಲಿ ಮಂಗಳವಾರ (ಆ.1) ಸಹ್ಯಾದ್ರಿ ಸಾಲಿನಲ್ಲಿ 132 ಪ್ರಭೇದದ 450 ಸಸಿಗಳನ್ನು ನೆಡಲಾಗಿದೆ.

6 ಎಕರೆ ಜಾಗದಲ್ಲಿ ಸಹ್ಯಾದ್ರಿ ಸಾಲಿನ ಸಸ್ಯಗಳನ್ನು ಬೆಳೆಸಲು ಪ್ಲ್ಯಾನ್‌ ಮಾಡಿದ್ದು, ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಲಾಲ್‌ಬಾಗ್‌ನ ಉಪ ನಿರ್ದೇಶಕಿ ಕುಸುಮಾ, ಸಹ್ಯಾದ್ರಿ ಸಾಲಿನ ಸಸ್ಯಗಳನ್ನು ಲಾಲ್‌ಬಾಗ್‌ನಲ್ಲಿ ಶ್ರಮಪಟ್ಟು ನೆಟ್ಟಿದ್ದೇವೆ, ಇದು ಮತ್ತಷ್ಟು ಮೆರಗು ತರಲಿದೆ ಎಂದರು.

ಲಾಲ್‌ಬಾಗ್ ಬಂಡೆ ಹಿಂಭಾಗದಲ್ಲಿ ಪಾದ್ರಿ ಮರ, ಕೆಂಪು ನೇರಳೆ, ದೂಫದ ಮರ, ಸಾಗಡೆ, ಗುಡ್ಡಗೇರು ಸೇರಿದಂತೆ ಪಶ್ಚಿಮಘಟ್ಟದ ಬಗೆ ಬಗೆಯ ಗಿಡಗಳನ್ನು ಇಲ್ಲಿ ನೆಡಲಾಗಿದೆ. ಇದರಿಂದ ಲಾಲ್‌ಬಾಗ್ ಸೌಂದರ್ಯ ಇನ್ನಷ್ಟು ಹಿಮ್ಮಡಿಯಾಗಲಿದೆ. ಸಸ್ಯಕಾಶಿಗೆ ಸಹ್ಯಾದ್ರಿ ಸಸ್ಯಲೋಕವೂ ಸೇರುತ್ತಿರುವುದಕ್ಕೆ ಇಲ್ಲಿಗೆ ಭೇಟಿ ನೀಡುವವರು ಕೂಡ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version