ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಶ್ರೀಮತಿ ಕಮಲಾಬಾಯಿ ಶಿಕ್ಷಣ ಸಂಸ್ಥೆಯ (ಎಸ್‌ಕೆಇಐ) ಕಾಂಪೌಂಡ್ ಕೆಡವಿದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಜೆಸಿಬಿ ಸಮೇತ 93 ವರ್ಷ ಹಳೆಯ ಶಾಲೆಯ ಆವರಣಕ್ಕೆ ನುಗ್ಗಿ ಗೋಡೆಯನ್ನು (Land Dispute) ಕೆಡವಿದ್ದರಿಂದ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮರಿಯಾ ಎಲಿಜಬೆತ್, ಮೊಹಮ್ಮದ್ ಜಬಿ ಮತ್ತು ಜೆರಾರ್ಡ್ ಸ್ಟೀಫನ್ ಹ್ಯಾರಿ ಆರೋಪಿಗಳು. ಜುಲೈ 5ರಂದು ಸಂಜೆ ಘಟನೆ ನಡೆದಿದೆ. ಹ್ಯಾರಿ, ಎಲಿಜಬೆತ್ ಮತ್ತು ಜಬಿ, ಜೆಸಿಬಿ ಸಮೇತವಾಗಿ ಶಾಲೆಯೊಳಗೆ ನುಗ್ಗಿ, ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಎಲಿಜಬೆತ್ ಮತ್ತು ಶಾಲಾ ಆಡಳಿತದ ನಡುವೆ 25 ವರ್ಷಗಳಿಂದ ಆಸ್ತಿ ವಿವಾದವಿದೆ ಎನ್ನಲಾಗಿದ್ದು, ಇದರಿಂದ ಘಟನೆ ನಡೆದಿದೆ ಎನ್ನಲಾಗಿದೆ. ಶಾಲಾ ಕ್ಯಾಂಪಸ್‌ನ ಒಂದು ಭಾಗ ತನಗೆ ಸೇರಿದೆ ಎಂದು ಎಲಿಜಬೆತ್ ಹೇಳಿದ್ದಾರೆ. ಆದರೆ ಶಾಲೆ ಆಡಳಿತ ಮಂಡಳಿ ಮಾತ್ರ ಕಾರ್ಪೊರೇಷನ್‌ನಿಂದ 10 ಎಕರೆ ಆಸ್ತಿಯನ್ನು ತಾವು ಖರೀದಿಸಿದ್ದೆವು ಎಂದು ಹೇಳುತ್ತಿದೆ.
ಈ ಬಗ್ಗೆ ಶಾಲೆಯ ಸಹಾಯಕ ಕಾರ್ಯದರ್ಶಿ ಅನುರಾಧಾ ಕೆ.ಪಿ ಅವರು ಪ್ರತಿಕ್ರಿಯಿಸಿ, ಶಾಲೆಯ ಆಡಳಿತ ಮಂಡಳಿಯು ಆಸ್ತಿಯ ಯಾವುದೇ ಹಕ್ಕುಗಳ ವಿರುದ್ಧ 2023ರಲ್ಲಿ ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದೆ. ಕೋರ್ಟ್ ತಡೆಯಾಜ್ಞೆ ನಡುವೆಯೂ ಎಲಿಜಬೆತ್ ಮತ್ತು ಅವರ ಗುಂಪು ಕ್ಯಾಂಪಸ್ ಅತಿಕ್ರಮಣ ಮಾಡಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ | Leopard Attack : ದಾಳಿ ಮಾಡಿದ ಚಿರತೆಯನ್ನು ಹೊಡೆದು ಕೊಂದು ಆಂಬ್ಯುಲೆನ್ಸ್‌ಗೆ ಹಾಕಿದ ಗ್ರಾಮಸ್ಥರು
ಶಾಕಿಂಗ್ ಘಟನೆ! ಬುದ್ಧಿ ಹೇಳಿದ ಗುರುವನ್ನೇ ಚುಚ್ಚಿ ಕೊಂದ ವಿದ್ಯಾರ್ಥಿ
ಗುವಾಹಟಿ: ಈಗಿನ ಕಾಲ ಹೇಗಿದೆ ಅಂದ್ರೆ ಸಂಬಂಧಗಳು ನಿಧಾನವಾಗಿ ಮರೆಯಾಗಿ ಎಲ್ಲರೂ ಯಾಂತ್ರಿಕವಾಗಿ ಬದುಕುತ್ತಿರುವ ಹಂತಕ್ಕೆ ತಲುಪಿದ್ದೇವೆ. ಈ ಯಾಂತ್ರಿಕ ಜೀವನದಲ್ಲಿ ಅಪ್ಪ-ಅಮ್ಮ, ಗುರು-ಶಿಷ್ಯ ಹೀಗೆ ಇಂತಹ ಸಂಬಂಧಗಳ ಮೇಲೆ ಭಾವನಾತ್ಮಕ ಬಂಧವೇ ಇಲ್ಲದಂತಾಗಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ವಿದ್ಯೆ ಕಲಿಸಿದ ಗುರುವನ್ನೇ ವಿದ್ಯಾರ್ಥಿಯೊಬ್ಬ ಇರಿದು(Stabbed) ಕೊಂದಿದ್ದಾನೆ. ಬುದ್ಧಿ ಹೇಳಿದ ಶಿಕ್ಷಕನಿಗೆ ತಿಳಿಗೇಡಿ ವಿದ್ಯಾರ್ಥಿ ಯಮನಾಗಿ ಎದುರುನಿಂತು ಪ್ರಾಣವನ್ನೇ ತೆಗೆದಿದ್ದಾನೆ(Viral News).
ಅಸ್ಸಾಂನ ಶಿವಸಾಗರ್ ಜಿಲ್ಲೆಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, 11 ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನನ್ನು ತರಗತಿಯಲ್ಲಿ ಇರಿದು ಕೊಂದಿದ್ದಾನೆ. ಕಳಪೆ ಸಾಧನೆಗಾಗಿ ಬೈದಿದ್ದಕ್ಕಾಗಿ ರಸಾಯನಶಾಸ್ತ್ರ ಶಿಕ್ಷಕ ರಾಜೇಶ್ ಬರುವಾ ಬೆಜವಾಡ (55) ಮೇಲೆ ಹಲ್ಲೆ ನಡೆಸಿ ಕೊಂದ 16 ವರ್ಷದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬೆಜವಾಡ ಅವರು ರಸಾಯನಶಾಸ್ತ್ರವನ್ನು ಕಲಿಸುತ್ತಿದ್ದರು. ಜೊತೆಗೆ ಖಾಸಗಿ ಒಡೆತನದ ಶಾಲೆಯಲ್ಲಿ ನಿರ್ವಹಣಾ ಜವಾಬ್ದಾರಿಗಳನ್ನು ಸಹ ಹೊಂದಿದ್ದರು.ರಸಾಯನಶಾಸ್ತ್ರದಲ್ಲಿನ ಕಲಿಕೆಯ ಬಗ್ಗೆ ಶಿಕ್ಷಕರು ನಿನ್ನೆ ವಿದ್ಯಾರ್ಥಿಯನ್ನು ಗದರಿಸಿದ್ದರು. ಅಲ್ಲದೇ ಪೋಷಕರ ಸಭೆಗಾಗಿ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ಹೇಳಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ದಿನದ ನಂತರ ವಿದ್ಯಾರ್ಥಿ ಕ್ಯಾಶುಯಲ್ ಬಟ್ಟೆಗಳಲ್ಲಿ ತರಗತಿಗೆ ಬಂದಿದ್ದ. ಶಿಕ್ಷಕರು ಅವನನ್ನು ಹೊರಹೋಗುವಂತೆ ಕೇಳಿದರು. ಇದ್ದಕ್ಕಿದ್ದಂತೆ ವಿದ್ಯಾರ್ಥಿ ಬೆಜವಾಡ ಅವರ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಪದೇ ಪದೇ ಇರಿದಿದ್ದಾನೆ.
ಇನ್ನು ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿದ್ದು, ಕೋಚಿಂಗ್ ಸೆಂಟರ್‌ನಲ್ಲಿ ಕೊಲೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಬಂದು ನೋಡಿದಾಗ ತರಗತಿಯಲ್ಲಿ ರಕ್ತದ ಮಡುವಿನಲ್ಲಿ ಶಿಕ್ಷಕ ಬಿದ್ದಿದ್ದರು. ಅಲ್ಲೇ ಚಾಕು ಕೂಡ ಇತ್ತು. ಶಿಕ್ಷಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿಲಾಯಿತಾದರೂ ಆತ ಸಾವನ್ನಪ್ಪಿರುವುದನ್ನು ವೈದ್ಯರು ಖಚಿತಪಡಿಸಿದರು. ಇನ್ನು ವಿದ್ಯಾರ್ಥಿಯನ್ನು ಈಗಾಗಲೇ ವಶಕ್ಕೆ ಪಡೆದಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಇತರ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ ಶಿಕ್ಷಕ ವಿದ್ಯಾರ್ಥಿಗೆ ಈ ಹಿಂದೆ ಬೈದಿದ್ದರು ಎಂಬುದು ಬಯಲಾಗಿದೆ.
ಇದನ್ನೂ ಓದಿ:Mahadayi Water Dispute: ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರದ ಪ್ರವಾಹ್ ತಂಡ ಭೇಟಿ; ನಾಲೆಗಳ ಪರಿಶೀಲನೆ
ರಸಾಯನಶಾಸ್ತ್ರದಲ್ಲಿನ ಕಲಿಕೆಯ ಬಗ್ಗೆ ಶಿಕ್ಷಕರು ನಿನ್ನೆ ವಿದ್ಯಾರ್ಥಿಯನ್ನು ಗದರಿಸಿದ್ದರು. ಅಲ್ಲದೇ ಪೋಷಕರ ಸಭೆಗಾಗಿ ಪೋಷಕರನ್ನು ಶಾಲೆಗೆ ಕರೆದುಕೊಂಡು ಬಾ ಎಂದು ಹೇಳಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ದಿನದ ನಂತರ ವಿದ್ಯಾರ್ಥಿ ಕ್ಯಾಶುಯಲ್ ಬಟ್ಟೆಗಳಲ್ಲಿ ತರಗತಿಗೆ ಬಂದಿದ್ದ. ಶಿಕ್ಷಕರು ಅವನನ್ನು ಹೊರಹೋಗುವಂತೆ ಹೇಳಿದ್ದರು ಎನ್ನಲಾಗಿದೆ. ಇನ್ನು ಆರೋಪಿ ವಿದ್ಯಾರ್ಥಿ ತರಗತಿ ಮುಗಿಸಿ ಮನೆಗೆ ತೆರಳಿದ್ದ. ಇದಾದ ಕೆಲವೇ ಹೊತ್ತಲ್ಲಿ ಮತ್ತೆ ತರಗತಿಗೆ ಬಂದಿದ್ದಾನೆ. ಅವನು ತರಗತಿಗೆ ಪ್ರವೇಶಿಸಿದಾಗ, ಶಿಕ್ಷಕನು ಅವನನ್ನು ಮತ್ತೆ ಬೈಯಲು ಶುರು ಮಾಡಿದ್ದ. ಇದರಿಂದ ಕೋಪಗೊಂಡ ವಿದ್ಯಾರ್ಥಿ ಶಿಕ್ಷಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸಹಪಾಠಿ ಹೇಳಿಕೊಂಡಿದ್ದಾನೆ.