ಮೈಸೂರು: ಹೆಣ್ಣು, ಹೊನ್ನು, ಮಣ್ಣು ವಿಚಾರಕ್ಕೆ ಗಲಾಟೆ, ಹಲ್ಲೆ ನಡೆಯುವುದು ಮಾಮೂಲಿಯಾಗಿ ಬಿಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜಮೀನು ವಿಚಾರಕ್ಕೆ ದಂಪತಿ ಮೇಲೆ ಹಲ್ಲೆ ನಡೆಸಿದ್ದು, ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದ್ದಾರೆ.
ಇಲ್ಲಿನ ನಂಜನಗೂಡು ತಾಲೂಕಿನ ಹುಳಿಮಾವು ಗ್ರಾಮದ ಮಹದೇವಮ್ಮ ಎಂಬುವವರು ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಜಮೀನು ವಿಚಾರಕ್ಕೆ ಮಹಿಳೆ ಎಂಬುದನ್ನೂ ನೋಡದೆ ಹಲ್ಲೆ ಮಾಡಿದ್ದು, ಮಹದೇವಮ್ಮಳ ಪತಿ ಮಹೇಶ್ ಮೇಲೂ ಕಣ್ಣಿಗೆ ಖಾರದ ಪುಡಿ ಎರಚಿ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿರುವುದಾಗಿ ಹೇಳಿದ್ದಾರೆ. ತೀವ್ರ ಹಲ್ಲೆಗೆ ಒಳಗಾದ ಪರಿಣಾಮ ಮಹೇಶ್‌ರ ಎರಡೂ ಕಾಲು ಮುರಿದಿದೆ. ಪಕ್ಕದ ಜಮೀನಿನ ಶಿವಕುಮಾರ್, ಸ್ವಾಮಿ, ವಿಶ್ವ ಎಂಬುವವರು ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಹದೇವಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ | ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾಗುತ್ತಿದೆ ಮೈಸೂರು; ಯೋಗಾಭ್ಯಾಸ ಪ್ರಾರಂಭ
ಇತ್ತ ದೂರು ನೀಡಿ ದಿನಗಳ ಕಳೆದರೂ ಆರೋಪಿಗಳನ್ನ ಬಂಧಿಸಿಲ್ಲ, ಪೊಲೀಸರೇ ಇವರನ್ನ ರಕ್ಷಣೆ ಮಾಡುತ್ತಿದ್ದಾರೆ. ಈ ಆರೋಪಿಗಳನ್ನು ಬಂಧಿಸದಿದ್ದರೆ ಠಾಣೆ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯನ್ನ ಮಹದೇವಮ್ಮ ನೀಡಿದ್ದಾರೆ.
ಸದ್ಯ ಕಾಲು ಮುರಿತಕ್ಕೆ ಒಳಗಾಗಿರುವ ಮಹೇಶ್ ಹಾಸಿಗೆ ಹಿಡಿದಿದ್ದು ಕುಟುಂಬ ನಿರ್ವಹಣೆ ಕಷ್ಟವಾಗ್ತಿದೆ. ಇದರೊಂದಿಗೆ ಆರೋಪಿಗಳಿಂದ ಹತ್ಯೆ ಬೆದರಿಕೆಯನ್ನೂ ಎದುರಿಸುತ್ತಿದ್ದಾರೆ. ಈಗಾಗಲೇ ಮೂರನೇ ಬಾರಿ ಹಲ್ಲೆ ನಡೆಸಿರುವ ಆರೋಪವನ್ನ ಮಹದೇವಮ್ಮ ಮಾಡಿದ್ದು, ನಮ್ಗೆ ರಕ್ಷಣೆ ಕೊಡಿ ಆರೋಪಿಗಳನ್ನ ಬಂಧಿಸಿ ಅಂದಿದ್ದಾರೆ..
ಇದನ್ನೂ ಓದಿ | ಮೈಸೂರು: ಎಪಿಎಂಸಿ ಏಜೆಂಟ್ ರವಿ ಬರ್ಬರ ಹತ್ಯೆ