1. ಮಹಿಳೆಯರಿಗೆ ‘ಶಕ್ತಿ’ ನೀಡಿದ ಸಿದ್ದರಾಮಯ್ಯ; ಚಾಲನೆಗೊಂಡ ಮೊದಲ ಗ್ಯಾರಂಟಿ!
ರಾಜ್ಯದ ಎಲ್ಲ ಮಹಿಳೆಯರಿಗೂ ಕಾಂಗ್ರೆಸ್ ಗ್ಯಾರಂಟಿ (Congress Guarantee) ಯೋಜನೆಯಂತೆ ಉಚಿತ ಬಸ್ (Free Bus Service) ಪ್ರಯಾಣವುಳ್ಳ ಶಕ್ತಿ ಯೋಜನೆಗೆ ಭಾನುವಾರ (ಜೂನ್ 11) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧಿಕೃತವಾಗಿ ಚಾಲನೆ ನೀಡಿದರು. ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಾಥ್ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಓದಿಗಾಗಿ: 1. ಸರ್ಕಾರ ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಿದೆ: ಆಟೋ ಚಾಲಕರ ಆಕ್ರೋಶ
2. ‘ಶಕ್ತಿ’ ಉದ್ಘಾಟನೆಯಲ್ಲಿ ಗಮನ ಸೆಳೆದ ಡಿಕೆಶಿ ಪೇಟಾ-ಶಾಲು; ಏನಿದರ ಗುಟ್ಟು?
3. ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 59,000 ಕೋಟಿ ರೂ. ವೆಚ್ಚ: ಸಿಎಂ ಸಿದ್ದರಾಮಯ್ಯ
2. ಪಂಜಾಬ್‌ನಲ್ಲಿ ಉಚಿತ ಯೋಜನೆ ಜಾರಿಗೆ ಆಪ್ ಸರ್ಕಾರ ಪರದಾಟ, ಪೆಟ್ರೋಲ್, ಡೀಸೆಲ್ ವ್ಯಾಟ್ ಹೆಚ್ಚಳ
ಪಂಜಾಬ್‌ನಲ್ಲಿ ಉಚಿತ ವಿದ್ಯುತ್ ಮತ್ತಿತರ ಉಚಿತ ಯೋಜನೆಗಳನ್ನು ಜಾರಿಗೊಳಿಸಲು ಸಂಪನ್ಮೂಲಕ್ಕೆ ಪರದಾಡುತ್ತಿರುವ ಆ್ಯಪ್ ಸರ್ಕಾರ, ಇದೀಗ ರಾಜ್ಯದ ಜನತೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಏರಿಸುವ ಮೂಲಕ ಶಾಕ್ ನೀಡಿದೆ. ( Punjab Petrol Price hike). ಪಂಜಾಬ್‌ನಲ್ಲಿ ವ್ಯಾಟ್ ಹೆಚ್ಚಳದ ಪರಿಣಾಮ ಪ್ರತಿ ಲೀಟರ್ ಪೆಟ್ರೋಲ್ ದರ 98.65 ರೂ. ಹಾಗೂ ಡೀಸೆಲ್ ದರ 88.95 ರೂ.ಗೆ ಏರಿಕೆಯಾಗಿದೆ. ಪಂಜಾಬ್ ಸರ್ಕಾರ ಪ್ರತಿ ತಿಂಗಳು 300 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತದೆ. ಆದರೆ ಇದು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಹೀಗಾಗಿ ಇದೀಗ ಪೆಟ್ರೋಲ್-ಡೀಸೆಲ್ ಮೇಲೆ ವ್ಯಾಟ್ ಹೆಚ್ಚಿಸುವ ಮೂಲಕ ತೆರಿಗೆ ಆದಾಯ ಹೆಚ್ಚಿಸಲು ನಿರ್ಧರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಬಿಪರ್‌ಜಾಯ್ ಚಂಡಮಾರುತ ಡೇಂಜರ್; ರಾಜ್ಯ ಕರಾವಳಿಯಲ್ಲಿ ಕಡಲ ಕೊರೆತ
ಜೂನ್ 15ರಂದು ಸೌರಾಷ್ಟ್ರ, ಕಚ್ ಮೂಲಕ ಬಿಪರ್‌ಜಾಯ್ ಚಂಡಮಾರುತವನ್ನು (Cyclone Biparjoy) ಭಾರತವನ್ನು ತೀವ್ರ ಪ್ರಮಾಣದಲ್ಲಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹಾಗೆಯೇ, ಮತ್ತೊಂದೆಡೆ ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರ ಅಲೆಗಳು ಸೃಷ್ಟಿಯಾಗುತ್ತಿರುವ ಕಾರಣ ಕರ್ನಾಟಕ ಕರಾವಳಿಯಲ್ಲಿ ಕಡಲ ಕೊರೆತ ಆರಂಭವಾಗಿದೆ. ಇದರಿಂದ ಕರಾವಳಿ ತೀರದಲ್ಲಿ ವಾಸಿಸುತ್ತಿರುವ ಜನ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಟ್ರೋಫಿ ಕನಸು ಎರಡನೇ ಬಾರಿ ಭಗ್ನ!
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಗೆಲ್ಲುವ ಭಾರತ ತಂಡದ ಆಸೆ ಎರಡನೇ ಬಾರಿ ಕಮರಿ ಹೋಯಿತು. ಇಲ್ಲಿನ ದಿ ಓವಲ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ಗಳ ಹೀನಾಯ ಸೋಲು ಅನುಭವಿಸಿದ ಭಾರತ ತಂಡ ನಿರಾಸೆ ಎದುರಿಸಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡ ಚೊಚ್ಚಲ ಫೈನಲ್ ಪ್ರವೇಶದಲ್ಲಿಯೇ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೂರು ವರ್ಷಗಳ ಅವಧಿಯಲ್ಲಿ ಆಸೀಸ್ ತಂಡಕ್ಕೆ ಇದು ಎರಡನೇ ಪ್ರಶಸ್ತಿ. 2021ರ ಟಿ20 ವಿಶ್ವ ಕಪ್ ಈ ತಂಡದ ಪಾಲಾಗಿತ್ತು. ಇತ್ತ ರೋಹಿತ್ ಶರ್ಮಾ ತಂಡ ಕಳೆ ಬಾರಿಯೂ ಫೈನಲ್ಗೇರಿ ನ್ಯೂಜಿಲ್ಯಾಂಡ್ ವಿರುದ್ಧ ಸೋತಿದ್ದರೆ ಹಾಲಿ ಆವೃತ್ತಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಮಣಿಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಓದಿಗಾಗಿ : 1. ಕೊರಿಯಾವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ಕಿರಿಯ ಮಹಿಳಾ ತಂಡ
5. ಕಾಂಗ್ರೆಸ್‌ನಲ್ಲಿ ಪ್ರಿಯಾಂಕಾ ಗಾಂಧಿಗೆ ಫುಲ್ ಜವಾಬ್ದಾರಿ! ಶೀಘ್ರ ಸಿಡಬ್ಲ್ಯೂಸಿ ಪುನರ್ ರಚನೆ
ಹಿಮಾಚಲ ಪ್ರದೇಶ (Himachal Pradesh) ಮತ್ತು ಕರ್ನಾಟಕ (Karnataka) ರಾಜ್ಯಗಳಲ್ಲಿನ ಭರ್ಜರಿ ಜಯದಿಂದ ಉತ್ಸಾಹಿತವಾಗಿರುವ ಗ್ರ್ಯಾಂಡ್ ಓಲ್ಡ್ ಪಾರ್ಟಿ ಕಾಂಗ್ರೆಸ್ (Congress Party) 2024ರ ಲೋಕಸಭೆ ಚುನಾವಣೆಗೆ (Lok Sabha Election) ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳಲ್ಲಿ ಪಕ್ಷದ ನೀತಿ ನಿರ್ಧಾರಗಳನ್ನು ನಿರೂಪಿಸುವ ಕಾಂಗ್ರೆಸ್ ವರ್ಕಿಂಗ್ ಕಮೀಟಿ(CWC)ಯನ್ನು ಪುನರ್ ರಚಿಸಲು ತಯಾರಿ ಮಾಡಿಕೊಳ್ಳುತ್ತಿದೆ. ವಿಶೇಷವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡುವ ಸಾಧ್ಯತೆಗಳಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ರಾಹುಲ್ ಗಾಂಧಿ (Rahul Gandhi) ಅವರು ಈಗಾಗಲೇ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Sachin Pilot: ಸಚಿನ್ ಬಂಡಾಯ ಬರೀ ‘ಪೈಲಟ್’ ಪ್ರಾಜೆಕ್ಟ್; ಹೊಸ ಪಕ್ಷ ಘೋಷಣೆ ಇಲ್ಲ, ಮತ್ತೆ ಠುಸ್ ಪಟಾಕಿ 2018ರಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ, ತಮ್ಮದೇ ಪಕ್ಷದ ನಾಯಕ ಅಶೋಕ್ ಗೆಹ್ಲೋಟ್ ವಿರುದ್ಧ ಸಚಿನ್ ಪೈಲಟ್ (Sachin Pilot) ಅವರು ಸತತವಾಗಿ ಬಂಡಾಯದ ಬಾವುಟ ಹಾರಿಸಿದ್ದೇ ಬಂತು. ಆದರೆ ಇದುವರೆಗೆ ಗೆಹ್ಲೋಟ್ ವಿರುದ್ಧ ಸಾರಿದ ಒಂದೇ ಒಂದು ಬಂಡಾಯದಲ್ಲಿ ಸಚಿನ್ ಪೈಲಟ್ ಮುನ್ನಡೆ ಕಂಡಿಲ್ಲ. ಸಚಿನ್ ಪೈಲಟ್ ತಂದೆ ರಾಜೇಶ್ ಪೈಲಟ್ ಅವರ ಪುಣ್ಯಸ್ಮರಣೆಯ ದಿನವಾದ ಜೂನ್ 11ರಂದು ನೂತನ ಪಕ್ಷ ಸ್ಥಾಪನೆಯ ಘೋಷಣೆ ಮಾಡುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಪುಣ್ಯಸ್ಮರಣೆಯ ದಿನ ಬೃಹತ್ ಕಾರ್ಯಕ್ರಮ ಆಯೋಜಿಸಿದ ಸಚಿನ್ ಪೈಲಟ್, ಹೊಸ ಪಕ್ಷದ ಘೋಷಣೆ ಮಾಡಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಅಮೆರಿಕದಲ್ಲೂ ಹಿಂದುಗಳಿಗೆ ಅಪಾಯ! ಮೊದಲ ಬಾರಿಗೆ ನಡೆಯಲಿದೆ ಹಿಂದು ಅಮೆರಿಕನ್ ಶೃಂಗ ಸಭೆ
ವಾಷಿಂಗ್ಟನ್, ಅಮೆರಿಕ: ಇದೇ ಮೊದಲ ಬಾರಿಗೆ ಅಮೆರಿಕದ (America) ಕ್ಯಾಪಿಟಲ್‌ನಲ್ಲಿ (Capitol) ಹಿಂದು-ಅಮೆರಿಕನ್ ಶೃಂಗಸಭೆಯನ್ನು(Hindu American Summit) ಇಂಡಿಯನ್-ಅಮೆರಿಕನ್ನರು ಆಯೋಜಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೆರಿಕದ ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ (House Speaker Kevin McCarthy) ಮಾತನಾಡಲಿದ್ದಾರೆ. ಅಮೆರಿಕದಲ್ಲಿರುವ ಕೆಲವು ಸಂಘಟನೆಗಳು ಹಿಂದೂಗಳ ವಿರುದ್ಧ ಮಸಲತ್ತು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ಆಧಾರ್ ಜತೆ ಲಿಂಕ್ ಮಾಡದಿದ್ದರೆ, ಜುಲೈ 1ರಿಂದ ಪ್ಯಾನ್ ನಿಷ್ಕ್ರಿಯ
PAN Aadhaar Linking: ಸರ್ಕಾರ 2023ರ ಜೂನ್ 30ರೊಳಗೆ ಕಡ್ಡಾಯವಾಗಿ ಪ್ಯಾನ್- ಆಧಾರ್ ಲಿಂಕ್ ಮಾಡಲು ಗಡುವನ್ನು ನಿಗದಿಪಡಿಸಿದೆ. (Permanent Account Number-PAN) ತಪ್ಪಿದರೆ 2023ರ ಜುಲೈ 1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಈ ಹಿಂದೆ 2023ರ ಮಾರ್ಚ್ 31 ಗಡುವು ನಿಗದಿಪಡಿಸಲಾಗಿತ್ತು. ಹೀಗಿದ್ದರೂ ಮತ್ತೆ ಮೂರು ತಿಂಗಳಿಗೆ, ಅಂದರೆ ಜೂನ್ 30 ಕ್ಕೆ ವಿಸ್ತರಿಸಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ಸೈಬರ್ ಸೇಫ್ಟಿ ಅಂಕಣ: ಸೈಬರ್ ಬೆದರಿಕೆಗೆ ಧೈರ್ಯವೇ ಔಷಧ
“ಏಯ್ ಬುಲ್ ಬುಲ್ ಮಾತಾಡಕಿಲ್ವಾ?” ಈ ಡಯಲಾಗ್ ಎಲ್ಲರಿಗೂ ಗೊತ್ತಿರಬಹುದು. ಜಲೀಲ ಪಾತ್ರಧಾರಿ ಅಂಬರೀಷ್ ಅಲಮೇಲು ಪಾತ್ರಧಾರಿ ಆರತಿಯವರನ್ನು ಕಾಲೇಜಿಗೆ ಹೋಗುವ ದಾರಿಯಲ್ಲಿ ಚುಡಾಯಿಸುತ್ತಾ ಹಿಂಬಾಲಿಸುವ ದೃಶ್ಯ. ನಾಗರ ಹಾವು ಚಿತ್ರದ್ದು. ಶಾಲಾಕಾಲೇಜುಗಳಲ್ಲಿ ಓದುವಾಗಲೂ ಈ ರೀತಿಯ ಘಟನೆಗಳು ನಿಮ್ಮ ಗಮನಕ್ಕೆ ಬಂದಿರಬಹುದು, ಅಥವಾ ಅನುಭವವಾಗಿರಬಹುದು. ಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.
10. ವಡಾ ಪಾವ್ ತಿಂದು, ಅಯ್ಯೋ ಖಾರ ಅಂದ್ರು ಜಪಾನ್ ರಾಯಭಾರಿ
ಖಾರದ ಖಾದ್ಯಗಳಲ್ಲಿ ವಡಾ ಪಾವ್‌ಗೆ (Vada Pav) ತನ್ನದೇ ಆದ ಸ್ಥಾನವಿದೆ. ವಿಶೇಷವಾಗಿ ಮಹಾರಾಷ್ಟ್ರ, ಮುಂಬೈಗೆ ಹೋದವರು ಈ ವಡಾ ಪಾವ್ ತಿನ್ನದೇ ಬರೋದಕ್ಕೆ ಆಗಲ್ಲ. ಅಷ್ಟರ ಮಟ್ಟಿಗೆ ಅದು ಫೇಮಸ್ಸು. ಇತ್ತೀಚೆಗಷ್ಟೇ, ಭಾರತಕ್ಕೆ ಆಗಮಿಸಿದ್ದ ಟ್ವಿಟರ್ ಸಿಇಒ ಟಿಮ್ ಕುಕ್ ಅವರಿಗೆ ನಟಿ ಮಾಧುರಿ ದಿಕ್ಷಿತ್ ಅವರು ವಡಾ ಪಾವ್ ರುಚಿ ತೋರಿಸಿದ್ದರು. ಇದೀಗ ಭಾರತದಲ್ಲಿರುವ ಜಪಾನ್ ರಾಯಭಾರಿ (Japan ambassador) ಹಿರೋಶಿ ಸುಜುಕಿ (Hiroshi Suzuki) ಹಾಗೂ ಅವರ ಪತ್ನಿ ವಡಾ ಪಾವ್ ತಿನ್ನುವ ವಿಡಿಯೋ ಸಖತ್ ವೈರಲ್ (Video Viral) ಆಗಿದೆ. ವಿಶೇಷ ಎಂದರೆ ಈ ವಿಡಿಯೋಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೂ ಪ್ರತಿಕ್ರಿಯಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.