Site icon Vistara News

Lawyers Protest: ಸುಳ್ಳು ಕೇಸ್‌ಗೆ ತೀವ್ರ ಆಕ್ರೋಶ; ರಾಮನಗರದಲ್ಲಿ ವಕೀಲರ ಪ್ರತಿಭಟನೆಗೆ ಎಚ್‌ಡಿಕೆ, ಆರ್‌.ಅಶೋಕ್‌ ಬೆಂಬಲ

Lawyers protest near Ramanagara DC's office

ರಾಮನಗರ: 40 ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಐಜೂರು ಪೊಲೀಸ್‌ ಠಾಣೆ ಪಿಎಸ್‌ಐ ತನ್ವೀರ್‌ ಹುಸೇನ್‌ ಅಮಾನತಿಗೆ ಆಗ್ರಹಿಸಿ ನಗರದ ಡಿಸಿ ಕಚೇರಿ ಎದುರು ನೂರಾರು ವಕೀಲರು ಸೋಮವಾರ ರಾತ್ರಿ ಅಹೋರಾತ್ರಿ ಪ್ರತಿಭಟನೆ (Lawyers Protest) ನಡೆಸಿದರು. ಪ್ರತಿಭಟನೆಯಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್‌.ಅಶೋಕ್‌ ಭಾಗಿಯಾಗಿ ವಕೀಲರ ಹೋರಾಟಕ್ಕೆ ಬೆಂಬಲ ನೀಡಿದರು.

ಪ್ರತಿಭಟನೆಯಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮಾತನಾಡಿ, ಆರಂಭದಲ್ಲೇ ಈ ಪ್ರಕರಣ ಇತ್ಯರ್ಥ ಮಾಡಬಹುದಿತ್ತು. ಜನಸಾಮಾನ್ಯರಿಗೊಂದು ಬೇರೆಯವರಿಗೊಂದು ಕಾನೂನು ಇಲ್ಲ. ಚುನಾವಣೆ ಬಂದಾಗ ಪಕ್ಷ, ನಂತರ ಜನರಿಗೆ ರಕ್ಷಣೆ ಕೊಡಬೇಕು. ಅಧಿಕಾರಿಗಳು ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಆಗಿದೆ ಸರಿಪಡಿಸುತ್ತೇವೆ ಎಂದಿದ್ದರು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ಅಕ್ಕಬುಕ್ಕರು ಅಲ್ಲಿ ಕೂತಿದ್ದು, ದುರಂಹಾಕಾರ ಮಾತನಾಡುತ್ತಿದ್ದಾರೆ. ನಾಳೆ ವಿಧಾನಸಭೆಯಲ್ಲಿ ಶುರು ಮಾಡುತ್ತಾರೆ. ಇದರಲ್ಲಿ ಧರ್ಮ ಮಿಶ್ರಣ ಮಾಡುತ್ತಿದ್ದಾರೆ ಎಂಬ ಚರ್ಚೆ ಪ್ರಾರಂಭಿಸುತ್ತಾರೆ. ನಾನು ಎಂದಿಗೂ ಇಂತಹ ವಿಷಯ ರಾಜಕೀಯಕ್ಕೆ ಬಳಸಿಲ್ಲ. ಮಿಟ್ಟೇನಹಳ್ಳಿ ಗೋಲಿಬಾರ್‌ನಲ್ಲಿ ರೈತರನ್ನು ಬಲಿ ಪಡೆದರು. ಬಳಿಕ ದೇವೇಗೌಡರು ಅಲ್ಲಿಂದ ರ‍್ಯಾಲಿ ಮಾಡಿ ಮೃತ ಕುಟುಬಸ್ಥರಿಗೆ ನ್ಯಾಯ ಕೊಡಿಸಿದ್ದರು. ಮಂಡ್ಯದಲ್ಲಿ ಕೆರಗೋಡು ಸಹ ಇದೇ ರೀತಿ ಆಯ್ತು ಎಂದು ತಿಳಿಸಿದರು.

ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಹಿಂದುಗಳ, ಜಡ್ಜ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಮಂಗಳೂರಿನಲ್ಲಿ ಇದೇ ರೀತಿ ಎಂಎಲ್ಎ ಮೇಲೆ ಎಫ್ಐಆರ್ ಹಾಕಿದ್ದಾರೆ. ಇಲ್ಲಿನ ಪೊಲೀಸರು ಸಹ ಅದೇ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ನಮ್ಮಪ್ಪನ ಕಾಲದಿಂದಲೂ ಜ್ಞಾನ ದೇಗುಲ, ಕೈ ಮುಗಿದು ಒಳಗೆ ಬನ್ನಿ ಎಂದು ಶಾಲಾ ಬಾಗಿಲ ಮೇಲೆ ಹಾಕುತ್ತಿದ್ದರು. ಆದರೆ ಅದನ್ನು ಅವನ್ಯಾರೋ ಐಎಎಸ್ ಅಧಿಕಾರಿ, ಮತಾಂಧ ತೆಗೆಸಿದ್ದಾನೆ. ಈ ರೀತಿ ಸರ್ಕಾರ ಬಂದ 8 ತಿಂಗಳಲ್ಲಿ ಎಲ್ಲಾ ಕಡೆ ನಡೆಯುತ್ತಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ | Residential Schools: ಜ್ಞಾನ ದೇಗುಲ ವಿವಾದ; ಘೋಷವಾಕ್ಯ ಬದಲಿಸಲು ಆದೇಶವನ್ನೇ ಹೊರಡಿಸಿಲ್ಲ; ಸಚಿವ ಮಹದೇವಪ್ಪ

ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ದುಷ್ಟರು, ಭ್ರಷ್ಟರಿಗೆ ರಕ್ಷಣೆ ಕೊಡೋ ಕೆಲಸ ಮಾಡುತ್ತಿದ್ದಾರೆ. ನಾಳೆ ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡುವೆ. ನಿಮ್ಮ ಪರವಾಗಿ ವಿಧಾನಸಭೆಯಲ್ಲಿ ಚರ್ಚೆ ಮಾಡುವೆ. ನಾಳೆ ನೀವು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿ ಓಡಿಹೋಗುವುದೇನಿತ್ತು? ಇದು ಸರ್ಕಾರ ತಲೆತಗ್ಗಿಸುವಂತಹ ಕೆಲಸ. ಬೀಗ ಹೊಡೆದು ಓಡಿಹೋಗುವುದೇನಿತ್ತು? ಯಾರಾದ್ರೂ ಕಳ್ಳರು ಹೋಗಿದ್ರೆ ಸರಿ ಇವರೇ ಓಡಿಹೋದ್ರೆ ಹೇಗೆ ಎಂದು ಪ್ರಶ್ನಿಸಿದರು.

Exit mobile version