Site icon Vistara News

Karnataka Election: ದುಬಾರಿ ಹೇಳಿಕೆ ನೀಡಿ ಪಕ್ಷಕ್ಕೆ ಘಾಸಿ ಮಾಡದಂತೆ ನಾಯಕರಿಗೆ ‘ಕಾಂಗ್ರೆಸ್ ಥಿಂಕ್‌ ಟ್ಯಾಂಕ್‌’ ತಾಕೀತು

Karnataka Election 2023 congress calls virtual meeting of all candidates

ಬೆಂಗಳೂರು, ಕರ್ನಾಟಕ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ʻಭ್ರಷ್ಟ ಲಿಂಗಾಯತ ಸಿಎಂʼ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ʻಮೋದಿ ವಿಷದ ಹಾವುʼ ಹೇಳಿಕೆಯಿಂದ ಕಾಂಗ್ರೆಸ್‌ನೊಳಗೆ (Congress) ಭಾರಿ ಆತಂಕದ ಛಾಯೆ ಆವರಿಸಿದೆ. ಪಕ್ಷ ಜನಮನ್ನಣೆಯೊಂದಿಗೆ ಲೀಡಿಂಗ್‌ನಲ್ಲಿರುವ ಹೊತ್ತಿನಲ್ಲಿ ನಾಯಕರು ನೀಡುವ ಎಡವಟ್ಟು ಹೇಳಿಕೆಗಳು ಭಾರಿ ಪೆಟ್ಟು ನೀಡುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ನ ಥಿಂಕ್‌ ಟ್ಯಾಂಕ್ (Congress Think Tank) ಎಚ್ಚರಿಸಿದೆ(Karnataka Election 2023)

ಚುನಾವಣಾ ಸಂದರ್ಭದಲ್ಲಿ ನಾಯಕರು ನೀಡುತ್ತಿರುವ ಹೇಳಿಕೆಗಳು ದುಬಾರಿಯಾಗುವ ಸಾಧ್ಯತೆಗಳು ಹೆಚ್ಚು. ಪಿಎಂ ಮೋದಿ ವಿಷದ ಹಾವು ಇದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದರು. ಇದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂಬುದು ಗೊತ್ತಾಗುತ್ತಿದ್ದಂತೆ ಖರ್ಗೆ ಅವರು ವಿಷಾದ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ಅವರು ಭ್ರಷ್ಟ ಲಿಂಗಾಯತ ಸಿಎಂ ಎಂದು ಹೇಳಿದ್ದು, ಕೂಡ ದುಬಾರಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಖರ್ಗೆ ಮತ್ತು ಸಿದ್ದರಾಮಯ್ಯ ಅವರ ಹೇಳಿಕೆಗಳನ್ನೇ ಬಿಜೆಪಿ ಈಗ ಅಸ್ತ್ರ ಮಾಡಿಕೊಂಡಿದೆ. ಮೋದಯನ್ನು ಜರಿದರು ಎಂದು ಇಡೀ ದೇಶಾದ್ಯಂತ ಪ್ರಚಾರ ಮಾಡುತ್ತಿದೆ. ಈ ಇದಕ್ಕೆ ಕಾಂಗ್ರೆಸ್ ದಲಿತಾಸ್ತ್ರವನ್ನು ಪ್ರಯೋಗಿಸಿದೆ. ದಲಿತ ಕುಟುಂಬದಿಂದ ಬಂದ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿಗರು ದಲಿತರಿಗೆ ಅಧಿಕಾರ ಕೊಡಲಿ ಎಂದು ಕಾಂಗ್ರೆಸ್ ಪ್ರಚಾರ ಮಾಡಲಿದೆ.

ಪ್ರಧಾನಿ ಮೋದಿ ವಿರುದ್ಧ ಯಾವ ನಾಯಕರೂ ವೈಯಕ್ತಿಕ ದಾಳಿ ನಡೆಸುವುದು ಬೇಡ. ವೈಯಕ್ತಿಕ ದಾಳಿ ನಡೆಸಿದರೆ ಅದರ ಲಾಭವನ್ನು ಬಿಜೆಪಿ ಪಡೆದುಕೊಳ್ಳಲಿದೆ. ಬಿಜೆಪಿಯ ಸಿದ್ಧಾಂತ ಮತ್ತು ಅದರ ಭ್ರಷ್ಟಾಚಾರ ಪ್ರಕರಣಗಳನ್ನು ಬಗ್ಗೆ ಮಾತನಾಡುವಂತೆ ಕಾಂಗ್ರೆಸ್ ಟಿಂಕ್ ಟ್ಯಾಂಕ್ ನಾಯಕರಿಗೆ ಸಲಹೆ ನೀಡಿದೆ. ವಿಶೇಷವಾಗಿ ಕರ್ನಾಟಕದ ಸರ್ಕಾರ ಶೇ.40 ಕಮಿಷನ್ ಸರ್ಕಾರದ ಬಗ್ಗೆ ಹೆಚ್ಚೆಚ್ಚು ಪ್ರಸ್ತಾಪ ಮಾಡಲು ಸೂಚಿಸಿದೆ. ಭ್ರಷ್ಟಾಚಾರದ ಜತೆಗೆ ಬೆಲೆ ಏರಿಕೆಯ ಬಗ್ಗೆ ಮಾತನಾಡುವಂತೆ ತಿಳಿಸಲಾಗಿದೆ.

ಕಾಂಗ್ರೆಸ್ ಟಿಂಕ್ ಟ್ಯಾಂಕ್ ಸಲಹೆ ಮೇರೆಗೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ನಾನು ವಿರುದ್ಧ ವೈಯಕ್ತಿಕವಾಗಿ ಹೇಳಿಕೆ ನೀಡಿಲ್ಲ. ನಾನು ಬಿಜೆಪಿ ಸಿದ್ದಾಂತ ವಿಷ ಇದ್ದಂತೆ ಎಂದು ಹೇಳಿದ್ದೇನೆ ಎಂದು ಹೇಳಿದ್ದರಲ್ಲದೇ, ವಿಷಾದ ಕೂಡ ವ್ಯಕ್ತಪಡಿಸಿದ್ದರು.

Exit mobile version