ಹಾಸನ: ಇಲ್ಲಿನ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಚಿರತೆಯೊಂದು ಮನೆ ಕಾಂಪೌಂಡ್ ಹಾರಿ ನಾಯಿಯೊಂದನ್ನು ಹೊತ್ತೊಯ್ದ (Leopard Attack) ಘಟನೆ ನಡೆದಿದೆ. ತಡರಾತ್ರಿ 1 ಗಂಟೆ ಸುಮಾರಿಗೆ ಕಾಂಪೌಂಡ್ ನೆಗೆದು ಬಂದ ಚಿರತೆ, ಬಾಕ್ಸ್‌ಗೆ ಕಟ್ಟಿದ್ದ ನಾಯಿಯನ್ನು ಸಾಯಿಸಿ ಹೊತ್ತೊಯ್ದಿದೆ.
ಈ ಎಲ್ಲ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮನೆಯ ಆವರಣ ತುಂಬೆಲ್ಲ ನಿಧಾನವಾಗಿ ಚಲಿಸಿರುವ ಚಿರತೆ, ಮಲಗಿದ್ದ ನಾಯಿಯ ಕತ್ತು ಹಿಡಿದು ಸಾಯಿಸಿದೆ. ಬಾಕ್ಸ್‌ವೊಂದಕ್ಕೆ ನಾಯಿಯನ್ನು ಕಟ್ಟಿದ್ದರಿಂದ ಹೊತ್ತೊಯ್ಯಲು ಚಿರತೆ ಹೆಣಗಾಡಿದೆ.
ಬಳಿಕ ಮತ್ತೊಮ್ಮೆ ಕಾಂಪೌಂಡ್ ನೆಗೆದು ಹೊರಗೆ ಹೋಗಿ ವಾಪಸ್ ಬಂದ ಚಿರತೆ ನಾಯಿಯನ್ನು ಹೊತ್ತೊಯ್ದಿದೆ. ಮರುದಿನ ಬೆಳಗ್ಗೆ ಮನೆಯವರಿಗೆ ವಿಷಯ ಬೆಳಕಿಗೆ ಬಂದಿದ್ದು, ಸಿಸಿ ಟಿವಿ ಪರಿಶೀಲನೆ ನಡೆಸಿದ ಬಳಿಕ ಚಿರತೆ ಬಂದಿರುವುದು ಗೊತ್ತಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಪಲ್ಲವಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೋನು ಇರಿಸಿ ಚಿರತೆ ಸೆರೆ ಹಿಡಿಯಲು ಕ್ರಮ ವಹಿಸುವ ಭರವಸೆ ನೀಡಿದ್ದಾರೆ. ಹಾಸನ ಜನರಿಗೆ ಈಗ ಚಿರತೆಯ ದಾಳಿ ಆತಂಕವನ್ನು ಹೆಚ್ಚಿಸಿದೆ.
ಇದನ್ನೂ ಓದಿ | ಬೆಳಗಾವಿ: ಚಿರತೆ ದಾಳಿ ಮಾಡಿದರೂ ಬದುಕಿದ ಮಗ, ಆಕ್ರಮಣದ ಸುದ್ದಿ ಕೇಳಿಯೇ ತಾಯಿ ಮೃತ್ಯು