Site icon Vistara News

Leopard Attack: ಯಳಂದೂರಿನಲ್ಲಿ ಬಾಲಕನ ಮೇಲೆ ಚಿರತೆ ದಾಳಿ

Harshith injured in leopard attack

ಚಾಮರಾಜನಗರ: ಒಂಬತ್ತು ವರ್ಷದ ಬಾಲಕನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ಮಂಗಳವಾರ ನಡೆದಿದೆ. ನೆಂಟರ ಮನೆಯಿಂದ ತನ್ನ ಮನೆಗೆ ಬಾಲಕ ತೆರಳುವಾಗ ಚಿರತೆ ದಾಳಿ (Leopard Attack) ನಡೆಸಿದ್ದು, ಬಾಲಕನಿಗೆ ಗಾಯಗಳಾಗಿವೆ.

ಹರ್ಷಿತ್ (9) ಚಿರತೆ ದಾಳಿಗೊಳಗಾದ ಬಾಲಕ. ಬಾಲಕನ ಮೇಲೆ ದಾಳಿ ನಡೆಸಿದಾಗ ತಕ್ಷಣ ಸ್ಥಳೀಯರು ಚಿರತೆಯನ್ನು ಚಿರತೆಯನ್ನು ಓಡಿಸಿದ್ದಾರೆ. ಬಾಲಕನ ಮುಖ, ಗಂಟಲು, ಕಾಲು, ಹೊಟ್ಟೆಯ ಭಾಗಕ್ಕೆ ಗಾಯಗಳಾಗಿವೆ. ಸದ್ಯ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಹರ್ಷಿತ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. 4 ದಿನಗಳಿಂದ ಗ್ರಾಮದ ಸುತ್ತ ಮುತ್ತ ಚಿರತೆ ಓಡಾಟ ನಡೆಸುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ | Students Fall Sick: ಶಿಗ್ಗಾವಿಯಲ್ಲಿ ಬಿಸಿಯೂಟ ಸೇವಿಸಿ 34 ಶಾಲಾ ಮಕ್ಕಳು ಅಸ್ವಸ್ಥ

ಭದ್ರಾವತಿ ವಿಐಎಸ್‌ಎಲ್‌ ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷ

ಶಿವಮೊಗ್ಗ: ಭದ್ರಾವತಿ ವಿಐಎಸ್‌ಎಲ್‌ ಕಾರ್ಖಾನೆ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದೆ. ಚಿರತೆಯ ಓಡಾಡುತ್ತಿದ್ದ ದೃಶ್ಯವನ್ನು ಕಾರ್ಮಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಕಾರ್ಖಾನೆಯ ಬಿಜಿ ವೇಯಿಂಗ್‌ ಬ್ರಿಡ್ಜ್‌ ಸಮೀಪ ಚಿರತೆ ಪ್ರತ್ಯಕ್ಷವಾಗಿದೆ. ಹೀಗಾಗಿ ಕಾರ್ಖಾನೆ ವತಿಯಿಂದ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ. ರಾತ್ರಿ ವೇಳೆ ಕಾರ್ಮಿಕರು ಒಬ್ಬರೆ ಓಡಾಡದಂತೆ ಸೂಚಿಸಿಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೋನು ಇರಿಸಿದ್ದಾರೆ.

Exit mobile version