ಬೆಂಗಳೂರು: ಇಲ್ಲಿನ ರಾಜಗೋಪಾಲನಗರ ಸಮೀಪದ ಮೆಡಿಕಲ್ ವೇರ್‌ಹೌಸ್‌ನಲ್ಲಿ ಲಿಫ್ಟ್ ಕುಸಿದು (Lift Crash) ಕಾರ್ಮಿಕನೊಬ್ಬ ಮೃತಪಟ್ಟಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಬೆಂಗಳೂರಿನ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲಕ್ನೋ ಮೂಲದ ರಮೇಶ್ (32) ಸ್ಥಳದಲ್ಲೇ ಮೃತಪಟ್ಟವರು. ತಿಗಳರಪಾಳ್ಯದ ಅಪ್ನಾ ಮೆಡಿಕಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಪ್ರಕರಣ ನಡೆದಿದೆ.
ಅನುಮೋಲ್, ನಿಶ್ಚಿತ್, ಪುನೀತ್, ಪ್ರದೀಪ್ ಎಂಬ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೆಡಿಸಿನ್‌ಗಳನ್ನು ಓಪನ್ ಲಿಫ್ಟ್ ನಲ್ಲಿ ಸಾಗಿಸಿ ಕೆಳಕ್ಕೆ ಬರುತ್ತಿದ್ದ ವೇಳೆ ದುರಂತ ಸಂಭವಿಸಿದೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Murugha Seer | ಮುರುಘಾ ಶ್ರೀಗಳ ಮೇಲೆ ಪಿತೂರಿ ಪ್ರಕರಣ; ಎಸ್.ಕೆ. ಬಸವರಾಜನ್ ಬಿಡುಗಡೆ