Site icon Vistara News

kannada Rajyotsava| ಆಲಿಬಾಬರಂತೆ ತಾಲೂಕಿನಲ್ಲೂ ನಾಲ್ವರಿದ್ದಾರೆ; ಜೆಡಿಎಸ್‌ ಸದಸ್ಯನ ಹೇಳಿಕೆಗೆ ಸಚಿವ ನಾರಾಯಣ ಗೌಡ ಗರಂ

narayana gowda

ಮಂಡ್ಯ: ಇಲ್ಲಿನ ಕೆ.ಆರ್.ಪೇಟೆ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಚಿವ ನಾರಾಯಣ ಗೌಡ ಸೇರಿ ಜೆಡಿಎಸ್‌ ಮುಖಂಡರು ಭಾಗಿಯಾಗಿದ್ದರು. ಈ ವೇಳೆ ಜೆಡಿಎಸ್‌ ಪುರಸಭೆ ಸದಸ್ಯ ಬಸ್‌ ಸಂತೋಷ್‌ ಅವರ ವಿವಾದಾತ್ಮಕ ಹೇಳಿಕೆಗೆ ತಿರುಗಿ ಬಿದ್ದ ಸಚಿವ ನಾರಾಯಣ ಗೌಡ ಕೆಂಡಾಮಂಡಲರಾದರು.

ವೇದಿಕೆಯಲ್ಲಿ ಮೈಕ್‌ ಕಸಿದ ಸಚಿವ ನಾರಾಯಣ ಗೌಡ ಜೆಡಿಎಸ್‌ ಪುರಸಭೆ ಸದಸ್ಯೆ ಬಸ್‌ ಸಂತೋಷ್‌ ಅವರನ್ನು ತರಾಟೆ ತೆಗೆದುಕೊಂಡರು. ಕಾರ್ಯಕ್ರಮದ ಸಂಬಂಧ ಬಸ್‌ ಸಂತೋಷ್‌ ಮಾತನಾಡುವ ಭರದಲ್ಲಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಆಲಿಬಾಬಾ ಮತ್ತು 40 ಕಳ್ಳರ ರೀತಿಯಲ್ಲಿ ತಾಲೂಕಿನಲ್ಲೂ ನಾಲ್ವರು ಕಳ್ಳರು ಇದ್ದಾರೆ ಎಂದು ಪರೋಕ್ಷವಾಗಿ ಟಾಂಗ್‌ ಕೊಡಲು ಹೇಳಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಸಚಿವ ನಾರಾಯಣ ಗೌಡರು, ಬಸ್‌ ಸಂತೋಷ್‌ಗೆ ಏಕವಚನದಲ್ಲೇ ಭ್ರಷ್ಟರು ಯಾರು ಹೇಳು, ಕಳ್ಳರು ಯಾರು ಹೇಳು ಎಂದು ತರಾಟೆ ತೆಗೆದುಕೊಂಡರು. ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕಾರಣ ಮಾತನಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು. ಇತ್ತ ರಾಜಕೀಯ ನಾಯಕರ ಗದ್ದಲ ಗಲಾಟೆ ಹೆಚ್ಚಾಗುತ್ತಿದ್ದಂತೆ ಪೊಲೀಸರು ಸ್ಥಳಾಗಮಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾದರು.

ಮಧ್ಯಪ್ರವೇಶಿಸಿದ ಕರವೇ ನಾರಾಯಣಗೌಡ
ಕಾರ್ಯಕ್ರಮವನ್ನು ಆಯೋಜಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಮಧ್ಯಪ್ರವೇಶಿಸಿ ಗದ್ದಲ ಗಲಾಟೆಯನ್ನು ನಿಲ್ಲಿಸಿದ್ದರು. ಬಸ್‌ ಸಂತೋಷ್‌ ವಿರುದ್ಧ ಕಿಡಿಕಾರಿದ ನಾರಾಯಣಗೌಡ, ಕನ್ನಡದ ಬಗ್ಗೆ ಕಾರ್ಯಕ್ರಮ ಮಾಡಲು ಬಂದಿದ್ದೇವೆಯೇ ಹೊರತು ಇದು ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ ಎಂದರು. ಇದೇ ವೇಳೆ ರಾಜಕೀಯ ಪಕ್ಷಗಳ ಸಂಬಂಧ ಗುಡುಗಿದ ಕರವೇ ನಾರಾಯಣ ಗೌಡ, ನನ್ನ ಜೈಲಿಗೆ ಕಳುಹಿಸಿದ್ದು ಇದೇ ರಾಜಕೀಯ ಪಕ್ಷಗಳು. ನಾಡು ನುಡಿಗಾಗಿ ಯಾವ ಪಕ್ಷದವರು ಏನು ಮಾಡಿಲ್ಲ. ಕನ್ನಡಕ್ಕಾಗಿ ಹೋರಾಡಿದ್ದು, ಕೇಸ್ ಹಾಕಿಸಿಕೊಂಡು ಜೈಲಿಗೆ ಹೋಗಿದ್ದು ಕನ್ನಡಪರ ಸಂಘಟನೆಗಳೆಂದು ರಾಜಕೀಯ ನಾಯಕರ ನಡೆ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ | Seperate state | ಮತ್ತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗು ಮೊಳಗಿಸಿದ ಆನಂದ್‌ ಸಿಂಗ್‌: ತೀವ್ರ ಪ್ರತಿರೋಧ

Exit mobile version