Site icon Vistara News

Lingsugur Election Results: ಲಿಂಗಸುಗೂರು ಕ್ಷೇತ್ರದಲ್ಲಿ ಗೆದ್ದು ಬೀಗಿದ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್

manappa vajjal won the lingsugur constituency

ಬೆಂಗಳೂರು, ಕರ್ನಾಟಕ: ರಾಯಚೂರು ಜಿಲ್ಲೆಯ ಲಿಂಗಸುಗೂರು ಕ್ಷೇತ್ರದಲ್ಲಿ ಬಿಜೆಪಿಯ ಮಾನಪ್ಪ ವಜ್ಜಲ್ ಅವರು 58331 ಮತಗಳನ್ನು ಪಡೆದುಕೊಂಡಿದ್ದಾರೆ. ಅವರು ಕಾಂಗ್ರೆಸ್‌ನ ಡಿ ಎಸ್ ಹೊಲಗೇರಿ ವಿರುದ್ಧ 2758 ಮತಗಳ ಅಂತರದಲ್ಲಿ ಗೆಲುವ ಸಾಧಿಸಿದ್ದಾರೆ. ಹೊಲಗೇರಿ ಅವರಿಗೆ 55573 ಮತಗಳು ಬಂದರೆ, ಜೆಡಿಎಸ್‌ನ ಸಿದ್ದು ಬಂಡಿ 41099 ಮತ್ತು ಹಾಗೂ ಕೆಆರ್‌ಪಿ ಪಕ್ಷಧ ಪಿ ಆರ್ ರುದ್ರಯ್ಯ ಅವರು 13 ಸಾವಿರ ಮತಗಳನ್ನುಪಡೆದುಕೊಂಡಿದ್ದಾರೆ(Lingsugur Election Results).

2023ರ ಚುನಾವಣಾ ಅಭ್ಯರ್ಥಿಗಳು

ಈ ಬಾರಿಯ ಕಣದಲ್ಲಿ ಕೈ ಅಭ್ಯರ್ಥಿ ಡಿ ಎಸ್ ಹೂಲಗೇರಿ, ಜೆಡಿಎಸ್ ಅಭ್ಯರ್ಥಿಯಾಗಿ ಸಿದ್ದು ವೈ ಬಂಡಿ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಮಾನಪ್ಪ ವಜ್ಜಲ್ ಕಣದಲ್ಲಿದ್ದರು.

2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಲಿಂಗಸುಗೂರು ವಿಧಾನಸಭೆ ಕ್ಷೇತ್ರವು ರಾಯಚೂರು ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಮೊದಲಿನಿಂದಲೂ ಈ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. 2013ರ್ಲಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಾನಪ್ಪ ವಜ್ಜಲ್ ಅವರು ಆಯ್ಕೆಯಾಗಿದ್ದರು. 2018ರಲ್ಲಿ ಕಾಂಗ್ರೆಸ್ ಪಕ್ಷದ ಡಿ ಎಸ್ ಹೊಲಗೇರಿ ಅವರು 52230 ಮತಗಳನ್ನು ಪಡೆದುಕೊಂಡು ತಮ್ಮ ಪ್ರತಿ ಸ್ಪರ್ಧಿ ಜೆಡಿಎಸ್‌ನ ಬಂಡಿ ಸಿದ್ದು ಅವರ ವಿರುದ್ಧ 4946 ಮತಗಳ ಅಂತರದಿಂದ ಗೆದ್ದಿದ್ದರು. ಜೆಡಿಎಸ್ ಅಭ್ಯರ್ಥಿ 49284 ಮತಗಳನ್ನು ಪಡೆದುಕೊಂಡರೆ, ಬಿಜೆಪಿಯ ಮಾನಪ್ಪ ವಜ್ಜಲ್ ಅವರು 47,385 ಮತಗಳನ್ನು ಪಡೆಡುಕೊಂಡು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.

Exit mobile version