Site icon Vistara News

Car Accident: ಅಪಘಾತವಾದ ಕಾರಿನಲ್ಲಿ ಸಿ.ಟಿ ರವಿ ಚಿತ್ರವಿರುವ ಕ್ಯಾಲೆಂಡರ್, ಮದ್ಯ, ಲಾಂಗ್ ಪತ್ತೆ!

#image_title

ಚಿಕ್ಕಮಗಳೂರು: ನಗರದ ಎಐಟಿ ಸರ್ಕಲ್ ಸಮೀಪ ಅಪಘಾತವಾದ (Car Accident) ಕಾರಿನಲ್ಲಿ ಮದ್ಯದ ಪ್ಯಾಕೆಟ್‌, ಶಾಸಕ ಸಿ.ಟಿ. ರವಿ ಭಾವಚಿತ್ರವಿರುವ ಕ್ಯಾಲೆಂಡರ್, ಲಾಂಗ್ ಪತ್ತೆಯಾಗಿವೆ. ಬ್ರೇಕ್ ಸಮಸ್ಯೆಯಿಂದ ಕಾರೊಂದು ಭಾನುವಾರ ರಾತ್ರಿ ಡಿಕ್ಕಿಯಾಗಿದೆ. ಈ ವೇಳೆ ಕಾರನ್ನು ಸ್ಥಳೀಯರು ಪಕ್ಕಕ್ಕೆ ತಳ್ಳಲು ಮುಂದಾದಾಗ ಕಾರಿನಲ್ಲಿ ಮದ್ಯ,, ಕ್ಯಾಲೆಂಡರ್, ಲಾಂಗ್ ಕಂಡುಬಂದಿವೆ.

ಅಪಘಾತವಾದ ಬಳಿಕ ಜೀಪಿನಲ್ಲಿದ್ದವರು ಹಾಗೂ ಕಾರು ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳೀಯರು ಕಾರನ್ನು ಪಕ್ಕಕ್ಕೆ ತಳ್ಳಲು ಮುಂದಾದಾಗ ಮದ್ಯದ ಪ್ಯಾಕೆಟ್‌, ಶಾಸಕ ಸಿ.ಟಿ. ರವಿ ಭಾವಚಿತ್ರವಿರುವ ಕ್ಯಾಲೆಂಡರ್, ಲಾಂಗ್ ಪತ್ತೆಯಾಗಿವೆ. ಸ್ಥಳಕ್ಕೆ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಕಾರು ಚಾಲಕ ಹಾಗೂ ಕಾರಿನಲ್ಲಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ | Molestation Case: ವಿದ್ಯಾರ್ಥಿನಿಯರ ಜತೆ ಸರ್ಕಾರಿ ಶಿಕ್ಷಕನ ಕುಚೇಷ್ಟೆ; ಲೈಂಗಿಕ ಕಿರುಕುಳ ನೀಡುತ್ತಿದ್ದವನಿಗೆ ಬಿತ್ತು ಗೂಸಾ

ಒಣದ್ರಾಕ್ಷಿ ಮಾರಾಟ ಮಾಡದ ಹಿನ್ನೆಲೆ ಮಾಜಿ ಯೋಧನ ಮೇಲೆ‌ ಹಲ್ಲೆ

ಬಾಗಲಕೋಟೆ: ಒಣ ದ್ರಾಕ್ಷಿ ಮಾರಾಟ ಮಾಡದ ಹಿನ್ನೆಲೆಯಲ್ಲಿ ಮಾಜಿ ಯೋಧನ ಮೇಲೆ‌ ಮಹಾರಾಷ್ಟ್ರ ಮೂಲದ ವ್ಯಾಪಾರಸ್ಥರು ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೈದ ನಂತರ ವ್ಯಾಪಾರಿಗಳು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾನೆ.

ಮಾಜಿ ಯೋಧ ಶ್ರೀಧರ ಕಾಸೇರ ಗಾಯಾಳು. ಮಹಾರಾಷ್ಟ್ರ ಹಾಗೂ ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದ ಅನಿಲ ಪಾಟಿಲ್ ಸೇರಿ ಎಂಟು ಜನರು ಹಲ್ಲೆ ಮಾಡಿದ್ದಾರೆ. ರಾಡ್‌ ಹಾಗೂ ದೊಣ್ಣೆಗಳಿಂದ ಹಲ್ಲೆ ಮಾಡಿದ್ದರಿಂದ ತಲೆ ಹಾಗೂ ಮುಖದ ಭಾಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾಜಿ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Road Accident: ಬೈಕ್‌-ಕಾರು ನಡುವೆ ಮುಖಾಮುಖಿ ಡಿಕ್ಕಿ; ಬೈಕ್‌ ಸವಾರ ಮೃತ್ಯು

ಮಹಾರಾಷ್ಟ್ರದ ಅನಿಲ್ ಪಾಟಿಲ್‌ ಎಂಬ ಒಣದ್ರಾಕ್ಷಿ ವ್ಯಾಪಾರಸ್ಥನಿಗೆ ಗಾಯಾಳು ದ್ರಾಕ್ಷಿ ಮಾರಾಟ ಮಾಡುತ್ತಿದ್ದ. ಆದರೆ ಈ ವರ್ಷ ದ್ರಾಕ್ಷಿಯನ್ನು ಬೇರೆ ಕಡೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಗುಂಪಿನೊಂದಿಗೆ ಬಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಣೆಬೆನ್ನೂರು ಬಳಿ ಗುಂಪು ಘರ್ಷಣೆ; ಮೂವರಿಗೆ ಗಂಭೀರ ಗಾಯ

ಹಾವೇರಿ: ರಾಣೆಬೆನ್ನೂರು ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರಿಗೆ ಗಾಯಗಳಾಗಿವೆ. ಜಾಗದ ವಿಚಾರಕ್ಕೆ ಜಾದವ ಕುಟುಂಬ ಹಾಗೂ ದೇವಾಂಗ ಸಮಾಜದವರ ನಡುವೆ ಗಲಾಟೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

3 ಗುಡಿಸಲು ಮನೆಗಳಿಗೆ ಆಕಸ್ಮಿಕ ಬೆಂಕಿ

ಕೋಲಾರ: ಮೂರು ಗುಡಿಸಲು ಮನೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಗಳಲ್ಲಿದ್ದ ಆಹಾರ ಪದಾರ್ಥಗಳು, ಬಟ್ಟೆಗಳು ಸುಟ್ಟು ಕರಕಲಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮುತ್ತಕಪಲ್ಲಿ ಮಜರಾ ಗ್ರಾಮ ಕೋಡಿಪಲ್ಲಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗುಡಿಸಲುಗಳಿಗೆ ಬೆಂಕಿ ಬಿದ್ದ ಕೂಡಲೇ ಗ್ರಾಮಸ್ಥರು ಬೆಂಕಿ ನಂದಿಸಿದ್ದಾರೆ. ಬೆಂಕಿ ನಂದಿಸುವಷ್ಟರಲ್ಲಿ ಮನೆಗಳಲ್ಲಿದ್ದ ಬಹುತೇಕ ಸಾಮಗ್ರಿ ಬೆಂಕಿಗಾಹುತಿಯಾಗಿದ್ದವು.

Exit mobile version