Site icon Vistara News

Lok Sabha Election 2024: ರಾಜ್ಯದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ. 54.20 ಮತದಾನ; ಯಾವ ಕ್ಷೇತ್ರದಲ್ಲಿ ಎಷ್ಟು?

Lok Sabha Election 2024

ಬೆಂಗಳೂರು: ರಾಜ್ಯದಲ್ಲಿ ಬೆಳಗಾವಿ ಸೇರಿ 14 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ (lok sabha election 2024) ಮಂಗಳವಾರ ನಡೆಯುತ್ತಿದ್ದು, ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯಾಹ್ನ 3ಗಂಟೆವರೆಗೆ ಅಂದಾಜು ಶೇ.54.20 ಮತದಾರರು (Voter Turnout) ಹಕ್ಕು ಚಲಾಯಿಸಿದ್ದಾರೆ. ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ಎಂಬ ಮಾಹಿತಿ ಇಲ್ಲಿದೆ.

14 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದ ಮತದಾನ ಸಂಜೆ 6ಗಂಟೆವರೆಗೆ ನಡೆಯಲಿದೆ. ಬೆಳಗ್ಗೆ ಮೊದಲ ಎರಡು ಗಂಟೆಗಳಲ್ಲಿ ಅಂದರೆ 9 ಗಂಟೆವರೆಗೆ ಶೇ.9.45% ಮತದಾನ ದಾಖಲಾಗಿತ್ತು. ಬಳಿಕ 11 ಗಂಟೆಗೆ ಶೇ.24.48 ಹಾಗೂ 1 ಗಂಟೆವರೆಗೆ ಶೇ.41.59 ಮತದಾನ ವರದಿಯಾಗಿತ್ತು. ಅದೇ ರೀತಿ ಮಧ್ಯಾಹ್ನ 3ಗಂಟೆವರೆಗೆ ಶೇ.54.20 ವೋಟಿಂಗ್‌ ನಡೆದಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಗರಿಷ್ಠ ಶೇ.59.65 ಮತದಾನವಾಗಿದ್ದು, ಕಲಬುರಗಿಯಲ್ಲಿ ಕನಿಷ್ಠ ಶೇ.47.67 ವೋಟಿಂಗ್‌ ಆಗಿದೆ.

ಕ್ಷೇತ್ರವಾರು ಮತದಾನ ಮಾಹಿತಿ

ಬಾಗಲಕೋಟೆ- ಶೇ. 54.95
ಬೆಳಗಾವಿ- ಶೇ.53.85
ಬಳ್ಳಾರಿ-ಶೇ.56.76
ಬೀದರ್-‌ ಶೇ. 49.89
ವಿಜಯಪುರ-ಶೇ.49.88
ಚಿಕ್ಕೋಡಿ-ಶೇ. 59.65
ದಾವಣಗೆರೆ- ಶೇ. 57.31
ಧಾರವಾಡ- ಶೇ. 55
ಕಲಬುರಗಿ-ಶೇ.47.67
ಹಾವೇರಿ-ಶೇ. 58.45
ಕೊಪ್ಪಳ- ಶೇ. 55.06
ರಾಯಚೂರು-ಶೇ.49.49
ಶಿವಮೊಗ್ಗ-ಶೇ.57.96
ಉತ್ತರ ಕನ್ನಡ-ಶೇ.55.98

ಇದನ್ನೂ ಓದಿ | Lok Sabha Election 2024: ಮತ ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ; ಮತದಾನ ಮಾಡಲು ಕನ್ನಡದಲ್ಲೇ ಕರೆ

Exit mobile version