ಬೆಂಗಳೂರು: ರಾಜ್ಯದ 14 ಕ್ಷೇತ್ರಗಳ ಲೋಕಸಭಾ ಚುನಾವಣೆಯ (Lok Sabha Election 2024) ಮೊದಲ ಹಂತದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶುಕ್ರವಾರ ಸಂಜೆ 5 ಗಂಟೆವರೆಗೆ ಶೇ 63.90 ಮತದಾನ ದಾಖಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ ವೋಟಿಂಗ್ ದಾಖಲಾಗಿದೆ.
ಮಂಡ್ಯ ಕ್ಷೇತ್ರದಲ್ಲಿ ಶೇ. 74.87, ಉಡುಪಿ-ಚಿಕ್ಕಮಗಳೂರು 72.13, ಹಾಸನ 72.13, ದಕ್ಷಿಣ ಕನ್ನಡ 71.83 ಬೆಂಗಳೂರು ಸೆಂಟ್ರಲ್ 48.61 ಮತದಾನವಾಗಿದೆ. ಇನ್ನು ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಕೊನೆಯ ಕ್ಷಣದಲ್ಲಿ ಹಲವು ಕಡೆ ಮತದಾರರು ಓಡೋಡಿ ಬಂದಿದ್ದು ಕಡುಬಂದಿದೆ. ಆದರೆ, 6 ಗಂಟೆ ವೇಳೆಗೆ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಿದ್ದು, ನಂತರ ಬಂದವರಿಗೆ ಮತದಾನ ಮಾಡಲು ಬಿಟ್ಟಿಲ್ಲ. ಸಮಯ ಮುಗಿದ ಹಿನ್ನೆಲೆ ಮತದಾನಕ್ಕೆ ಸಿಬ್ಬಂದಿ ಅವಕಾಶ ಮಾಡಿಕೊಟ್ಟಿಲ್ಲ. ಕೆಲವರು ಇನ್ನೂ ಸಮಯವಿತ್ತು ಆದರೂ ತಮ್ಮನ್ನು ಬಿಟ್ಟಿಲ್ಲ ಎಂದು ಆರೋಪಿಸಿರುವುದು ಕಂಡುಬಂದಿದೆ.
ಮಧ್ಯಾಹ್ನ 3 ಗಂಟೆವರೆಗೆ ಶೇ. 50.93 ಮತದಾನ
ಮಧ್ಯಾಹ್ನ 3 ಗಂಟೆವರೆಗೆ ಶೇ. 50.93 ಮತದಾನ ದಾಖಲಾಗಿತ್ತು. ದಕ್ಷಿಣ ಕನ್ನಡ – 58.76, ಉಡುಪಿ – 57.49, ಮಂಡ್ಯ – 57.44, ತುಮಕೂರು -56.62, ಹಾಸನ – 55.90 ಮತದಾನ ಆಗಿದ್ದು, ಈ ಕ್ಷೇತ್ರದಲ್ಲಿ ಶರವೇಗದಲ್ಲಿ ಮತದಾನ ಮಾಡಿದ್ದರು.