ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ (Lok Sabha Election 2024) ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಒಟ್ಟು 55.67 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಆನಂದಸ್ವಾಮಿ ಗಡ್ಡದೇವರಮಠ ಅವರ ಬಳಿ 50 ಸಾವಿರ ರೂ. ನಗದು, ಬ್ಯಾಂಕ್ ಮತ್ತು ಫೈನಾನ್ಸ್‌ಗಳಲ್ಲಿ 1.69 ಕೋಟಿ ರೂ., ವಿಮೆ, ಅಂಚೆ ಕಚೇರಿ ಇತ್ಯಾದಿಗಳಲ್ಲಿ 7.76 ಕೋಟಿ ರೂ. ಠೇವಣಿ ಹೊಂದಿದ್ದಾರೆ. ವಿವಿಧ ಸಂಸ್ಥೆ, ಫರ್ಮ್ಸ್, ಟ್ರಸ್ಟ್‌ಗಳು ಹಾಗೂ ವೈಯಕ್ತಿಕ ಸಾಲವಾಗಿ 5.15 ಕೋಟಿ ರೂ. ತೊಡಗಿಸಿದ್ದಾರೆ.
ಒಂದು ಹೊಂಡಾ ಸಿಟಿ ಕಾರು, ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಬ್ರಿಡ್ ಹಾಗೂ ಒಂದು ಬೈಕ್ ಸೇರಿದಂತೆ 50.54 ಲಕ್ಷ ರೂ. ಮೌಲ್ಯದ ವಾಹನಗಳನ್ನು ಹೊಂದಿದ್ದಾರೆ. ಇನ್ನು 80 ಸಾವಿರ ಮೌಲ್ಯದ ಚಿನ್ನಾಭರಣವಿದ್ದು, ಇವರ ಪತ್ನಿ ಬಳಿ 60 ಸಾವಿರ ನಗದು ಸೇರಿ 6.80 ಲಕ್ಷ ಮೌಲ್ಯದ ಚರಾಸ್ತಿ ಇದೆ. ಮೊದಲ ಪುತ್ರಿ ಬಳಿ 30.29 ಲಕ್ಷ, ಎರಡನೇ ಪುತ್ರಿ ಬಳಿ 10.28 ಲಕ್ಷ, ಮೂರನೇ ಪುತ್ರಿ ಬಳಿ 10.08 ಲಕ್ಷ ಹಾಗೂ ಪುತ್ರನ ಬಳಿ 6.72 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಪತ್ನಿ ಬಳಿ 46.72 ಲಕ್ಷ ಮೌಲ್ಯದ ಸ್ಥಿರಾಸ್ತಿಯಿದೆ.
ಇದನ್ನೂ ಓದಿ | Lok Sabha Election 2024: ಗೀತಾ ಶಿವರಾಜ್‌ಕುಮಾರ್ ಬಳಿ ಇದೆ 11.54 ಕೆಜಿ ಚಿನ್ನ, 30 ಕೆಜಿ ಬೆಳ್ಳಿ; ಒಟ್ಟು ಆಸ್ತಿ ಎಷ್ಟು?
ಮೃಣಾಲ್ ಹೆಬ್ಬಾಳ್ಕರ್ ಕೋಟ್ಯಧಿಪತಿಯಾದರೂ ಸ್ವಂತ ಕಾರಿಲ್ಲ
ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಮೃಣಾಲ್ ಅವರು ಸೋಮವಾರ ನಾಮಪತ್ರ ಸಲ್ಲಿಸಿದ್ದು, ಒಟ್ಟು 13.63 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. 1.72 ಲಕ್ಷ ನಗದು ಹೊಂದಿರುವ ಮೃಣಾಲ್ 10.01 ಕೋಟಿ ಚರಾಸ್ತಿ, 3.62 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ.
ಮೃಣಾಲ್ ಹೆಬ್ಬಾಳ್ಕರ್ ಕೋಟ್ಯಾಧಿಪತಿ ಆದರೂ ಒಂದೇ ಒಂದು ವಾಹನ ಹೊಂದಿಲ್ಲ. 3.78 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ ಹೊಂದಿರುವ ಮೃಣಾಲ್ ಬಳಿ ಬೆಳ್ಳಿ ಇಲ್ಲ. 4.20 ಕೋಟಿ ಮೌಲ್ಯದ ವಿವಿಧ ಕಂಪನಿಗಳ ಷೇರ್‌ಗಳು ಮೃಣಾಲ್ ಬಳಿ ಇವೆ. 6.16 ಕೋಟಿ ಸಾಲ ಹೊಂದಿರುವ ಮೃಣಾಲ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ.
ಮೃಣಾಲ್ ಪತ್ನಿ ಹಿತಾ 23.55 ಲಕ್ಷ ಆಸ್ತಿ ಹೊಂದಿದ್ದಾರೆ. ನಗದು 46,200, ಒಟ್ಟು ಚರಾಸ್ತಿ 23.55 ಲಕ್ಷ ಹೊಂದಿರುವ ಹಿತಾ ಸ್ಥಿರಾಸ್ತಿ ಹೊಂದಿಲ್ಲ, ವಾಹನವೂ ಇಲ್ಲ. 12.50 ಲಕ್ಷ ಮೌಲ್ಯದ ಚಿನ್ನ, 2.15 ಲಕ್ಷ ಮೌಲ್ಯದ ಬೆಳ್ಳಿ ಹೊಂದಿರುವ ಹಿತಾ ಯಾವುದೇ ಸಾಲ ಹೊಂದಿಲ್ಲ.
ಇದನ್ನೂ ಓದಿ | DK Shivakumar: ದೆಹಲಿಯಲ್ಲಿ ಎಲ್ಲವೂ ತೀರ್ಮಾನವಾಗಿದೆ; ಸಿಎಂ ಬದಲಾವಣೆ ಸುಳಿವು ನೀಡಿದ ಡಿಕೆಶಿ!
ಪುತ್ರಿ ಐರಾ ಬಳಿ 7.85 ಲಕ್ಷ ಮೌಲ್ಯದ ಚಿನ್ನ–ಬೆಳ್ಳಿ ಆಭರಣಗಳಿವೆ. ತಾಯಿ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿದ್ದರೂ ತಂದೆ-ತಾಯಿ ಆಸ್ತಿ ವಿವರಗಳನ್ನು ಮೃಣಾಲ್ ಉಲ್ಲೇಖಿಸಿಲ್ಲ.