ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಸ್ಟಾರ್ ಪ್ರಚಾರಕರ (Congress Star campaigners) ಪಟ್ಟಿ ಬಿಡುಗಡೆ ಮಾಡಲಾಗಿದೆ. ಒಟ್ಟು 40 ಸ್ಟಾರ್ ಪ್ರಚಾರಕರ ಹೆಸರನ್ನು ಘೋಷಣೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್‌ಗೆ (Nasir Hussain) ಸ್ಥಾನ ಕಲ್ಪಿಸಲಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ನಾಸಿರ್ ಹುಸೇನ್ ವಿವಾದಕ್ಕೊಳಗಾಗಿದ್ದರು. ಅಲ್ಲದೆ, ಇದನ್ನು ಪ್ರಶ್ನೆ ಮಾಡಿದ್ದ ಮಾಧ್ಯಮಗಳ ಮೇಲೂ ಹರಿಹಾಯ್ದಿದ್ದರು. ಆದರೆ, ಈಗ ಅವರನ್ನು ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಗೆ ಸೇರಿಸಲಾಗಿದೆ.
ಟಿಕೆಟ್ ವಂಚಿತ ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಎಲ್. ಹನುಮಂತಯ್ಯ ಅವರಿಗೂ ಸ್ಟಾರ್ ಕ್ಯಾಂಪೇನರ್ ಸ್ಥಾನವನ್ನು ಕೊಡಲಾಗಿದೆ. ಈ ಮೂಲಕ ಅಸಮಾಧಾನಿತರನ್ನು ಸಮಾಧಾನ ಪಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ.
ಕಾಂಗ್ರೆಸ್ ಸ್ಟಾರ್ ಪ್ರಚಾರಕರು ಇವರು
- ಮಲ್ಲಿಕಾರ್ಜುನ ಖರ್ಗೆ
- ಸೋನಿಯಾ ಗಾಂಧಿ
- ರಾಹುಲ್ ಗಾಂಧಿ
- ಡಿಸಿಎಂ ಡಿ.ಕೆ. ಶಿವಕುಮಾರ್
- ಸಿಎಂ ಸಿದ್ದರಾಮಯ್ಯ
- ಪ್ರಿಯಾಂಕಾ ಗಾಂಧಿ
- ರಣದೀಪ್ ಸಿಂಗ್ ಸುರ್ಜೆವಾಲಾ
- ವೀರಪ್ಪ ಮೊಯ್ಲಿ
- ಬಿ.ವಿ. ಶ್ರೀನಿವಾಸ್
- ಲಕ್ಷ್ಮಣ ಸವದಿ
- ಈಶ್ವರ್ ಖಂಡ್ರೆ
- ವಿನಯಕುಮಾರ್ ಸೊರಕೆ
- ಬಿ.ಕೆ. ಹರಿಪ್ರಸಾದ್
- ಆರ್.ವಿ. ದೇಶಪಾಂಡೆ
- ಡಾ.ಜಿ. ಪರಮೇಶ್ವರ್
- ಎಚ್.ಕೆ. ಪಾಟೀಲ್
- ಎಂ.ಬಿ. ಪಾಟೀಲ್
- ದಿನೇಶ್ ಗುಂಡೂರಾವ್
- ಕೃಷ್ಣ ಭೈರೇಗೌಡ
- ಎಚ್.ಎಂ. ರೇವಣ್ಣ
- ಪಿಜಿಆರ್ ಸಿಂಧ್ಯಾ
- ಬಿ. ಸೋಮಶೇಖರ್
- ಎಲ್. ಹನುಮಂತಯ್ಯ
- ಜಿ.ಸಿ. ಚಂದ್ರಶೇಖರ
- ಸೈಯದ್ ನಾಸಿರ್ ಹುಸೇನ್
- ಅಭಿಷೇಕ್ ದತ್
- ಝಮೀರ್ ಅಹಮದ್ ಖಾನ್
- ಮಧು ಬಂಗಾರಪ್ಪ
- ಪಿ.ಟಿ. ಪರಮೇಶ್ವರ್ ನಾಯಕ್
- ವಿ.ಎಸ್. ಉಗ್ರಪ್ಪ
- ಸತೀಶ್ ಜಾರಕಿಹೊಳಿ
- ತನ್ವೀರ್ ಸೇಠ್
- ಪುಷ್ಪಾ ಅಮರನಾಥ್
- ಉಮಾಶ್ರೀ
ಇವರಲ್ಲಿ ಕೆಲವು ಸಚಿವರನ್ನು ಆಯ್ಕೆ ಮಾಡಿದ್ದರೆ, ಮತ್ತೆ ಕೆಲವರು ಹಿರಿಯ ಶಾಸಕರಿಗೆ ಮಣೆ ಹಾಕಲಾಗಿದೆ. ಇದರ ಜತೆಗೆ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿ ಕೈ ತಪ್ಪಿ ಅಸಮಾಧಾನಗೊಂಡಿರುವ ನಾಯಕರಿಗೂ ಇಲ್ಲಿ ಸ್ಥಾನ ಕಲ್ಪಿಸಲಾಗಿದೆ. ಈ ಮೂಲಕ ಪಕ್ಷವು ನಿಮ್ಮ ಸೇವೆಯನ್ನು ಪರಿಗಣಿಸುತ್ತದೆ ಎಂಬ ಸಂದೇಶವನ್ನು ನೀಡಲು ಕಾಂಗ್ರೆಸ್ ಮುಂದಾಗಿದೆ.
ಇದನ್ನೂ ಓದಿ: Lok Sabha Election 2024: ಸಿ.ಪಿ. ಯೋಗೇಶ್ವರ್ ಪುತ್ರಿ ಕಾಂಗ್ರೆಸ್ ಸೇರ್ಪಡೆ? ಅಪ್ಪ – ಮಗಳನ್ನು ದೂರ ಮಾಡಲ್ಲವೆಂದ ಡಿಕೆಶಿ
ಕರ್ನಾಟಕದಲ್ಲಿ ಮತದಾನ ನಡೆಯುವ 2 ದಿನವೂ ಸಾರ್ವತ್ರಿಕ ರಜೆ ಘೋಷಣೆ
ಲೋಕಸಭಾ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳಂತೆ ಚುನಾವಣಾ ಆಯೋಗವೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತದಾನ ನಡೆಯುವ (Voting Day) ಆ ಎರಡು ದಿನವೂ ಸಾರ್ವತ್ರಿಕ ರಜೆಯನ್ನು (Government Holiday) ಘೋಷಿಸಲಾಗಿದೆ. ಸರ್ಕಾರಿ ನೌಕರರಿಗೆ ವೇತನ ಸಹಿತ ರಜೆಯನ್ನು (Paid leave) ಘೋಷಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶಿಸಿದ್ದಾರೆ.
ಏಪ್ರಿಲ್ 26 ರಂದು ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆದರೆ, 2ನೇ ಹಂತದ ಮತದಾನವು ಮೇ 7ರಂದು ನಡೆಯಲಿದೆ. ಈ ದಿನಗಳಂದು ಎಲ್ಲ ರಾಜ್ಯ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಎಲ್ಲ ವ್ಯಾವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕಾಯಂ ಆಗಿ ಹಾಗೂ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಿರುವುದಾಗಿ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.