Site icon Vistara News

Lok Sabha Election 2024: ಫಲಿತಾಂಶ ಬರುವ ಮುಂಚೆಯೇ ಗೆದ್ರಾ ಎಚ್‌.ಡಿ. ಕುಮಾರಸ್ವಾಮಿ?; ಚುನಾವಣೆ ಬಗ್ಗೆ ಹೇಳಿದ್ದೇನು?

Lok Sabha Election 2024

ಮಂಡ್ಯ : ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ (Lok Sabha Election 2024) ಶುಕ್ರವಾರ ಮತದಾನ ನಡೆದಿದ್ದು, ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ನಂತರ ಜೂನ್‌ 4ರಂದು ಫಲಿತಾಂಶ ಹೊರ ಬೀಳಲಿದೆ. ಈ ನಡುವೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು, ಮಂಡ್ಯ ಕ್ಷೇತ್ರದಲ್ಲಿ ಗೆಲುವು ತಮ್ಮದೇ ಎಂದು ವಿಶ್ವಾಸದಿಂದ ಹೇಳಿರುವುದು ಕಂಡುಬಂದಿದೆ.

ಜಿಲ್ಲೆಯ ಹೊನ್ನಲಗೆರೆ ಗ್ರಾಮದಲ್ಲಿ ಮಾತನಾಡಿರುವ ಎಚ್‌.ಡಿ. ಕುಮಾರಸ್ವಾಮಿ ಅವರು, ನನ್ನ ಪರವಾಗಿ ಮಂಡ್ಯ ಜಿಲ್ಲೆಯ ಎಲ್ಲಾ ಜನ ಚುನಾವಣೆ ನಡೆಸಿದ್ದಾರೆ. ಈ ಜಯ ನನ್ನದಲ್ಲಾ ಇದು ಎಲ್ಲರ ಜಯ. ಜಿಲ್ಲೆಯ ಎಲ್ಲಾ ಪಕ್ಷದಲ್ಲಿರುವ ನನ್ನ ಅಭಿಮಾನಿಗಳ ಜಯ. ಪಕ್ಷ ಭೇದ ಮರೆತು ಎಲ್ಲರೂ ನನ್ನ ಪರ ಕೆಲಸ ಮಾಡಿದ್ದಾರೆ, ರಾಜ್ಯದಲ್ಲೇ ಅತ್ಯಂತ ಹೆಚ್ಚು ಬಹುಮತಗಳಿಂದ ಗೆಲ್ಲಲಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಎಂದು ಹೇಳುವ ಮೂಲಕ ಫಲಿತಾಂಶ ಬರುವ ಮುಂಚೆಯೇ ತಮ್ಮದೇ ಗೆಲುವು ಎಂದು ಹೇಳಿದ್ದಾರೆ.

ಸುಮಲತಾ ಸಪೋರ್ಟ್ ಮಾಡಿಲ್ಲ ಎಂದ ಎಚ್‌ಡಿಡಿ; ದೇವೇಗೌಡರು ಯಾಕೆ ಹಾಗೆ ಹೇಳಿದರೋ ಗೊತ್ತಿಲ್ಲ ಎಂದ ಎಚ್‌ಡಿಕೆ

ಮಂಡ್ಯದಲ್ಲಿ ಕುಮಾರಸ್ವಾಮಿಗೆ ಸುಮಲತಾ ಸಪೋರ್ಟ್ ಮಾಡಿಲ್ಲ ಎಂಬ ದೇವೇಗೌಡರ ಹೇಳಿಕೆಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ದೇವೇಗೌಡರು ಆ ರೀತಿ ಯಾಕೆ ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಸುಮಲತಾ ಅವ್ರ ಪ್ರಶ್ನೆ ಇಲ್ಲಿ ಬರಲ್ಲ. ದೇವೇಗೌಡರು ಯಾಕೆ ಹಾಗೆ ಹೇಳಿದ್ದಾರೆ ಗೊತ್ತಿಲ್ಲ. ದೇವೇಗೌಡರಿಗೆ ಮಾಹಿತಿ ಕೊರತೆ ಆಗಿರಬೇಕು ಅನಿಸುತ್ತದೆ. ಪಕ್ಷ ಭೇದ ಮರೆತು ಕಾಂಗ್ರೆಸ್, ಬಿಜೆಪಿಯವರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ಯಾರು ವಿರೋಧ ಮಾಡಿಲ್ಲ ಎಲ್ಲರೂ ನನಗೆ ಸಹಾಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

ಕುಮಾರಸ್ವಾಮಿ ಪರ ಪ್ರಚಾರಕ್ಕೆ ಯಾರೂ ನನ್ನ ಕರೆಯಲಿಲ್ಲ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಅವರ ಮನೆ ಬಾಗಿಲಿಗೆ ಹೋಗಿ ಸಹಕಾರ ಕೇಳಿದ್ದೇನೆ, ಇದಕ್ಕಿಂತ ಇನ್ನೇನು ಮಾಡಬೇಕು. ಅಂಬರೀಶ್ ಅಭಿಮಾನಿಗಳು ಸಹ ನನಗೆ ಸಹಾಯ ಮಾಡಿದ್ದಾರೆ. ನಾನು ಮೈಸೂರಿನ ಮೋದಿ ಕಾರ್ಯಕ್ರಮದಲ್ಲೂ ಕೂಡ ಸುಮಲತಾ ಅವರನ್ನು 2 ದಿನ ಪ್ರಚಾರಕ್ಕೆ ಬರುವಂತೆ ಕೋರಿದ್ದೆ. ಗೊಂದಲದ ಪ್ರಚಾರ ಮಾಡೋದು ಬೇಡ.
ಬೆಂಗಳೂರಿನಿಂದ ಬಂದು ಸುಮಲತಾ ನನಗೆ ಓಟ್ ಮಾಡಿದ್ದಾರೆ. ಪಕ್ಷ ಭೇದ ಮರೆತು ಕೆಲಸ ಮಾಡಿದ್ದಾರೆ ರಾಜ್ಯದಲ್ಲೆ ಅತ್ಯಂತ ಹೆಚ್ಚು ಬಹುಮತಗಳಿಂದ ಗೆಲ್ಲಲಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದ ಸುಮಲತಾ

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ 164ರಲ್ಲಿ ಸಂಸದೆ ಸುಮಲತಾ ಅಂಬರೀಶ್ ಮತ ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ಮತದಾನ ಮಾಡೋದು ಕರ್ತವ್ಯ, ಅದನ್ನು ನಿರ್ವಹಿಸಿದ್ದೀನಿ. ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ
ಅವರು ದೊಡ್ಡವರು, ಅವರಿಗೆ ಸರಿಯಾದ ಮಾಹಿತಿ ಕೊಡದೆ ಆ ರೀತಿ ಹೇಳಿದ್ದಾರೆ. ಅವರಿಂದ ಅಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಸ್ಚತಂತ್ರ ಸಂಸದೆಯಾಗಿ ನನ್ನ‌ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೀನಿ ಎಂದರು.

ಮೋದಿ ಅವರು ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ನಾನು ಗೆದ್ದಂತಹ ಸೀಟ್ ತ್ಯಾಗ ಮಾಡಿದ್ದೀನಿ. ಈ ಹಂತದಲ್ಲಿ ಅಂಬರೀಶ್ ಅವರ ಪಡೆಯ ಶಕ್ತಿಯನ್ನು ಎನ್‌ಡಿಎಗೆ ಕೊಟ್ಟಿದ್ದೇವೆ. ನಾವು ನಿಷ್ಠೆಯಿಂದ ಕೆಲಸ ಮಾಡಿದ್ದೇವೆ, ಈ‌ ದಿನದವರೆಗೂ ಜೆಡಿಎಸ್‌ನ ಯಾವುದೇ ನಾಯಕರು ಯಾವುದೇ ಸಭೆಗೆ ಆಹ್ವಾನಿಸಿಲ್ಲ. ಅವರು ಕರೆದು ನಾನು ಹೋಗದಿದ್ದರೆ ತಪ್ಪಾಗುತ್ತದೆ, ಆದ್ರೆ ಅವರು ನನ್ನ‌ ಕರೆದೇ ಇಲ್ಲ ಎಂದು ಹೇಳಿದರು.

ಕನಕಪುರದಲ್ಲಿ 505 ರೂ, ಮಲೆ ಮಹದೇಶ್ವರದ ಲಾಡು, ಗ್ಯಾರಂಟಿ ಕಾರ್ಡ್ ಹಂಚಿಕೆ; ಎಚ್‌ಡಿಕೆ ಗಂಭೀರ ಆರೋಪ

Lok Sabha Election 2024 DK brothers distribute Rs 505 in Bengaluru Rural constituency HD Kumaraswamy allegations

ಬೆಂಗಳೂರು: ಈ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಬೆಂಗಳೂರು ಗ್ರಾಮಾಂತರ ಕ್ಷೇತ್ರದ (Bangalore Rural Constituency) ಕನಕಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ 505 ರೂ, ಮಲೆ ಮಹದೇಶ್ವರದ ಲಾಡು, ಗ್ಯಾರಂಟಿ ಕಾರ್ಡ್ ಹಂಚಿಕೆ ಮಾಡಲಾಗುತ್ತಿದೆ. ಈ ಬಗ್ಗೆ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಕಣ್ಣು ಮುಚ್ಚಿ ಕುಳಿತಿದ್ದು, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.

ಕೇತಗಾನಹಳ್ಳಿಯಲ್ಲಿ ಕುಟುಂಬ ಸಮೇತ ಬಂದು ಮತಚಲಾಯಿಸಿದ ಎಚ್.ಡಿ. ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಇರುವ ಮಾಹಿತಿ ಪ್ರಕಾರ 14 ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಒಳ್ಳೆಯ ರೀತಿ ಮತದಾನ ನಡೆಯುತ್ತಿದೆ. ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದು ಕಪ್ಪು ಚುಕ್ಕೆ ರೀತಿ ಪ್ರಕ್ರಿಯೆಗಳು ನಡೆಯುತ್ತಿವೆ. ನಿನ್ನೆ ಸಹ ಕನಕಪುರದಲ್ಲೂ ಧೈರ್ಯದಿಂದ ಎದರಿಸುವ ವಾತಾವರಣ ನಿರ್ಮಾಣವಾಗಿದೆ. ಆದರೆ, ಕನಕಪುರದ ಸೊರಕಾಯಿ ದೊಡ್ಡಿ ಸೇರಿದಂತೆ ಹಲವು ಕಡೆ ಕಾಂಗ್ರೆಸ್ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ‌. ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕುಣಿಗಲ್ ಸೇರಿದಂತೆ ಹಲವು ಭಾಗದಲ್ಲಿ ಬೆಳಗಿನ ಜಾವ ಐದು ಗಂಟೆಗೆ ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ಕೊಟ್ಟು 4 ರಿಂದ 5 ಸಾವಿರ ರೂಪಾಯಿಯ ಕೂಪನ್ ಕೊಟ್ಟಿದ್ದಾರೆ. ಈ ಹಿಂದೆ ಕುಕ್ಕರ್ ಎಲ್ಲ ಕೊಟ್ಟಿದ್ದಾರೆ. ಈಗ ಕಾರ್ಡ್ ಮತ್ತು ಕೂಪನ್ ಕೊಟ್ಟಿದ್ದಾರೆ. ಈಗ ಎಲ್ಲ ಕಡೆ ಇದನ್ನು ಶುರು ಮಾಡಿದ್ದಾರೆ. ಹಾಲಿ ಶಾಸಕರ ಫೋಟೋ ಹಾಕಿ 10 ಸಾವಿರದ ರೂಪಾಯಿಯ ಕೂಪನ್ ಕೊಡುತ್ತಿದ್ದಾರೆ. ಕ್ಯೂ ಆರ್ ಕೋಡ್ ಕೊಡುವ ಚಾಳಿಯನ್ನು ಶುರು ಮಾಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದರು.

ಚುನಾವಣಾ ಆಯೋಗದ ವಿರುದ್ಧ ಎಚ್‌ಡಿಕೆ ಗರಂ

ಚುನಾವಣಾ ಆಯೋಗವು ಈ ರೀತಿ ಚುನಾವಣೆಯನ್ನು ನಡೆಸುವ ಬದಲು ನೇರವಾಗಿ ಹಣ ಕೊಡುವ ವ್ಯವಸ್ಥೆಯನ್ನು ಜಾರಿಗೆ ತರಬಹುದು. ಆಯಾಯ ಅಭ್ಯರ್ಥಿಗಳು ತಮ್ಮ ಶಕ್ತಿ ಅನುಸಾರ ಹಣ ನೀಡುತ್ತಾರೆ. ದೇಶದಲ್ಲಿ ಈ ರೀತಿಯ ವ್ಯವಸ್ಥೆಯನ್ನು ತಂದರೆ ಒಳ್ಳೆಯದು ಎಂದು ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಇದನ್ನು ಚುನಾವಣಾ ಅಂತ ಕರೆಯುತ್ತಾರಾ? ಪ್ರಜಾಪ್ರಭುತ್ವದ ಹಬ್ಬ ಎಂದು ಹೇಳಲಾಗುತ್ತದೆಯೇ? ದುಡ್ಡು ಇರುವವರಿಗೆ, ಲೂಟಿ ಮಾಡುವವರಿಗೆ ಮಾತ್ರ ಇದು ಹಬ್ಬ. ಜನಸಾಮಾನ್ಯರಿಗೆ ಅಲ್ಲ. ಈ ರೀತಿಯಾಗಿ ಮತ ಪಡೆಯೋದು ಅಂದರೆ ಹೇಗೆ? ಮಹಾನಭಾವರು ಬುದ್ಧಿ ಹೇಳಿದ್ದೇ ಹೇಳಿದ್ದು ಎಂದು ಡಿ.ಕೆ. ಸಹೋದರರ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Lok Sabha Election 2024: ಆಕ್ಸಿಜನ್‌ ಸಹಾಯದಿಂದ ಮತ ಚಲಾಯಿಸಿದ ಮಹಿಳೆ; ವೋಟು ಹಾಕಿ ಕುಸಿದು ಮೃತಪಟ್ಟ ವೃದ್ಧೆ!

ಮತಗಟ್ಟೆ ಮುಂದೆ ಡಿಕೆ ಶಿವಕುಮಾರ್‌ ರಿಯಾಕ್ಷನ್;‌ ಇಲ್ಲಿದೆ ವಿಡಿಯೊ

ಜ್ಯೋತಿಷಿ ಹೇಳಿದಂತೆ ಹಣ ಹಂಚಿಕೆ

ಕನಕಪುರದಲ್ಲಿ ಜ್ಯೋತಿಷಿ ಹೇಳಿದಂತೆ ಹಣ ಹಂಚಿದ್ದಾರೆ. ಯಾರೋ ಶಾಸ್ತ್ರದವರು ಹೇಳಿದ್ದಾರೆ ಎಂದು 505 ರೂಪಾಯಿ, ಮಲೆ ಮಹದೇಶ್ವರ ದೇವರ ಲಾಡು ಮತ್ತು ಗ್ಯಾರಂಟಿ ಕಾರ್ಡ್‌ಗಳನ್ನು ರಾತ್ರಿಯಲ್ಲ ಹಂಚಿದ್ದಾರೆ. ಈ ಬಗ್ಗೆ ನಮ್ಮ ಡಿಸಿ ಮತ್ತು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಕ್ತವಾದ ಚುನಾವಣೆ ನಡೆಯುತ್ತಿಲ್ಲ. ಇವತ್ತು ಸೋಲಿನ ಭೀತಿಯಿಂದ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಚುನಾವಣಾ ಅಕ್ರಮಗಳ ಮೂಲಕ ಗೆಲ್ಲುತ್ತೇವೆ ಎಂದು ಹೋಗುತ್ತಿದ್ದಾರೆ. ಅಕ್ರಮ ಮಾಡಿದರೂ ಜನತೆ ಬಲಿಯಾಗಿದೆ ನ್ಯಾಯಯುತವಾಗಿ ಮತದಾನ ಮಾಡಿ ಎಂದು ಮನವಿ ಮಾಡುತ್ತೇನೆ. ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳೋದು ಒಳ್ಳೆಯದು. ಚುನಾವಣಾ ಆಯೋಗ ತನ್ನ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಕಿವಿಮಾತು ಹೇಳಿದರು.

Exit mobile version