Site icon Vistara News

Lok Sabha Election 2024: ಇಂಡಿಯಾ ಕೂಟದಲ್ಲಿ ಯಾರಿಗಾದ್ರೂ ಪ್ರಧಾನಿ ಆಗೋ ಯೋಗ್ಯತೆ ಇದ್ಯಾ: ದೇವೇಗೌಡ ಪ್ರಶ್ನೆ

Lok sabha Election 2024

ರಾಮನಗರ: ಇಂಡಿಯಾ ಒಕ್ಕೂಟದಲ್ಲಿ ಯಾರಿಗಾದರೂ ದೇಶದ ಪ್ರಧಾನಿ ಆಗುವ ಯೋಗ್ಯತೆ ಇದ್ಯಾ? ಮಮತಾ ಬ್ಯಾನರ್ಜಿ ಆಗ್ತಾರಾ? ರಾಹುಲ್ ಗಾಂಧಿ ಪ್ರಧಾನಿ ಆಗುವುದಾಗಿದ್ದರೆ ಚುನಾವಣೆಯಲ್ಲಿ (Lok Sabha Election 2024) ಕೇರಳಕ್ಕೆ ಯಾಕೆ ಹೋಗುತ್ತಿದ್ದರು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.

ಕನಕಪುರ ಮುನ್ಸಿಪಲ್ ಮೈದಾನದಲ್ಲಿ ಆಯೋಜಿಸಿದ್ದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಸಮಾವೇಶ ಕೂಡ ದೇಶದ ಭವಿಷ್ಯ ರೂಪುಗೊಳಿಸುವ ಸಭೆ. 2024ರ ಚುನಾವಣೆಯನ್ನು ಇಡೀ ಪ್ರಪಂಚ ನೋಡುತ್ತಿದೆ. ಇಲ್ಲಿ ಎರಡು ಬಣಗಳು ಇವೆ. ಎನ್‌ಡಿಎ ಮುಖ್ಯಸ್ಥರು ಮೋದಿ, ಆದ್ರೆ ಐಎನ್‌ಡಿಐಎ ಮುಖ್ಯಸ್ಥರು ಯಾರು? ಖರ್ಗೆನಾ ಅಥವಾ ಮತ್ಯಾರ? ಜನ ನೀವು ತೀರ್ಮಾನ ಮಾಡಬೇಕು ಎಂದು ಹೇಳಿದರು.

ಡಿಕೆಶಿ ಪ್ರಧಾನಿ ಆಗ್ತಾರಾ, ಖರ್ಗೆ ಪ್ರಧಾನಿ ಆಗ್ತಾರಾ, ನಮ್ಮ ರಾಜ್ಯದ ಸಿಎಂ ಕೂಡ ಖರ್ಗೆ ಪ್ರಧಾನಿ ಆಗಲ್ಲ, ರಾಹುಲ್ ಗಾಂಧಿ ಆಗುತ್ತಾರೆ ಅಂತ ಹೇಳುತ್ತಾರೆ. ರಾಹುಲ್ ಗಾಂಧಿ ಪ್ರಧಾನಿ ಆಗ್ತಾರಾ ಎಂದು ಪ್ರಶ್ನಿಸಿದ ಅವರು,
ಅವರ ಅಜ್ಜಿ 17 ವರ್ಷ ಆಳಿದರು. ಬಳಿಕ ದೇಶವನ್ನು ರಾಜೀವ್ ಗಾಂಧಿ ಆಳಿದರು. ದಶಕಗಳ ಕಾಲ ದೇಶ ಆಳಿದ ಕಾಂಗ್ರೆಸ್ ಇಂದು ಯಾವ ಸ್ಥಾನ ತಲುಪಿದೆ. ಕೇವಲ ಮೂರು ರಾಜ್ಯದಲ್ಲಿ ಮಾತ್ರ ಇದೆ. ಸೋನಿಯಾ ಗಾಂಧಿ ರಾಜಸ್ಥಾನಕ್ಕೆ ಹೋಗಿ ರಾಜ್ಯಸಭಾ ಸದಸ್ಯೆ ಆಗಿದ್ದಾರೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಆಳಿದ ಕಾಂಗ್ರೆಸ್ ಇಂದು ಈ ಸ್ಥಿತಿ ತಲುಪಿದೆ ಎಂದು ಹೇಳಿದರು.

ಇದನ್ನೂ ಓದಿ | ‌Lok Sabha Election 2024: ಬಿಜೆಪಿ ಕೊಟ್ಟ ರೈತ ಪರ ಯೋಜನೆಗಳನ್ನು ಕಿತ್ತುಕೊಂಡ ಕಾಂಗ್ರೆಸ್‌ ಸರ್ಕಾರ: ‌ವಿಜಯೇಂದ್ರ ಕಿಡಿ

ಕರ್ನಾಟಕದಲ್ಲಿ ಐದು ಗ್ಯಾರಂಟಿ ಬಂದಿದೆ. ಕುಮಾರಸ್ವಾಮಿ ಪಂಚರತ್ನ ಕಾರ್ಯಕ್ರಮದ ಆಲೋಚನೆ ಮಾಡಿದ್ದರು. ನೀರಾವರಿ ಅಭಿವೃದ್ಧಿ, ಶಿಕ್ಷಣ, ರೈತರ ಅಭಿವೃದ್ಧಿಗಾಗಿ 10 ತಿಂಗಳು ಪ್ರವಾಸ ಮಾಡಿದ್ದರು. 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರು. ಅದನ್ನು ಯಾವ ಸಿಎಂ ಕೂಡ ಮಾಡಲಿಲ್ಲ. 18 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಮಾಡುತ್ತಿದೆ. ಮೋದಿ ಪ್ರಧಾನಿ ಆಗಿ ವಿಶ್ವದಲ್ಲೇ ಹೆಸರು ಮಾಡಿದ್ದಾರೆ. ಮೋದಿ ಬಿಟ್ಟರೆ ಮತ್ಯಾರಾದ್ರೂ ಪ್ರಧಾನಿ ಅಭ್ಯರ್ಥಿಗಳಿದ್ದಾರಾ?
ಐಎನ್‌ಡಿಐಎನಲ್ಲಿ ಯಾವುದೇ ಪ್ರಧಾನಿ ಅಭ್ಯರ್ಥಿ ಇಲ್ಲ ಎಂದು ತಿಳಿಸಿದರು.

ಡಾ.ಮಂಜುನಾಥ್‌ರನ್ನು ಜಯದೇವ ನಿರ್ದೇಶಕ ಸ್ಥಾನದಿಂದ ತೆಗೆಸಲು ಡಿಕೆಶಿ ಪ್ರಯತ್ನ ಮಾಡಿದರು. ಎಸ್.ಎಂ.ಕೃಷ್ಣಗೆ ಚೀಟಿ‌ ಕೊಟ್ಟಿದ್ದರು, ನನಗೆ ಎಲ್ಲವೂ ಗೊತ್ತಿದೆ. ಇಡೀ ವಿಶ್ವದಲ್ಲಿ 2000 ಬೆಡ್‌ ಹೊಂದಿರುವ ಹೃದಯ ಸಂಭಂದಿ ಆಸ್ಪತ್ರೆ ಇಲ್ಲ. ಆ ರೀತಿ ಆಸ್ಪತ್ರೆ ಅಭಿವೃದ್ಧಿ ಮಾಡಿದ್ದು ಡಾ.ಮಂಜುನಾಥ್. ಇದನ್ನು ಮನಗಂಡ ಮೋದಿ, ಅಮಿತ್ ಶಾ ಡಾ.ಮಂಜುನಾಥ್ ಸ್ಪರ್ಧೆಗೆ ಒತ್ತಾಯ ಮಾಡಿದರು. ಅವರನ್ನು ನಮಗೆ ಕೊಡಿ, ಅವರ ಸೇವೆ ದೇಶಕ್ಕೆ ಬೇಕು ಎಂದು ಹೇಳಿದ್ದಾರೆ. ಎಂಟೂವರೆ ಲಕ್ಷ ಜನರಿಗೆ ಡಾ.ಮಂಜುನಾಥ್ ಉಚಿತ ಚಿಕಿತ್ಸೆ ಕೊಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿ ಮಹಾನ್ ನಾಯಕರು ಮೂರು ಜನ ಡಾ.ಮಂಜುನಾಥ್ ಎಂಬುವವರನ್ನು ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದರು.

ಡಾ. ಮಂಜುನಾಥ್ ಒಬ್ಬ ಪ್ರಾಮಾಣಿಕ ವೈದ್ಯ. ಈ ಹಿಂದೆ ಡಿಕೆಶಿ ನನ್ನ ಅಳಿಯನನ್ನು ಜಯದೇವ ಡೈರೆಕ್ಟರ್ ಆಗೋದನ್ನು ತಪ್ಪಿಸಿದರು. ನಾನು ನನ್ನ ಮಗಳ ಮನೆಯಲ್ಲಿ ಇದ್ದಾಗ, ನನ್ನ ಅಳಿಯ ಅಮೆರಿಕಕ್ಕೆ ಹೋಗುತ್ತೀನಿ ಎಂದರು. ಆಗ ನಾನೇ ಅವರನ್ನು ತಡೆದೆ. ಈ ಸರ್ಕಾರ ಹೆಚ್ಚು ದಿನ ಇರಲ್ಲ ಯೋಚನೆ ಮಾಡಿ ಅಂದಿದ್ದೆ. ನಿಮ್ಮ ಸೇವೆ ಈ ದೇಶದ ಜನತೆಗೆ ಬೇಕು ಅಂತ ಹೇಳಿದ್ದೆ. ನಂತರ ನನ್ನ ಅಳಿಯ ನಾನು ಇಲ್ಲೇ ಇರ್ತೇನೆ ಎಂದರು. ಈಗ ಡಾ.ಮಂಜುನಾಥ್ ಅವರ ಸೇವೆಯನ್ನು ಮೋದಿ, ಅಮಿತ್ ಶಾ ಗುರುತಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ | Modi Letter: ಸಾಮಾನ್ಯ ಎಲೆಕ್ಷನ್‌ ಅಲ್ಲ; ರಾಮನವಮಿ ದಿನವೇ ಎನ್‌ಡಿಎ ಅಭ್ಯರ್ಥಿಗಳಿಗೆ ಮೋದಿ ಪತ್ರ!

ಪಕ್ಕದಲ್ಲಿ ತಮಿಳುನಾಡು ಸಿಎಂ ಸ್ಟ್ಯಾಲಿನ್, ಕರ್ನಾಟಕದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಲ್ಲ ಅಂತಾನೆ. ನಿಮ್ಮ ಮಹಾನುಭಾವ ಏನು ಮಾಡ್ತಿದ್ದಾರೆ. ಮಿಸ್ಟರ್ ಡಿ.ಕೆ.ಶಿವಕುಮಾರ್, ಉತ್ತರ ಪ್ರದೇಶ, ಛತ್ತೀಸ್‌ಗಢಕ್ಕೆ ಹೋಗಿ ಎಷ್ಟು ಬೇಕೋ ಅಷ್ಟೋ ಬಾಚಿದ್ದಾರೆ. ಇಲ್ಲಿನ ಕಂಟ್ರಾಕ್ಟರ್‌ಗಳನ್ನು ತೆಲಂಗಾಣಕ್ಕೆ ಕಳುಹಿಸ್ತಾರೆ. ಅಲ್ಲಿಯೂ ಕಾಂಗ್ರೆಸ್ ಗೆಲ್ಲುತ್ತೆ. ಚನ್ನಪಟ್ಟಣದಲ್ಲಿ 9 ಜನ ಕೌನ್ಸಿಲರ್‌ಗೆ 50 ಲಕ್ಷ, ಗುತ್ತಿಗೆ ಕೆಲಸ ಹಂಚಿದ್ದಾರೆ. ರಾಮನಗರದ ನಮ್ಮ ಪಕ್ಷದ ತಾಲೂಕು ಅಧ್ಯಕ್ಷನನ್ನ ಕೊಂಡುಕೊಳ್ತಾರೆ. ಆದರೆ ಈ ಕ್ಷೇತ್ರದ 27 ಲಕ್ಷ ಮತದಾರರನ್ನು ಕೊಂಡುಕೊಳ್ಳಲು ಸಾಧ್ಯವೇ.
ಡಾ.ಮಂಜುನಾಥ್ ಪರ ಜನ ಇದ್ದಾರೆ. ಅವರ ಕ್ರಮ ಸಂಖ್ಯೆ 1ಕ್ಕೆ ಎಲ್ಲರೂ ಮತನೀಡಿ ಎಂದು ಮನವಿ ಮಾಡಿದರು.

Exit mobile version