Site icon Vistara News

Lok Sabha Election 2024 : ತಮ್ಮ ಜನಸಂಖ್ಯೆ ಹೆಚ್ಚಿರುವ ಕಡೆ ಕಾಂಗ್ರೆಸ್‌ ಟಿಕೆಟ್‌ಗೆ ಅಲ್ಪಸಂಖ್ಯಾತರ ಡಿಮ್ಯಾಂಡ್‌

Congress minorities community meeting

ಬೆಂಗಳೂರು: ಅಲ್ಪಸಂಖ್ಯಾತರು ಮುಂದಿನ ಲೋಕಸಭಾ ಚುನಾವಣೆಗೆ (Lok Sabha Election 2024) ಹೆಚ್ಚಿನ ಸ್ಥಾನ ಕೇಳಿದ್ದಾರೆ. ಆದರೆ, ಅಲ್ಪಸಂಖ್ಯಾತರು (Minorities Community) ಹೆಚ್ಚಿರುವ ಕಡೆ ಅವರ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಿಲ್ಲ. ಅವರಿಗೆ ಕೆಲವು ಸವಲತ್ತು ತಲುಪಿಸುವ ಕೆಲಸ ಆಗಬೇಕಿದೆ. ಜನಸಂಖ್ಯೆ ಆಧಾರದ ಮೇಲೆ ಅವರ ಸಮುದಾಯಕ್ಕೆ ಸೀಟು ನೀಡಬೇಕಿದೆ. ಅದರ ಆಧಾರದ ಮೇಲೆ ಎಷ್ಟು ಸೀಟು ಕೊಡಬೇಕು ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಮುಸ್ಲಿಂ ಮುಖಂಡರ ಸಭೆ ನಡೆದಿದ್ದು, ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಶಾಸಕ ತನ್ವೀರ್‌ ಸೇಠ್‌ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಈ ವೇಳೆ ಅಲ್ಪಸಂಖ್ಯಾತರಿಗೆ ಅವರ ಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಲೋಕಸಭೆ ಟಿಕೆಟ್‌ ಕೊಡುವ ಪ್ರಸ್ತಾಪ ಬಂದಿದ್ದು, ಡಿ.ಕೆ. ಶಿವಕುಮಾರ್‌ ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಆದರೆ, ಕೆಲವು ಕ್ಷೇತ್ರದಲ್ಲಿ ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವಾಗ ಸಮುದಾಯವನ್ನು ಪರಿಗಣಿಸಬೇಕು. ಲೋಕಸಭೆ ಚುನಾವಣೆಯಲ್ಲಿ ಸಮುದಾಯ ಹೆಚ್ಚಿರುವ ಕಡೆ ಟಿಕೆಟ್ ನೀಡಬೇಕು. ಎರಡರಿಂದ ಮೂರು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ಸಭೆಯಲ್ಲಿ ಡಿಸಿಎಂಗೆ ಮುಸ್ಲಿಂ ಮುಖಂಡರು ಮನವಿ ಮಾಡಿದ್ದಾರೆ.

ಪರಿಷತ್ ಸ್ಥಾನದಲ್ಲೂ ಅವಕಾಶದ ಭರವಸೆ: ಸಲೀಂ ಅಹ್ಮದ್

ಮುಸ್ಲಿಂ ನಾಯಕರ ಜತೆ ಸುದೀರ್ಘ ಸಭೆಯನ್ನು ನಡೆಸಲಾಗಿದೆ. ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಸೀಟ್ ಬಗ್ಗೆ ಚರ್ಚೆಯಾಗಿದೆ. ಅಲ್ಪಸಂಖ್ಯಾತರಿಗೆ ಹೆಚ್ಚಿನ ಸ್ಥಾನ ಕಲ್ಪಿಸಲು ‌ಮನವಿ‌ ಮಾಡಿದ್ದೇವೆ. ಡಿಸಿಎಂ ಡಿ.ಕೆ. ಶಿವಕುಮಾರ್ ನಮ್ಮ ಮನವಿಯನ್ನು ಸ್ವೀಕಾರ ಮಾಡಿದ್ದಾರೆ. ಎಲ್ಲೆಲ್ಲಿ ಮುಸ್ಲಿಮರಿಗೆ ಅವಕಾಶ ನೀಡಲು ಸಾಧ್ಯವಿದೆಯೋ? ಅಲ್ಲೆಲ್ಲ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ಪರಿಷತ್ ಸ್ಥಾನದಲ್ಲೂ ಅವಕಾಶದ ಭರವಸೆ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Power Point with HPK : ಬೇರೆಯವರಿಗೆ ಸಚಿವ ಸ್ಥಾನ ಕೊಡಿ ಎಂದರೂ ನನಗೇ ಕೊಟ್ಟರು: ಕೃಷ್ಣ ಬೈರೇಗೌಡ

ಸರ್ಕಾರಕ್ಕೆ ಒತ್ತಾಯಿಸಿರುವ ಸಮುದಾಯದ ಮುಖಂಡರು

  1. ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಎರಡರಿಂದ ಮೂರು ಟಿಕೆಟ್ ನೀಡಲು ಆಗ್ರಹ
  2. ನಿಗಮ ಮಂಡಳಿ ನೇಮಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು
  3. ಮುಸ್ಲಿಂ ಸಮುದಾಯದ ನಾಯಕರ ಜತೆ ಸಿಎಂ ಹಾಗೂ ಡಿಸಿಎಂ ಸಭೆ ನಡೆಸಬೇಕು
  4. ಮುಂದೆ ರಾಜ್ಯಸಭೆ, ಪರಿಷತ್ ಸದಸ್ಯರ ಆಯ್ಕೆ ವಿಚಾರದಲ್ಲಿ ಮುಸ್ಲಿಂರನ್ನು ಪರಿಗಣಿಸುವಂತೆ ಆಗ್ರಹ
Exit mobile version