ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ, ಮಾಜಿ ಕ್ರಿಕೆಟಿಗ, ವಾಲ್ ಎಂದೇ ಖ್ಯಾತಿಯಾದ ರಾಹುಲ್ ದ್ರಾವಿಡ್ (Rahul Dravid) ಅವರು ಬೆಂಗಳೂರಿನಲ್ಲಿ (Bengaluru) ಮತದಾನ ಮಾಡಿದ್ದಾರೆ. ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಹಿನ್ನೆಲೆಯಲ್ಲಿ ರಾಹುಲ್ ಅವರು ಮಲ್ಲೇಶ್ವರಂ ಮತಗಟ್ಟೆಯಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಈ ವಿಡಿಯೊ ಈಗ ಭಾರಿ ವೈರಲ್ ಆಗಿದೆ. ಹಾಗೆಯೇ, ಜನರಿಂದ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.
ಚುನಾವಣೆ ಆಯೋಗದ ಮಾಹಿತಿ ಪ್ರಕಾರ, ಮಧ್ಯಾಹ್ನ 3 ಗಂಟೆ ವೇಳಗೆ ಶೇ.50.93ರಷ್ಟು ಮತದಾನ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.58.76ರಷ್ಟು ಮತದಾನ ದಾಖಲಾಗಿದ್ದು, ಇದೇ ಜಿಲ್ಲೆಯಲ್ಲಿ ಹೆಚ್ಚು ಮತದಾನ ದಾಖಲಾಗಿದೆ. ಬೆಂಗಳೂರು ಕೇಂದ್ರದಲ್ಲಿ ಶೇ.40.10ರಷ್ಟು ಮತದಾನ ನಡೆದಿದ್ದು, ಅತಿ ಕಡಿಮೆ ಮತದಾನ ದಾಖಲಾದ ಜಿಲ್ಲೆ ಎನಿಸಿದೆ. ಉಡುಪಿ-ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರಿನಲ್ಲೂ ಹೆಚ್ಚಿನ ಜನ ಮತದಾನ ಮಾಡಿದ್ದಾರೆ.
#WATCH | Rahul Dravid casts his vote in Karnataka's Bengaluru.#LokSabhaElections2024 pic.twitter.com/gZ6Ybairc1
— ANI (@ANI) April 26, 2024
ಹಸಿಮಣೆ ಏರುವ ಮೊದಲು ಮತದಾನ ಮಾಡಿದ ವರ
ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ವರನೊಬ್ಬ ಮತಗಟ್ಟೆಗೆ ಓಡೋಡಿ ಬಂದು ಮತ ಚಲಾಯಿಸಿದ್ದಾರೆ. ತಾಳಿ ಕಟ್ಟುವ ಹತ್ತು ನಿಮಿಷ ಮುಂಚೆ ಮತಕೇಂದ್ರಕ್ಕೆ ಓಡೋಡಿ ಹೋದ ವರ ವೋಟ್ ಹಾಕಿ ನಿರಾಳರಾದರು. ವರ ಚೇತನ್ ಎಂಬುವವರು ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿ ಇತರರಿಗೂ ಮಾದರಿ ಆದರು. ಚೇತನ್ ಅವರು ದೀಪಿಕಾ ಎಂಬುವರ ಜತೆಗೆ ವಿವಾಹವಾಗುತ್ತಿದ್ದು, ತಮ್ಮ ಮುಹೂರ್ತದ ವಸ್ತ್ರದಲ್ಲೇ ಬಂದು ವೋಟ್ ಹಾಕಿದ್ದಾರೆ.
ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಕೊತ್ತುಗೋಡು ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಮುಹೂರ್ತಕ್ಕೂ ಮುನ್ನ ನವ ವಧುವೊಬ್ಬರು ಮತದಾನ ಮಾಡಿ ಗಮನ ಸೆಳೆದಿದ್ದಾರೆ. ರೇಷ್ಮೆ ಸೀರೆ ಉಟ್ಟಿದ್ದ ಮದುವಣಗಿತ್ತಿ ಸಂಪೂರ್ಣ ರೆಡಿಯಾಗಿ ಬಂದು ಮತ ಚಲಾಯಿಸಿ ಮದುವೆ ಮಂಟಪಕ್ಕೆ ಹೋಗಿದ್ದಾರೆ. ಬಳಿಕ ಹಸೆಮಣೆ ಏರಿದ್ದಾರೆ. ಈ ಮೂಲಕ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಕುಂದೂರಿನ ತಳವಾರದ ಸೌಮ್ಯಾ ಅವರು ಮೂಡಿಗೆರೆಯ ಕಲ್ಯಾಣ ಮಂಟಪಕ್ಕೆ ತೆರಳುವ ವೇಳೆ ಕುಟುಂಬ ಸಮೇತ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.
ಇದನ್ನೂ ಓದಿ: Gold Rate Today: ಮತದಾನದ ದಿನ ಬಂಗಾರದ ದರ ತೇಜಿ, ಬೆಂಗಳೂರಿನಲ್ಲಿ 24K ಚಿನ್ನಕ್ಕೆ ₹440 ಏರಿಕೆ