Site icon Vistara News

Lok Sabha Election 2024: ಜೆ.ಪಿ. ನಡ್ಡಾ ಜತೆ ಸುಮಲತಾ ಚರ್ಚೆ; ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದ ಸಂಸದೆ

sumalatha

ಮಂಡ್ಯ: ನಾನು ಯಾವುದೇ ಕಾರಣಕ್ಕೂ ಬಿಜೆಪಿಯಿಂದ ದೂರ ಹೋಗುವ ಪ್ರಶ್ನೆ ಇಲ್ಲ, ಲೋಕಸಭೆ (Lok Sabha Election 2024) ಅವಧಿ ಮುಗಿದ ಬಳಿಕ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುತ್ತೇನೆ. ನಾನು ಸ್ಪರ್ಧೆ ಮಾಡಬೇಕು ಎನ್ನುವುದಕ್ಕಿಂತ, ಮಂಡ್ಯದಲ್ಲಿ ಬಿಜೆಪಿ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಮಾಡಿದರೆ ಮಂಡ್ಯದಲ್ಲಿ ತಳಮಟ್ಟದಲ್ಲಿ ಬಿಜೆಪಿ ಸಂಘಟನೆಯಾಗಲಿದೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದ್ದಾರೆ.

ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಮಾತುಕತೆ ನಂತರ ಮಾತನಾಡಿರುವ ಅವರು, ಮಂಡ್ಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ, ಇಂದು ಸಂಜೆ ಸಭೆಯ ನಂತರ ನಿರ್ಧಾರವಾಗಲಿದೆ. ನಿಮ್ಮನ್ನು ಮತ್ತು ನಿಮ್ಮ ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ ಎಂದು ಪ್ರಧಾನಿ ಮೋದಿಯವರೇ ನನಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | Lok Sabha Election 2024 : ಹಾಸನ, ಮಂಡ್ಯ, ಕೋಲಾರ ಜೆಡಿಎಸ್‌ಗೆ: ಎಚ್‌ಡಿಕೆ ಘೋಷಣೆ

ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ ಇನ್ನೂ ಆಗಿಲ್ಲ, ನೀವು ನಿಶ್ಚಿಂತೆಯಾಗಿ ಇರಿ, ಇನ್ನು ಏನೂ ನಿರ್ಧಾರ ಆಗಿಲ್ಲ ಎಂದು ನಡ್ಡಾ ಹೇಳಿದ್ದಾರೆ. ನಿಮ್ಮಂತಹ ನಾಯಕಿ ಪಕ್ಷಕ್ಕೆ ಬೇಕು ಎಂದಿದ್ದಾರೆ. ಇಂದು ಮೀಟಿಂಗ್ ಆಗುತ್ತದೆ, ಫೈನಲ್ ನಿರ್ಧಾರವಾಗಲಿದೆ ಎಂದು ನಡ್ಡಾ ಹೇಳಿದ್ದಾರೆ ಎಂದು ತಿಳಿಸಿದರು.

ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದೆಲ್ಲ ಕೇವಲ ಮಾಧ್ಯಮಗಳ ಉಹಾಪೋಹ. ಇಂದು ದೆಹಲಿಯಲ್ಲೆ ಇರಲು ಹೇಳಿದ್ದಾರೆ. ಪ್ರಧಾನಿ ಮೋಧಿ ಕಚೇರಿಯಿಂದ ಕರೆಬಂದಿತ್ತು, ಅಮಿತ್ ಶಾ ಜತೆ ಭೇಟಿಯಾಗಿ ಮಾತನಾಡಲು ಹೇಳಿದ್ದಾರೆ. ನನ್ನ ಮುಂದಿನ ನಿರ್ಧಾರವನ್ನು ಕ್ಷೇತ್ರಕ್ಕೆ ತೆರಳಿ, ನಮ್ಮ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

ಯಾವ ಕ್ಷೇತ್ರ ಖಾಲಿ ಇದೆಯೋ, ಅಲ್ಲಿ ನನ್ನ ಹೆಸರು ಜೋಡಿಸುತ್ತಿದ್ದಾರೆ. ಕಳೆದ ಬಾರಿ ಪಕ್ಷೇತರರವಾಗಿ ನಿಲ್ಲಿ ಎಂದು ಅಭಿಮಾನಿಗಳು ಹೇಳಿದ್ದರು. ಮುಂದೆ ಯಾವುದೇ ನಿರ್ಧಾರ ಮಾಡುವುದಿದ್ದರೆ, ನಾನು ಅವರನ್ನೇ ಕೇಳುತ್ತೇನೆ ಇಂದು ಹೈಕಮಾಂಡ್ ಸಭೆಯಲ್ಲಿ ಏನು ನಿರ್ಧಾರ ಆಗುತ್ತೋ ಅದನ್ನು ಬೆಂಬಲಿಗರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ | Lok Sabha Election 2024 : ಹಾಸನ, ಮಂಡ್ಯ, ಕೋಲಾರ ಜೆಡಿಎಸ್‌ಗೆ: ಎಚ್‌ಡಿಕೆ ಘೋಷಣೆ

ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತದೆ ಎನ್ನುವುದು ಸಹಜ. ಏನೂ ಸಮಸ್ಯೆ ಆಗದೆ ಇರುವ ರೀತಿ ಮಾಡಬೇಕಾಗುತ್ತದೆ. ಹೀಗಾಗಿ ಪಕ್ಷ ಏನು ಹೇಳುತ್ತೋ, ಅದನ್ನು ಮಾಡುತ್ತೇನೆ. ನಾಳೆ ಮಂಡ್ಯಕ್ಕೆ ಹೋಗಿ ಬೆಂಬಲಿಗರೊಂದಿಗೆ ಮಾತನಾಡುವೆ. ಸಂಧಾನ ಮಾಡುವ ಪ್ರಯತ್ನ ಇಂದು ಆಗಿಲ್ಲ. ಇವತ್ತಿನ ಮಾತುಕತೆ ಮ್ಯೂಚುವಲ್ ಆಗಿತ್ತು. ಕಾರ್ಯಕರ್ತರನ್ನು ಬಿಟ್ಟು ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದಿದ್ದೇನೆ ಎಂದು ಹೇಳಿದರು.

Exit mobile version