Site icon Vistara News

Karnataka Politics : ಡಿಕೆಶಿ ದಶಾಸ್ತ್ರಕ್ಕೆ ಸಿದ್ದರಾಮಯ್ಯ ಟೀಮ್ ಸಚಿವರು ಗಲಿಬಿಲಿ‌!

CM Siddaramaiah and DK Shivakumar

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2023) ದೃಷ್ಟಿಯಿಂದ ಹಾಗೂ ರಾಜ್ಯ ಕಾಂಗ್ರೆಸ್‌ ಭಿನ್ನಮತ ಶಮನ ಸೇರಿದಂತೆ ಇನ್ನಿತರ ರಾಜಕೀಯ ಬೆಳವಣಿಗೆಗಳ (Karnataka Politics) ಹಿನ್ನೆಲೆಯಲ್ಲಿ ಬುಧವಾರ (ಆಗಸ್ಟ್‌ 02) ನವ ದೆಹಲಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ (Congress High Command) ಜತೆ ನಡೆಯಲಿರುವ ರಾಜ್ಯ ಕಾಂಗ್ರೆಸ್‌ ಪ್ರಮುಖ ನಾಯಕರ ಸಭೆ ಈಗ ಕೆಲವು ಸಚಿವರಿಗೆ ಆತಂಕ ತಂದಿಟ್ಟಿದೆ. ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಕಾಂಗ್ರೆಸ್ ಹೈಕಮಾಂಡ್ ಇಟ್ಟುಕೊಂಡಿದೆ. ಇಷ್ಟರಲ್ಲಿ ಕಳೆದ ಬಾರಿ ಕಾಂಗ್ರೆಸ್‌ ಗೆದ್ದಿದ್ದು ಒಂದೇ ಒಂದು ಕ್ಷೇತ್ರವಾಗಿದೆ. ಹೀಗೆ 20 ಕ್ಷೇತ್ರ ಗೆಲ್ಲಬೇಕಾದರೆ, ಇನ್ನೂ 19 ಕ್ಷೇತ್ರ ಗೆಲ್ಲಬೇಕು. ಅದಕ್ಕೆ ಬೇಕಾದ ಕಾರ್ಯತಂತ್ರ, ರಾಜಕೀಯ ದಾಳ ಉರುಳಿಸುವುದು ಈ ಸಭೆಯ ಉದ್ದೇಶವಾಗಿದೆ. ಆದರೆ, ಇಲ್ಲಿ ವಿಷಯ ಇರುವುದು ಈಗಾಗಲೇ ಮುಂದಿನ ಸಿಎಂ ಎಂದೇ ಬಿಂಬಿತವಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ (Deputy CM DK Shivakumar) ಅವರದ್ದು. ಕಾರಣ ಅವರ ಬಳಿ ಈಗ ಸಿದ್ದು ಬಣದ ಪ್ರಭಾವಿ ಸಚಿವರ ರಿಪೋರ್ಟ್‌ ಕಾರ್ಡ್‌ ಇದೆ!

ಹೌದು. ಕಾಂಗ್ರೆಸ್‌ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಬಹಳ ದಿನ ಕಸರತ್ತು ಮಾಡಬೇಕಾಯಿತು. ಒಂದು ಹಂತದಲ್ಲಿ ಈ ಸಮಸ್ಯೆ ಬಗೆಹರಿಸುವುದು ಹೈಕಮಾಂಡ್‌ ಕೈಯಲ್ಲಿ ಕಷ್ಟವಾಗಿತ್ತು. ಕೊನೆಗೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶದಿಂದ ಡಿ.ಕೆ. ಶಿವಕುಮಾರ್‌ ಅವರು ಶಾಂತಗೊಂಡಿದ್ದರು. ಬಳಿಕ 50:50 ಅಧಿಕಾರ ಹಂಚಿಕೆ ಸೂತ್ರವನ್ನು ಅನುಸರಿಸಲಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆದರೆ, ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಯಾರೂ ಮಾತನಾಡಿಲ್ಲ. ಈ ನಡುವೆ ಸಿದ್ದರಾಮಯ್ಯ ಸಂಪುಟದಲ್ಲಿರುವ ಅವರ ಬಳಗದ ಕೆಲವು ಸಚಿವರ ಮೇಲೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ ಅವರು ಟಾರ್ಗೆಟ್‌ ಮಾಡಿದ್ದಾರೆ ಎಂಬ ಅನುಮಾನ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಇದೇ ಈಗ ಆ ಸಚಿವರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Job News : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಉಪನ್ಯಾಸಕರ ಹುದ್ದೆ; 21 ವಿಭಾಗಗಳಿಗೆ ಅರ್ಜಿ ಆಹ್ವಾನ

ಸಚಿವರಿಗೆ ಟೆನ್ಶನ್‌ ಏಕೆ?

28 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳ ಗೆಲ್ಲುವ ಗುರಿಯನ್ನು ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ನೀಡಿದೆ. ಇದರನ್ವಯ ಇಂಥ ಕ್ಷೇತ್ರದಲ್ಲಿ ಈ ಅಭ್ಯರ್ಥಿಗಳು ಸ್ಪರ್ಧೆ ಮಾಡಿದರೆ ನಮ್ಮದಲ್ಲದ ಕ್ಷೇತ್ರಗಳಲ್ಲಿ ಗೆಲುವು ಸಾಧ್ಯ ಎಂಬ ವರದಿಯೊಂದರನ್ನು ಡಿ.ಕೆ. ಶಿವಕುಮಾರ್‌ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಈ ವರದಿಯೇ ಈಗ ಸಚಿವ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಡಿಕೆಶಿ ಪಟ್ಟಿಯಲ್ಲಿ ಇರುವುದು ಸಿದ್ದರಾಮಯ್ಯ ಬಣದ ಪ್ರಭಾವಿ ಸಚಿವರಾಗಿದ್ದಾರೆ.

ಪಟ್ಟಿಯಲ್ಲಿ ಯಾರು ಯಾರು ಇದ್ದಾರೆ?

ಸಿದ್ದರಾಮಯ್ಯರನ್ನು ವೀಕ್‌ ಮಾಡುವ ಪ್ಲ್ಯಾನ್?

‌ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್‌ ಅವರು ತರಿಸಿಕೊಂಡಿರುವ ಆಂತರಿಕ ವರದಿಯಲ್ಲಿ ಈ ಮೇಲಿನ ಹೆಸರುಗಳು ಇವೆ. ಆದರೆ, ಅಧ್ಯಕ್ಷರ ಈ ಪ್ಲ್ಯಾನ್ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆ ಸಚಿವರು ಹಾಗೂ ಶಾಸಕರ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಈಗಷ್ಟೇ ಚುನಾವಣೆಯನ್ನು ಎದುರಿಸಿ ಗೆದ್ದು ಬಂದಿದ್ದೇವೆ. ಈಗ ನಮ್ಮ ಹೆಸರನ್ನು ಸೂಚಿಸುವುದರ ಹಿಂದೆ ನಿಮ್ಮನ್ನು ವೀಕ್ ಮಾಡುವ ತಂತ್ರ ಇದೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

ಅಭ್ಯರ್ಥಿ ಎಂದು ಘೋಷಿಸಿಯೇ ಬಿಟ್ಟರೆ?

ಒಂದು ವೇಳೆ ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ನಮ್ಮನ್ನು ಅಭ್ಯರ್ಥಿ ಅಂತ ಘೋಷಿಸಿದರೆ, ಹೈಕಮಾಂಡ್ ಮುಂದೆಯೇ ಅಸಮಾಧಾನ ವ್ಯಕ್ತಪಡಿಸುತ್ತೇವೆ. ನಾವು ಅಭ್ಯರ್ಥಿ ಆಗಲು ರೆಡಿ ಇಲ್ಲ, ನಾವು ಸೂಚಿಸಿದವರನ್ನು ಅಭ್ಯರ್ಥಿ ಮಾಡಿ. ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳುತ್ತೇವೆ. ಒಂದು ವೇಳೆ ಒತ್ತಡ ಬಂದರೆ ನಾವು ಯಾವುದೇ ತೀರ್ಮಾನಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ನಾವು ನಿಮ್ಮ ಜತೆ ಇದ್ದೇವೆ. ನಮ್ಮ ಹಿಂದೆ ಇಬ್ಬರು, ಮೂವರು ಶಾಸಕರು ಇದ್ದಾರೆ. ಇವರಿಗೆ ಬೇಕಂತೆ ವಾತಾವರಣ ನಿರ್ಮಿಸಿಕೊಳ್ಳಲು ಹೋದರೆ ನಾವು ಒಂದು ಹೆಜ್ಜೆ ಮುಂದೆ ಇಡಲೂ ರೆಡಿ ಆಗುತ್ತೇವೆ ಎಂದು ಸಿದ್ದರಾಮಯ್ಯ ಬಣದ ಅಷ್ಟೂ ಶಾಸಕ, ಸಚಿವರು ಗುಡುಗಿದ್ದಾರೆ ಎನ್ನಲಾಗಿದೆ.

ಸಮಾಧಾನ ಮಾಡಿರುವ ಸಿದ್ದರಾಮಯ್ಯ

ಈ ಎಲ್ಲ ಅಹವಾಲುಗಳನ್ನು ಆಲಿಸಿರುವ ಸಿದ್ದರಾಮಯ್ಯ ಅವರು, ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಎಲ್ಲವನ್ನೂ ಮಾತನಾಡುತ್ತೇನೆ. ಸ್ಪಷ್ಟವಾಗಿ ತಿಳಿಸುತ್ತೇನೆ ಎಂದು ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Weather Report : ಕರಾವಳಿಯಲ್ಲಿ ಬಿರುಗಾಳಿ ಮಳೆ; ಮಲೆನಾಡು, ಉತ್ತರದಲ್ಲಿ ಸಾಧಾರಣ

ಒತ್ತಡ ತಂದರೆ ಬಂಡಾಯ ಗ್ಯಾರಂಟಿ?

ಒಂದು ವೇಳೆ ಸಚಿವರು ಸ್ಪರ್ಧೆ ಮಾಡಬೇಕೆಂಬ ಒತ್ತಡವನ್ನು ತಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮೇಲೆ ಬಂಡಾಯದ ಬಾವುಟ ಹಾರಿಸಲು ಒಂದಷ್ಟು ಸಚಿವರು ತೀರ್ಮಾನ ಮಾಡಿದ್ದಾರೆ. ಇವರಿಗೆ ಹಲವು ಶಾಸಕರೂ ಸಾಥ್‌ ನೀಡುವ ಸಾಧ್ಯತೆ ಸಹ ಇದೆ. ಹೀಗಾಗಿ ಸಭೆಯ ಬಳಿಕ ಎಲ್ಲವೂ ನಿರ್ಣಯ ಆಗಬೇಕಿದೆ.

Exit mobile version