ಕೊಡಗು: ಮಡಿಕೇರಿಯಲ್ಲಿ ರಸ್ತೆ ಬದಿ ಬೀಡಾ ಅಂಗಡಿ ಬಳಿ ರಾಜಾರೋಷವಾಗಿ ಲಂಚ ತೆಗೆದುಕೊಳ್ಳುತ್ತಿದ್ದ ಪೊಲೀಸ್ ಪೇದೆಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಣ್ಣು ಸಾಗಾಟ ಮಾಡುತ್ತಿದ್ದವರಿಂದ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ (Lokayukta Raid) ನಡೆಸಿದ್ದಾರೆ.
ಗ್ರಾಮಾಂತರ ಠಾಣಾ ಸಿಬ್ಬಂದಿ ಸೋಮಶೇಖರ್ ಸಜ್ಜನ್ ಬಂಧಿತ. ಕಿರಣ್ ಎಂಬುವವರಿಂದ ಲಂಚ ಸ್ವೀಕರಿಸುವಾಗ ಪೊಲೀಸರು ಪೇದೆಯನ್ನು ಬಂಧಿಸಿದ್ದಾರೆ. ಮಣ್ಣು ಸಾಗಿಸುತ್ತಿದ್ದಾಗ ಬಿಳಿಗೇರಿ ನಿವಾಸಿ ಕಿರಣ್ ಎಂಬುವವರಿಗೆ ಪೇದೆ ಬೆದರಿಕೆ ಹಾಕಿ ಸ್ಥಳದಲ್ಲೇ 7,500 ರೂಪಾಯಿ ಪೀಕಿದ್ದಾರೆ. ನಂತರ ಬೀಡಾ ಸ್ಟಾಲ್ ಬಳಿ ಬಾಕಿ ಹಣ ೧೦,೦೦೦ ರೂಪಾಯಿ ನಗದು ಪಡೆಯುವಾಗ ಲೋಕಾಯುಕ್ತ ದಾಳಿ ನಡೆಸಿ ಪೇದೆಯನ್ನು ಬಂಧಿಸಿದ್ದಾರೆ. ಮಡಿಕೇರಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ | Ganja case: ಶಿವಮೊಗ್ಗದಲ್ಲಿ ಗಾಂಜಾ ಸೇವಿಸಿದವರ ಅಸಭ್ಯ ವರ್ತನೆ; ರಾಮನಗರದಲ್ಲಿ ಗಾಂಜಾ ಗಿಡ ಬೆಳೆದಾತ ಸೆರೆ