Site icon Vistara News

Lokayukta raid : ಶಾಸಕ ಮಾಡಾಳು ಚನ್ನೇಶಪುರ ಮನೆಗೂ ಲೋಕಾಯುಕ್ತ ಲಗ್ಗೆ; 3 ಲಕ್ಷ ರೂ. ನಗದು, ಬೆಳ್ಳಿ, ಬಂಗಾರ ಪತ್ತೆ

Davanagere house

#image_title

ದಾವಣಗೆರೆ: ಕೆಎಸ್‌ಡಿಎಲ್‌ ಟೆಂಡರ್‌ ಲಂಚಾವತಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಸಂಜಯ ನಗರ ಮನೆಯಿಂದ ಆರು ಕೋಟಿ ಮತ್ತು ಪುತ್ರ ಪ್ರಶಾಂತ್‌ ಮಾಡಾಳು ಕಚೇರಿಯಿಂದ 2 ಕೋಟಿ ರೂ. ಮತ್ತು ಭಾರಿ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡ ಲೋಕಾಯುಕ್ತರು (Lokayukta raid) ಇದೀಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರದಲ್ಲಿರುವ ನಿವಾಸಕ್ಕೂ ಲಗ್ಗೆ ಇಟ್ಟಿದ್ದಾರೆ. ಅಲ್ಲಿಯೂ ಬೆಡ್‌ ರೂಮಿನಲ್ಲಿ ಸುಮಾರು ಮೂರು ಲಕ್ಷ ರೂ. ನಗದು ಹಾಗೂ ಬೆಳ್ಳಿ, ಬಂಗಾರ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ದಾಳಿ ನಡೆದು 17 ಗಂಟೆಗಳ ಬಳಿಕ ದಾವಣಗೆರೆಯ ಮನೆಗೆ ಲೋಕಾಯುಕ್ತ ಪೊಲೀಸರು ಲಗ್ಗೆ ಇಟ್ಟಿದ್ದು, ಮನೆಯನ್ನು ಜಾಲಾಡಿದ್ದಾರೆ. ಒಂದು ವೇಳೆ ಏಕಕಾಲದಲ್ಲಿ ದಾಳಿ ನಡೆದಿದ್ದರೆ ಇನ್ನಷ್ಟು ಹಣ ಮತ್ತು ಚಿನ್ನಾಭರಣ ಸಿಗಬಹುದಿತ್ತು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ, ಈ ಅಂಶಗಳನ್ನೂ ಪರಿಗಣಿಸಿರುವ ಪೊಲೀಸರು ಕಳೆದ ರಾತ್ರಿ ಈ ಮನೆಯಲ್ಲಿ ಹಣ ಇಲ್ಲವೇ ಚಿನ್ನಾಭರಣವನ್ನು ಬೇರೆ ಕಡೆಗೆ ಶಿಫ್ಟ್‌ ಮಾಡಿರುವ ಬಗ್ಗೆ ಏನಾದರೂ ಮಾಹಿತಿ ಸಿಗುತ್ತದೆಯೇ ಎಂದು ಮನೆಯ ಸಿಸಿ ಟಿವಿ ಫೂಟೇಜ್‌ ಜಾಲಾಡುತ್ತಿದ್ದಾರೆ.

ಗುರುವಾರ ರಾತ್ರಿ ಬೆಂಗಳೂರಿನಲ್ಲಿ ಲೋಕಾಯುಕ್ತ ದಾಳಿ ನಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ಮನೆಯಲ್ಲಿದ್ದ ಶಾಸಕ ವಿರೂಪಾಕ್ಷಪ್ಪ ಮಾಡಾಳು ಮತ್ತು ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ್‌ ಅವರು ಮನೆ ಬಿಟ್ಟು ಹೊರಟಿದ್ದಾರೆ. ಮಲ್ಲಿಕಾರ್ಜುನ್‌ ಅವರು ಚನ್ನಗಿರಿ ಕ್ಷೇತ್ರದಲ್ಲಿ ಮುಂದಿನ ಅಭ್ಯರ್ಥಿಯಾಗಲು ಪ್ರಯತ್ನ ನಡೆಸುತ್ತಿದ್ದರು. ಇದಕ್ಕಾಗಿ ಸಾಕಷ್ಟು ಸಿದ್ಧತೆಗಳು ನಡೆಯುತ್ತಿದ್ದವು. ಚುನಾವಣೆಗೂ ಮೊದಲೇ ಮಲ್ಲಿಕಾರ್ಜುನ್‌ ಅವರು ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ.

ಹೀಗಾಗಿ ಮನೆಯಿಂದ ಹೊರ ಹೋಗುವಾಗ ದೊಡ್ಡ ಮೊತ್ತದ ಹಣವನ್ನು ಒಯ್ದಿರಬಹುದು ಎಂಬ ಸಂಶಯವಿದೆ. ಹೀಗಾಗಿ ಸಿಸಿಟಿವಿ ಪರಿಶೀಲನೆ ನಡೆದಿದೆ. ಮತ್ತೊಂದು ಕಡೆ ಮನೆಯಲ್ಲಿರುವ ಚಿನ್ನಾಭರಣಗಳ ಲೆಕ್ಕಕ್ಕಾಗಿ ಅಕ್ಕಸಾಲಿಗರಿಂದ ಬೆಳ್ಳಿ, ಬಂಗಾರ ಪರಿಶೀಲನೆಯೂ ನಡೆಸಲಾಗಿದೆ.

ಚನ್ನಗಿರಿಯಿಂದ ಮೂವರು ಅಕ್ಕಸಾಲಿಗರನ್ನು ಕರೆತಂದಿರುವ ಪೊಲೀಸರು ವಿರೂಪಾಕ್ಷಪ್ಪ ಕುಟುಂಬದ ಸಮ್ಮುಖದಲ್ಲಿ ಬೆಳ್ಳಿ, ಬಂಗಾರ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : Lokayukta raid : ಮಗನ ಲಂಚ ಸ್ವೀಕಾರ ಪ್ರಕರಣದಲ್ಲಿ ಅಪ್ಪನೇ ನಂ.1 ಆರೋಪಿ, ಶಾಸಕ ಮಾಡಾಳು ಮೇಲೆ ಎಫ್‌ಐಆರ್‌

Exit mobile version