Site icon Vistara News

Lokayukta Raid | 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ; ಬಿಬಿಎಂಪಿ ಅಧಿಕಾರಿ ಸೇರಿ ಮೂವರು ಲೋಕಾಯುಕ್ತ ಬಲೆಗೆ

Lokayukta Raid

ಬೆಂಗಳೂರು: ಕಮರ್ಷಿಯಲ್ ಕಾಂಪ್ಲೆಕ್ಸ್‌ ಸ್ವಾಧೀನ ಪ್ರಮಾಣ ಪತ್ರ (Occupancy Certificate) ನೀಡಲು ೩ ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಬಿಎಂಪಿ ನಗರ ಯೋಜನಾ ವಿಭಾಗದ ಎಡಿಟಿಪಿ, ದ್ವಿತೀಯ ದರ್ಜೆ ಸಹಾಯಕ ಸೇರಿ ಮೂವರನ್ನು ಲೋಕಾಯುಕ್ತ ಪೊಲೀಸರು (Lokayukta Raid) ಬಂಧಿಸಿದ್ದಾರೆ.

ಬಿಬಿಎಂಪಿ ಎಡಿಟಿಪಿ ಪಟ್ಟಣಶೆಟ್ಟಿ, ಎಫ್‌ಡಿಎ ಕೃಷ್ಣ ಹಾಗೂ ಮಧ್ಯವರ್ತಿ ರವಿ ಬಂಧಿತರು. ಎಚ್‌ಎಸ್‌ಆರ್ ಲೇಔಟ್‌ನ ಪದ್ಮಾವತಿ ಎಂಬುವವರ ವಾಣಿಜ್ಯ ಸಂಕೀರ್ಣಕ್ಕೆ ಸ್ವಾಧೀನ ಪ್ರಮಾಣ ಪತ್ರ ನೀಡಲು ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕಿರಣ್ ಎಂಬುವವರು ದೂರು ನೀಡಿದ್ದರು. ಈ ಬಗ್ಗೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ವಾಣಿಜ್ಯ ಸಂಕೀರ್ಣಕ್ಕೆ ಸ್ವಾಧೀನ ಪ್ರಮಾಣ ಪತ್ರ ನೀಡಲು ಅಧಿಕಾರಿ ಪಟ್ಟಣಶೆಟ್ಟಿ ಒಟ್ಟು ೩ ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಡಿ.1 ರಂದು 96, 500 ರೂಪಾಯಿ ಪಡೆದಿದ್ದರು. ಉಳಿದ 2 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇವರಿಗೆ ಸಹಕರಿಸಿದ ಎಫ್‌ಡಿಎ ಕೃಷ್ಣ ಹಾಗೂ ಮಧ್ಯವರ್ತಿ ರವಿಯನ್ನೂ ಬಂಧಿಸಲಾಗಿದೆ.

ಇದನ್ನೂ ಓದಿ | Fake Doctor Arrested | ದೀರ್ಘಕಾಲೀನ ರೋಗಿಗಳೇ ಟಾರ್ಗೆಟ್‌; ಆಯುರ್ವೇದ ಚಿಕಿತ್ಸೆ ಹೆಸರಿನಲ್ಲಿ‌ ಲಕ್ಷ ಲಕ್ಷ ಪಡೆದು ವಂಚನೆ

Exit mobile version