ಬೆಂಗಳೂರು: ಐದು ಲಕ್ಷ ರೂ. ಲಂಚಕ್ಕಾಗಿ ಡಿಮ್ಯಾಂಡ್ ಮಾಡಿದ ಮಹಿಳಾ ತಹಸೀಲ್ದಾರ್ ಒಬ್ಬರನ್ನು ಲೋಕಾಯುಕ್ತ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಕಂದಾಯ ಇಲಾಖೆಯ ಸ್ಪೆಷಲ್ ತಹಸೀಲ್ದಾರ್ ಆಗಿರುವ ವರ್ಷಾ ಒಡೆಯರ್ ಅವರೇ ಲೋಕಾಯುಕ್ತ ಬಲೆಗೆ ಬಿದ್ದವರು.
ಇವರು ಮೈಸೂರು ಬ್ಯಾಂಕ್ ಬಳಿಯ ಕಂದಾಯ ಭವನದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಖಾತೆ ಮಾಡಿಕೊಡಲು ಬ್ರೋಕರ್ ಮೂಲಕ ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಲಂಚ ಸ್ವೀಕರಿಸುವ ಸಂದರ್ಭದಲ್ಲೇ ಲೋಕಾಯುಕ್ತ ಪೊಲೀಸರು ಲಗ್ಗೆ ಇಟ್ಟರು.
ದಾಳಿಯ ಸಂದರ್ಭದಲ್ಲಿ ವರ್ಷಾ ಒಡೆಯರ್ ಅವರು ತಬ್ಬಿಬ್ಬಾದರು. ಆ ಬಳಿಕ ವಿಶೇಷ ತಹಸೀಲ್ದಾರರ ಕಚೇರಿಯಲ್ಲಿ ಪರಿಶೀಲನೆ, ತಪಾಸಣೆ ನಡೆಸಲಾಯಿತು.
ಮಂಗಳವಾರ ಸಂಜೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿ ಇದಾಗಿದೆ. ಅಧಿಕಾರಿಗಳು ತಹಸೀಲ್ದಾರ್ ಮತ್ತು ಬ್ರೋಕರ್ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | Lokayujta raid | ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಡಿಎಚ್ಒ