ಬೆಂಗಳೂರು: ಕೆಎಸ್‌ಡಿಎಲ್ ಟೆಂಡರ್‌ಗಾಗಿ ಶಾಸಕರ ಪುತ್ರ ಲಂಚ ಪಡೆದ ಹಾಗೂ ಲೋಕಾಯುಕ್ತ ದಾಳಿ (Lokayukta Raid) ವೇಳೆ ಪತ್ತೆಯಾದ ಅಕ್ರಮ ಹಣದ ಆರೋಪದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ ಶಾಸಕರು ತಲೆ ಮರೆಸಿಕೊಂಡಿದ್ದಾರೆ.
ಸೋಮವಾರ ಬೆಳಗ್ಗೆ ತನಿಖಾಧಿಕಾರಿ ಮುಂದೆ ತನಿಖೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಗುರುವಾರ ಸಂಜೆಯಿಂದ ಮಾಡಾಳು ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದಾರೆ. ಶಾಸಕರ ಚನ್ನಗಿರಿಯ ನಿವಾಸ, ಕೆಎಸ್‌ಡಿಎಲ್ ಕಚೇರಿ ಹಾಗೂ ಶಾಸಕರ ಭವನದ ಕೊಠಡಿಗೆ ನೋಟಿಸ್ ಅಂಟಿಸಲಾಗಿದೆ. ಲೋಕಾಯುಕ್ತ ದಾಳಿಯ ವೇಳೆ ಹಣ ಸಿಕ್ಕ ಬಳಿಕ ಶಾಸಕ ವಿರೂಪಾಕ್ಷಪ್ಪ ಎಲ್ಲೂ ಕಾಣಿಸಿಕೊಂಡಿಲ್ಲ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ?
ಶಾಸಕ ಮಾಡಾಳು ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿದ್ದಾರೆಯೇ ಎಂಬ ನಿಟ್ಟಿನಲ್ಲೂ ತನಿಖೆಗೆ ಲೋಕಾಯುಕ್ತರು ಮುಂದಾಗಿದ್ದಾರೆ.
2008, 2013, 2018ರಲ್ಲಿ ಚುನಾವಣೆ ವೇಳೆ ಅವರು ಸಲ್ಲಿಸಿದ್ದ ಅಫಿಡವಿಟ್‌ಗೂ ಈಗಿನ ಆಸ್ತಿಗೂ ಅಜಗಜಾಂತರವಿದೆ. 2008ರಲ್ಲಿ 1 ಕೆಜಿ ಬಂಗಾರ, 3 ಕೆಜಿ ಬೆಳ್ಳಿ ಇದೆ ಎಂದು ಘೋಷಿಸಿಕೊಂಡಿದ್ದರು. 2008ರಲ್ಲಿ ಶಾಸಕರ ಸ್ವಗ್ರಾಮ ಚನ್ನೇಶಪುರದಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ 11 ಎಕರೆ ಅಡಕೆ ತೋಟವಿತ್ತು. ಈಗ ನೂರಾರು ಎಕರೆ ಅಡಕೆ ತೋಟ, ಬೆದ್ದಲು ಜಮೀನು, ಗುಟ್ಕಾ ಫ್ಯಾಕ್ಟರಿಯಿದೆ. ಚುನಾವಣೆ ಸಮಯದಲ್ಲಿ ವಿರೂಪಾಕ್ಷಪ್ಪ ಮಕ್ಕಳ ಆಸ್ತಿ ಘೋಷಣೆ ಮಾಡಿಕೊಂಡಿರಲಿಲ್ಲ.
ಇದನ್ನೂ ಓದಿ: Lokayukta raid: ಶಾಸಕ ಮಾಡಾಳು ತಲೆದಂಡಕ್ಕೆ ಮುಂದಾದ ಬಿಜೆಪಿ, ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನ