Site icon Vistara News

Lokayukta raid : MRP- ಮೂವರು ಮಕ್ಕಳ ಹೆಸರಿಟ್ಟು ಗುಟ್ಕಾ ಕಂಪನಿ ಆರಂಭ ಮಾಡಿದ್ದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ

MRP Gutka

#image_title

ದಾವಣಗೆರೆ: ಕೆಎಸ್‌ಡಿಎಲ್‌ ಲಂಚ ಪ್ರಕರಣದಲ್ಲಿ (Lokayukta raid) ಸಿಲುಕಿ ಈಗ ತಲೆ ಮರೆಸಿಕೊಂಡಿರುವ ದಾವಣಗೆರೆ ಜಿಲ್ಲೆಯ ಚನ್ನಗಿರಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ಅವರು ಸಾಕಷ್ಟು ಭೂಮಿ, ವ್ಯವಹಾರ, ಉದ್ಯಮಗಳನ್ನು ಹೊಂದಿದ್ದರು. ಅವರು ಕೆಲವು ತಿಂಗಳ ಹಿಂದಷ್ಟೇ ತಮ್ಮ ಮೂವರು ಮಕ್ಕಳ ಹೆಸರಿನ ಮೊದಲ ಇಂಗ್ಲಿಷ್‌ ಅಕ್ಷರಗಳನ್ನು ಒಳಗೊಂಡ ಒಂದು ಗುಟ್ಕಾ ಬ್ರಾಂಡ್‌ ಕೂಡಾ ಶುರು ಮಾಡಿದ್ದರು.

ಎರಡು ತಿಂಗಳ ಹಿಂದಷ್ಟೇ ಆರಂಭವಾಗಿರುವ ಈ ಗುಟ್ಕಾದ ಹೆಸರು_ MRP. ಸ್ವಗ್ರಾಮ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ಎಂಆರ್ ಪಿ ಎಂಬ ಹೆಸರಿನ ಗುಟಕಾ ಕಂಪನಿ ಆರಂಭ ಮಾಡಿದ್ದಾರೆ. ಎಂಆರ್ ಪಿ ಅಂದ್ರೆ ಶಾಸಕರ ಮೂರು ಜನ ಮಕ್ಕಳ ಹೆಸರು ಎನ್ನುವುದು ವಿಶೇಷ. ಎಂ- ಮಲ್ಲಿಕಾರ್ಜುನ, ಆರ್- ರಾಜಣ್ಣ ಹಾಗೂ ಪಿ- ಪ್ರಶಾಂತ್ (ಲೋಕಾಯುಕ್ತ ಬಲೆಗೆ ಬಿದ್ದವರು).

ಭದ್ರಾವತಿ ಮೂಲದವರಿಗೆ ಗುಟಕಾ ಕಂಪನಿ ಉಸ್ತುವಾರಿ ನೀಡಲಾಗಿದೆ. ಅದರೆ, ಇಲ್ಲೂ ಅಕ್ರಮ ನಡೆಸಲಾಗಿದೆ. ಅಂದರೆ, ಪಂಚಾಯತಿ ಪರ್ಮಿಷನ್ ಪಡೆಯದೇ ಘಟಕ ಸ್ಥಾಪಿಸಲಾಗಿದೆ. ಈಗ ಎಂಆರ್‌ಪಿ ಪಾನ್‌ ಮಸಾಲಾ ಎಲ್ಲ ಕಡೆ ಮಾರಾಟವಾಗುತ್ತಿದೆ.

ಮಾಡಾಳ್‌ ಮೇಲೆ ಮತ್ತೊಂದು ಎಫ್‌ಐಆರ್‌?

ಮಾಡಾಳ್‌ ವಿರೂಪಾಕ್ಷಪ್ಪ ಅವರ ಮೇಲೆ ಬೆಂಗಳೂರಿನಲ್ಲಿ ನಡೆದ ಘಟನಾವಳಿ, ಸಿಕ್ಕಿದ 8.12 ಕೋಟಿ ರೂ. ನಗದು ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿ ಎಫ್‌ಐಆರ್‌ ದಾಖಲಾಗಿದೆ. ಈ ನಡುವೆ, ಚನ್ನಗಿರಿಯ ಮನೆಯಲ್ಲಿ 16.5 ಲಕ್ಷ ರೂ. ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಇನ್ನೊಂದು ಎಫ್‌ಐಆರ್‌ ದಾಖಲಾಗುವ ನಿರೀಕ್ಷೆ ಇದೆ.

ದಾವಣಗೆರೆ ಜಿಲ್ಲಾ ಲೋಕಾಯುಕ್ತ ಪೊಲೀಸರು ಚನ್ನಗಿರಿ ದಾಳಿ ಸಂಘಟಿಸಿದ್ದು, ತನಿಖಾಧಿಕಾರಿ ಕುಮಾರಸ್ವಾಮಿ ಅವರು ಎಫ್‌ಐಆರ್‌ ದಾಖಲಿಸುವರೆಂದು ಹೇಳಲಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ಶಾಸಕ ಮಾಡಾಳ್ ಮನೆ ಮೇಲೆ ದಾಳಿ ವೇಳೆ ಪತ್ತೆಯಾದ ವಸ್ತು. ಆಸ್ತಿ ದಾಖಲಾತಿಗಳು ಹಾಗೂ ಸಿಸಿ ಕ್ಯಾಮೆರಾದ ಡಿವಿಆರ್ ಕುರಿತಂತೆ ಸಂಪೂರ್ಣ ವರದಿ ಸಿದ್ಧಪಡಿಸುತ್ತಿದ್ದಾರೆ ಲೋಕಾಯುಕ್ತ ಅಧಿಕಾರಿಗಳು.

ಇದನ್ನೂ ಓದಿ : Lokayukta raid: ಮುಖ್ಯಮಂತ್ರಿಯವರೇ, ನಿಮಗೆ ಇದಕ್ಕಿಂತ ಸಾಕ್ಷಿ ಬೇಕೇ?; ಕೂಡಲೇ ರಾಜೀನಾಮೆ ಕೊಟ್ಟು ಹೊರಡಿ: ಸಿದ್ದರಾಮಯ್ಯ

Exit mobile version