Site icon Vistara News

Lokayukta raid : ಗಂಡ-ಹೆಂಡ್ತಿ ಇಬ್ಬರೂ ಎಂಜಿನಿಯರ್;‌ ಮನೆಯಲ್ಲಿ ಸಿಕ್ಕಿದ್ದು1 ಕೆಜಿ ಚಿನ್ನ, 15 ಲಕ್ಷ ರೂ. ನಗದು

Lokayukta raid

ದಾವಣಗೆರೆ: ಅವರಿಬ್ಬರೂ ಗಂಡ-ಹೆಂಡತಿ. ಪತಿ ಕೆ. ಮಹೇಶ್‌ (K Mahesh) ಚಿತ್ರದುರ್ಗದ ಹೊಳಲ್ಕೆರೆ ಸಣ್ಣ ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್‌ (Minor Irrigation Engineer). ಅವರ ಪತ್ನಿ ಎಚ್‌. ಭಾರತಿ (H Bharathi) ಬೆಂಗಳೂರಿನಲ್ಲಿ ಬಿಬಿಎಂಪಿಯಲ್ಲಿ ಅಸಿಸ್ಟೆಂಟ್‌ ಎಂಜಿನಿಯರ್‌ (Assistant Engineer in BBMP). ಅವರ ಮೇಲೆ ಅಕ್ರಮ ಆಸ್ತಿ ಸಂಪಾದನೆಯ ಕಣ್ಣಿತ್ತು. ಗುರುವಾರ ಅವರಿಗೆ ಸೇರಿದ ಹೊಳಲ್ಕೆರೆ, ದಾವಣಗೆರೆ ಮತ್ತು ಬೆಂಗಳೂರಿನ ಮನೆಗಳ ಮೇಲೆ ಲೋಕಾಯುಕ್ತ ದಾಳಿ (Lokayukta raid) ನಡೆದಿದೆ. ಹೊಳಲ್ಕೆರೆಯ ಮನೆ ಮೇಲೆ ನಡೆದ ದಾಳಿಯಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಮತ್ತು 15 ಲಕ್ಷ ರೂ. ನಗದು ವಶವಾಗಿದೆ.

ರಾಜ್ಯದಲ್ಲಿ ಸುಮಾರು 18 ಅಧಿಕಾರಿಗಳ ವಿರುದ್ಧ 48 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇಲೆ ಕಣ್ಣಿಡಲಾಗಿದ್ದ ಅಧಿಕಾರಿಗಳು ಟಾರ್ಗೆಟ್‌ ಆಗಿದ್ದಾರೆ. ಗುರುವಾರ ಬೆಳಗ್ಗೆ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಕೆ. ಮಹೇಶ್‌ ಮತ್ತು ಎಚ್‌. ಭಾರತಿ ಅವರಿಗೆ ಸೇರಿದ ದಾವಣಗೆರಯ ಜಯನಗರದ ಮನೆಗೆ ಲೋಕಾಯುಕ್ತರು ಲಗ್ಗೆ ಇಟ್ಟರು.

ಮನೆಯಲ್ಲಿ ಜಾಲಾಡಿದಾಗ ಒಂದು ಕೆಜಿಯಷ್ಟು ಚಿನ್ನ ಪತ್ತೆಯಾಗಿದೆ. ಮನೆಯ ನಾನಾ ಭಾಗಗಳಲ್ಲಿ ಇಡಲಾದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ 15 ಲಕ್ಷ ರೂ. ನಗದು ಕೂಡಾ ಮನೆಯಲ್ಲಿತ್ತು.

ಚಿತ್ರದುರ್ಗದ ಹೊಳಲ್ಕೆರೆ ಸಣ್ಣ ನೀರಾವರಿ ಇಂಜಿನಿಯರ್ ಕೆ.ಮಹೇಶ್ ಕೆಲಸ ಮಾಡುವ ಕಚೇರಿಯ ಮೇಲೂ ದಾಳಿ ನಡೆದಿದ್ದು, ದಾಖಲೆ ಪತ್ರಗಳ ಪರಿಶೀಲನೆ ನಡೆದಿದೆ. ಬೆಂಗಳೂರಿನಲ್ಲಿರುವ ಭಾರತಿ ಅವರ ಮನೆ ಮೇಲೂ ದಾಳಿಯಾಗಿದೆ ಎನ್ನಲಾಗಿದೆ.

ಚನ್ನಗಿರಿಯ ಅರಣ್ಯ ಇಲಾಖೆ ಅಧಿಕಾರಿ ಮೇಲೂ ಲೋಕಾ ರೇಡ್‌

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿ ಆರ್.ಎಫ್.ಒ ಸತೀಶ್ ಮನೆ ಮೇಲೆ ಲೋಕಾಯುಕ್ತ ಎಸ್ಪಿ ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆದಿದೆ. ಚನ್ನಗಿರಿಯಲ್ಲಿರುವ ಅರಣ್ಯ ಇಲಾಖೆಯ‌‌ ಕ್ವಾರ್ಟ್ರಸ್‌ಗೆ ಅಧಿಕಾರಿಗಳು ಬೆಳಗ್ಗೆ 6 ಗಂಟೆಯ ಹೊತ್ತಿಗೆ ಲಗ್ಗೆ ಇಟ್ಟಿದ್ದು, ಚಿನ್ನ, ಹಣ ಮತ್ತು ದಾಖಲೆ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ; Lokayukta Raid: ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ, 18 ಕಡೆ ರೇಡ್

Exit mobile version