Site icon Vistara News

Lokayukta Raid: 25 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಸಿಸ್ಟೆಂಟ್ ಎಂಜಿನಿಯರ್

Rs 1260 crore tender in health department alleged irregularities, Congress complains to Lokayukta

Rs 1260 crore tender in health department alleged irregularities, Congress complains to Lokayukta

ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಕಚೇರಿಯಲ್ಲಿ 25 ಸಾವಿರ ರೂಪಾಯಿ ಲಂಚ ಪಡೆಯುವಾಗ ಅಸಿಸ್ಟೆಂಟ್ ಎಂಜಿನಿಯರ್ ಲೋಕಾಯುಕ್ತ (Lokayukta raid) ಬಲೆಗೆ ಬಿದಿದ್ದಾರೆ.

ರವೀಂದ್ರ ಕುಮಾರ್ ಬಂಧಿತ ಅಸಿಸ್ಟೆಂಟ್ ಎಂಜಿನಿಯರ್. ಶಾಲಾ ಕಟ್ಟಡ ಕಾಮಗಾರಿ ಬಾಕಿ ಇದ್ದ 3 ಲಕ್ಷ ರೂಪಾಯಿ ಬಿಲ್ ಮಂಜೂರಿಗೆ 25 ಸಾವಿರ ರೂಪಾಯಿ ನೀಡಲು ಗುತ್ತಿಗೆದಾರರೊಬ್ಬರಿಗೆ ಎಂಜಿನಿಯರ್‌ ಬೇಡಿಕೆ ಇಟ್ಟಿದ್ದಾರೆ. ಗುತ್ತಿಗೆದಾರ ನಾರಾಯಣಸ್ವಾಮಿ ಎಂಬುವರಿಂದ ಲಂಚ ಸ್ವೀಕರಿಸುವಾಗ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ.

ಕೋಲಾರ ಲೋಕಾಯುಕ್ತ ಎಸ್‌ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಎಇ ರವೀಂದ್ರಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ | Auto Driver Arrest : ಬ್ಯಾಗ್‌ ನೋಡಿಕೊ, ಬರ್ತೇನೆ ಎಂದ ಪ್ರಯಾಣಿಕ; 1.5 ಲಕ್ಷ ರೂ. ಎಗರಿಸಿ ಪರಾರಿಯಾದ ರಿಕ್ಷಾ ಚಾಲಕ!

Exit mobile version