ಚಿಕ್ಕಮಗಳೂರು: ಸ್ಕೂಲ್ ಬಸ್ ಚಾಲಕನೊಬ್ಬ (School bus driver) ಎಂಟನೇ ತರಗತಿ ವಿದ್ಯಾರ್ಥಿನಿ (High Student) ಜತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾನೆ. ಸಣ್ಣ ವಯಸ್ಸಿನ ಬಾಲಕಿಯನ್ನು ಪ್ರೇಮದಾಟದಲ್ಲಿ ಸಿಲುಕಿಸಿ (Love and death) ಅಂತಿಮವಾಗಿ ತಾನು ಸತ್ತಿದ್ದಲ್ಲದೆ ಆಕೆಯ ಬಾಳಿಗೂ ಕೊಳ್ಳಿ ಇಟ್ಟಿದ್ದಾನೆ.
ಈ ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ. ಶಾಲೆ ಬಸ್‌ನ ಡ್ರೈವ್ ಸಂತೋಷ್ (38) ಕೇವಲ 14 ವರ್ಷದ ಬಾಲಕಿ ಜಾಹ್ನವಿಯನ್ನು ತನ್ನ ಜತೆಗೆ ಬಲಿ ಕೊಟ್ಟಿದ್ದಾನೆ. ಅವರಿಬ್ಬರೂ ರೈಲಿಗೆ ಅಡ್ಡಲಾಗಿ ನಿಂತು ಪ್ರಾಣ ಬಿಟ್ಟಿದ್ದಾರೆ.
ಅಜ್ಜಂಪುರ ತಾಲೂಕಿನ ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ಜಾಹ್ನವಿ ವ್ಯಾಸಂಗ ಮಾಡುತ್ತಿದ್ದಳು. 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಜಾಹ್ನವಿಯನ್ನು ಪ್ರೀತಿಸುವಂತೆ ಬಸ್ ಡ್ರೈವರ್ ಸಂತೋಷ ಪೀಡಿಸುತ್ತಿದ್ದ ಎನ್ನಲಾಗಿದೆ.
ಸಂತೋಷ ಕಳೆದ ಮೂರು ವರ್ಷಗಳಿಂದ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆಗಿನಿಂದಲೇ ಎಳೆ ಹುಡುಗಿಯ ಮೇಲೆ ಕಣ್ಣಿಟ್ಟಿದ್ದ ಸಂತೋಷ. ಬಸ್ ಡ್ರೈವರ್ ಕಿರುಕುಳದ ಬಗ್ಗೆ ಈ ಹಿಂದೆಯೇ ಪೋಷಕರು ಶಾಲೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.
ಸ್ನೇಹಿತರ ಜತೆ ಹೋಗ್ತೀನಿ ಅಂತ ಹೇಳಿ ಹೋದವಳು ಶವವಾಗಿ ಪತ್ತೆ
ಜಾಹ್ನವಿ ಭಾನುವಾರ ಸಂಜೆ ಸ್ನೇಹಿತರ ಜತೆ ನ್ಯೂ ಇಯರ್ ಪಾರ್ಟಿಗೆ ಹೋಗುವುದಾಗಿ ಹೇಳಿದ್ದಳು. ಹಾಗೆ ಮನೆಯಿಂದ ಹೊರಬಿದ್ದ ಆಕೆಯನ್ನು ಸಂತೋಷ ತನ್ನ ಜತೆ ಕರೆದೊಯ್ದಿದ್ದ. ಸಂಜೆಯಿಂದ ಆಚೀಚೆ ಓಡಾಡಿದ ಓಡಾಡಿದ ಅವರಿಬ್ಬರು ಮಧ್ಯ ರಾತ್ರಿ ರೈಲಿಗೆ ತಲೆ ಕೊಟ್ಟು ಪ್ರಾಣ ಕಳೆದುಕೊಂಡಿದ್ದರು.
ಸೋಮವಾರ ಮುಂಜಾನೆ ಇಬ್ಬರ ಶವವೂ ರೈಲ್ವೇ ಟ್ರ್ಯಾಕ್‌ನಲ್ಲಿ ಸಿಕ್ಕಿದೆ. ಘಟನೆ ತಿಳಿಯುತ್ತಿದ್ದಂತೆಯೇ ಜನರು ಅಲ್ಲಿಗೆ ಧಾವಿಸಿ ಶವಗಳನ್ನು ತಂದು ಅಜ್ಜಂಪುರ ತಾಲೂಕು ಆಸ್ಪತ್ರೆಗೆ ಒಪ್ಪಿಸಿದರು. ಅಲ್ಲಿಂದ ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ತಂದರು. ಆದರೆ, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ವೈದ್ಯರೇ ಇರಲಿಲ್ಲ. ಹೀಗಾಗಿ ಸಂಜೆಯ ವರೆಗೆ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯದೆ ಜನರು ಪ್ರತಿಭಟನೆ ನಡೆಸಿದರು.
ಇತ್ತ ಸಂತೋಷ್ ತನ್ನ ಮಗಳ ತಲೆ ಕೆಡಿಸಿ ಮೋಸ ಮಾಡುತ್ತಿದ್ದಾನೆ ಎಂದು ಮನೆಯವರು ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿದರೂ ಕ್ರಮವನ್ನೇ ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Murder Case : ಯುವಕರ ಫೈಟ್‌ಗೆ ಅಮಾಯಕ ಬಲಿ; ಬ್ಯಾಟ್ ಏಟಿಗೆ ವೃದ್ಧನ ತಲೆ ಪೀಸ್ ಪೀಸ್