Site icon Vistara News

Love Case : ವಿಷ ಸೇವಿಸಿದ ಪ್ರೇಮಿಗಳು; ಪ್ರಿಯಕರ ಸಾವು, ಅಪ್ರಾಪ್ತೆ ಚಿಂತಾಜನಕ

Rakshitha and umesh

ಚಾಮರಾಜನಗರ: ಪ್ರೇಮಿಗಳಿಬ್ಬರು ವಿಷ ಸೇವಿಸಿ (Love Case) ಆತ್ಮಹತ್ಯೆಗೆ (Self Harming) ಯತ್ನಿಸಿರುವ ಘಟನೆ ಹನೂರು ತಾಲೂಕಿನ ಹೊಗೆನಕಲ್ ಫಾಲ್ಸ್‌ (Hogenakkal Water Falls) ಬಳಿ ನಡೆದಿದೆ. ಘಟನೆಯಲ್ಲಿ ಕನಕಪುರ ಮೂಲದ ಉಮೇಶ್ (24) ಮೃತಪಟ್ಟಿದ್ದರೆ, ರಕ್ಷಿತಾ (16) ಸ್ಥಿತಿ ಚಿಂತಾಜನಕವಾಗಿದೆ.

ತಮಿಳುನಾಡು-ಕರ್ನಾಟಕ ಗಡಿ ಹಂಚಿಕೊಂಡಿರುವ ಹೊಗೆನಕಲ್ ಫಾಲ್ಸ್‌ ಬಳಿ ಉಮೇಶ್‌ ಹಾಗೂ ರಕ್ಷಿತಾ ವಿಷ ಸೇವಿಸಿ ಬಿದ್ದು ಒದ್ದಾಡುತ್ತಿದ್ದರು. ಬಂಡೆಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದವರನ್ನು ಸ್ಥಳೀಯರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜೀನ್ಮರಣ ಹೋರಾಟದಲ್ಲಿ ರಕ್ಷಿತಾ

ಉಮೇಶ್ ವಿಷ ಕುಡಿದು ಬಹಳ ಸಮಯವಾಗಿದ್ದರಿಂದ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಸಾವು ಬದುಕಿನ ನಡುವೆ ಹೊರಾಡುತ್ತಿರುವ ರಕ್ಷಿತಾಗೆ ತಮಿಳುನಾಡಿನ ಧರ್ಮಪುರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಮಿಳುನಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಪ್ರೇಮಿಗಳಿಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version