ರಾಮನಗರ : ಇಲ್ಲಿನ ಕನ್ನಹಳ್ಳಿ ಗ್ರಾಮದಲ್ಲಿರುವ ವೀರಭದ್ರಸ್ವಾಮಿ ದೇವಾಲಯ ಬಳಿ ನಿಲ್ಲಿಸಿದ್ದ ಬೈಕ್‌ಗಳಿಗೆ ಕಿಡಿಗೇಡಿಗಳು ರಾತ್ರೋರಾತ್ರಿ ಬೆಂಕಿ ಹಚ್ಚಿದ್ದರು. ಇದರ ಅಸಲಿ ವಿಚಾರ ತಿಳಿಯದೆ ಗ್ರಾಮಸ್ಥರು ಏಕಾಏಕಿ ಇದು ರಾಜಕೀಯ ಗಲಾಟೆಯೇ ಎಂದಿದ್ದರು. ಇನ್ನೇನು ಊರಿಗೆ ಊರೇ ರಣರಂಗ ಆಯಿತು ಎನ್ನುವಾಗಲೇ ಖಾಕಿ ಪಡೆ ಎಂಟ್ರಿ ಕೊಟ್ಟು ಪರಿಸ್ಥಿತಿಯನ್ನು ತಿಳಿಗೊಳಿಸಿತ್ತು. ಆದರೆ ಪೊಲೀಸರ ತನಿಖೆಯಿಂದ ಹೊರ ಬಂದ ವಿಚಾರ ಕೇಳಿ ಗ್ರಾಮಸ್ಥರೇ ಪೆಚ್ಚಾಗಿದ್ದಾರೆ.
ಪ್ರೀತಿಸಿದ ಹುಡುಗಿ ಬೇರೊಬ್ಬನ ಜತೆಗೆ ಮದುವೆ ಆಗಿದ್ದನ್ನು ಸಹಿಸದ ಪಾಗಲ್ ಪ್ರೇಮಿಯೊಬ್ಬ ಸಿಟ್ಟಿಗೆದಿದ್ದ. ವೀರಭದ್ರ ಸ್ವಾಮಿ ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಹುಡುಗಿ ಸಂಬಂಧಿಕರ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದ. ಪಾಗಲ್ ಪ್ರೇಮಿ ಹರೀಶ್ ಎಂಬಾತ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಮದುವೆ ನಡೆದ ದೇವಸ್ಥಾನದ ಬಳಿ ಹೋಗಿದ್ದ. ಈ ವೇಳೆ ಹುಡುಗಿ ಚಿಕ್ಕಪ್ಪನ ಬೈಕ್ ಕಂಡು ಬೆಂಕಿ ಹಾಕಿ ಪರಾರಿ ಆಗಿದ್ದ.
ಇದನ್ನೂ ಓದಿ: Murder Case : ತಂದೆಯನ್ನೇ ಕೊಂದ ಮಗ; ರೌಡಿಶೀಟರ್‌ನ ಕೊಚ್ಚಿ ಕೊಲೆ
ಆದರೆ ಈ ಅಸಲಿ ವಿಷಯ ಊರಿನವರಿಗೆ ಹಾಗೂ ಹುಡುಗಿ ಮನೆಯವರಿಗಾಗಲಿ ತಿಳಿದಿರಲಿಲ್ಲ. ಆದರೆ ರಾಜಕೀಯ ವಿಚಾರದಲ್ಲಿ ಈ ಹಿಂದೆ ಹುಡುಗಿ ಮನೆಯವರಿಗೆ ಹಾಗೂ ಗ್ರಾಮದ ಯತೀಶ್ ಸಂಗಡಿಗರ ನಡುವೆ ಸಣ್ಣ ಜಗಳವೊಂದು ನಡೆದಿತ್ತು. ಯಾವಾಗ ಪಾಗಲ್ ಪ್ರೇಮಿ ಹರೀಶ್ ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದನೊ ಆ ಕೃತ್ಯ ಮಾಡಿರುವುದು ಯತೀಶ್ ಎಂದು ತಿಳಿದು ದೂರು ಕೂಡ ಕೊಟ್ಟಿದ್ದರು.
ಇತ್ತ ದೂರು ದಾಖಲಿಸಿಕೊಂಡ ಪೊಲೀಸರು ಯತೀಶ್‌ನನ್ನು ಕರೆಸಿ ವಿಚಾರಣೆ ನಡೆಸಿದಾಗ ಇದರಲ್ಲಿ ಅವರದ್ದು ಯಾವುದೇ ಪಾತ್ರ ಇಲ್ಲ ಎಂದು ತಿಳಿದು ಬಂದಿತ್ತು. ಊರಿನ ರಾಜಕೀಯ ಜಗಳ ಪಾಗಲ್ ಪ್ರೇಮಿ ಇಟ್ಟ ಬೆಂಕಿಗಾಹುತಿಯಾಗಿದೆ ಎಂದು ಬಯಲಾಗಿತ್ತು. ಸದ್ಯ ತಾವರೆಕೆರೆ ಪೊಲೀಸರ ಸಮಯಪ್ರಜ್ಞೆಯಿಂದ ಊರಿನಲ್ಲಿ ನಡೆಯಬಹುದಾಗಿದ್ದ ದೊಡ್ಡ ಗಲಾಟೆಯೊಂದು ತಪ್ಪಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ