ಚಿಕ್ಕಮಗಳೂರು: ಕಳೆದ 2 ತಿಂಗಳಿಂದ ಮೊಹಮ್ಮದ್ ರೋಫ್ ಎಂಬ ಕೊಪ್ಪ ಮೂಲದ ವ್ಯಕ್ತಿಯೊಬ್ಬ ಹಿಂದು ಯುವತಿಯೊಬ್ಬಳ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾನೆ. ಇದರ ಹಿಂದೆ ಲವ್ ಜಿಹಾದ್ (Love Jihad) ಸಂಚು ಇದೆ ಎಂದು ಯುವತಿಯ ಸಹೋದರ ಆರೋಪಿಸಿದ್ದಾರೆ.
ಹಿಂದು ಯುವತಿ ಮಾನಸ ಎಂಬಾಕೆಯ ಅಣ್ಣ ಮನೋಜ್ ಎಂಬುವವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ನನ್ನ ತಂಗಿಯ ಪೋಟೊಗಳನ್ನು ಮುಸ್ಲಿಂ ಯುವಕನೊಬ್ಬ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿದ್ದಾನೆ. ಕೊಪ್ಪ ತಾಲೂಕಿನ ಶಾನುವಳ್ಳಿಯ ನಿವಾಸಿಯಾದ ಮನೋಜ್ ಅವರ ತಂಗಿಯ ಫೋಟೊವನ್ನು ಮೊಹಮ್ಮದ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನ್ನು ಗಮನಿಸಿದ್ದಾರೆ. ಕೂಡಲೇ ಕೊಪ್ಪದ ಹರಿಹರಪುರದ ಠಾಣೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಇದು ಸೂಕ್ಷ್ಮ ವಿಚಾರವಾದ ಕಾರಣ ಜತೆಗೆ ಸೈಬರ್ ಕ್ರೈಂ ವ್ಯಾಪ್ತಿಗೆ ಒಳಪಡುತ್ತದೆ ಎಂದು ಚಿಕ್ಕಮಗಳೂರಿನ ಸಿಇಎನ್ ಕ್ರೈಂ ಠಾಣೆಗೆ ದೂರು ನೀಡುವಂತೆ ತಿಳಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಅಕ್ಟೋಬರ್ 30ರಂದು ಸಿಇಎನ್ ಠಾಣೆಗೆ ದೂರು ನೀಡಿದರೂ, ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ದೂರು ನೀಡಿ ತಿಂಗಳು ಕಳೆದರೂ ಸಿಇಎನ್ ಠಾಣಾಧಿಕಾರಿ ಜಾಕೀರ್ ಹುಸೇನ್ ನೆಪ ಮಾತ್ರಕ್ಕೆ ಭರವಸೆ ನೀಡಿದ್ದಾರೆ. ಆದರೆ, ಈ ಕ್ಷಣದವರೆಗೆ ತಪ್ಪಿಸ್ಥರ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಪತ್ರವನ್ನು ಬರೆದಿದ್ದಾರೆ.
ಎಫ್‌ಐಆರ್ ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಇತ್ತ ಮೊಹಮ್ಮದ್ ಎಂಬಾತ ನನ್ನ ತಂಗಿ ಫೋಟೊವನ್ನು ಈಗಲೂ ಹರಿಬಿಡುತ್ತಿದ್ದಾನೆ. ಇದರಿಂದಾಗಿ ನಮ್ಮ ಕುಟುಂಬದವರು ನೊಂದಿದ್ದೇವೆ, ಉದ್ದೇಶಪೂರ್ವಕವಾಗಿ ಲವ್ ಜಿಹಾದ್ ಇದರ ಹಿಂದೆ ವ್ಯವಸ್ಥಿತ ಜನರು ಇದ್ದು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಮಗುವನ್ನೂ ಬಿಟ್ಟು ಪ್ರಿಯತಮನ ಜತೆ ಶಿಕ್ಷಕಿ ಪರಾರಿ, ಲವ್ ಜಿಹಾದ್ ಆರೋಪ