Site icon Vistara News

Love jihad? : ಮೆಸೇಜ್‌ನಲ್ಲೇ ಹಿಂದು ಯುವತಿಯರನ್ನು ಸೆಳೆಯುತ್ತಿದ್ದ ಖದೀಮ ಫಯಾಜ್‌ಗೆ ಗೂಸಾ!

Love jihad Dharwad

ಧಾರವಾಡ: ಕೇವಲ ಮೆಸೇಜ್‌ (Mobile Messages) ಮೂಲಕವೇ ಹಿಂದೂ ಯುವತಿಯರನ್ನು (Hindu girls and women) ಮರುಳು ಮಾಡಿ ಬಳಿಕ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಿ (Blackmailing hindu Girls) ಕಾಡುತ್ತಿದ್ದ ಮುಸ್ಲಿಂ ಯುವಕನೊಬ್ಬನಿಗೆ (Muslim man thrashed) ಬಜರಂಗ ದಳ ಕಾರ್ಯಕರ್ತರು (Bajaranga dal Activists) ಗೂಸಾ ನೀಡಿದ ಘಟನೆ ಧಾರವಾಡದಲ್ಲಿ (Love Jihad?) ನಡೆದಿದೆ.

ಧಾರವಾಡದ ರಿಲಯನ್ಸ್‌ ಡಿಜಿಟಲ್‌ನಲ್ಲಿ ಕೆಲಸ ಮಾಡುತ್ತಿದ್ದ ಫಯಾಜ್‌ ಎಂಬಾತನೇ ಈ ದುರುಳ. ಆತ ಹಿಂದೂ ಯುವತಿಯರು ಮತ್ತು ಮಹಿಳೆಯರ ಮೊಬೈಲ್‌ ನಂಬರ್‌ ಸಂಗ್ರಹಿಸಿ ಅವರಿಗೆ ಮೆಸೇಜ್‌ ಮಾಡಿ ಆತ್ಮೀಯತೆ ಬೆಳೆಸಿಕೊಂಡು ಬಳಿಕ ತಣ್ಣಗೆ ಬ್ಲ್ಯಾಕ್‌ಮೇಲ್‌ ಶುರು ಮಾಡುತ್ತಿದ್ದ ಎನ್ನಲಾಗಿದೆ.

ಅವನು ರಿಲಯನ್ಸ್‌ ಡಿಜಿಟಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅಲ್ಲಿ ಅವನಿಗೆ ಸುಲಭವಾಗಿ ಹೆಣ್ಮಕ್ಕಳ ಮೊಬೈಲ್‌ ನಂಬರ್‌ಗಳು ಸಿಗುತ್ತಿದ್ದವು. ಮೊಬೈಲ್‌ ಖರೀದಿ ಮಾಡುವಾಗ, ಬೇರೆ ರಿಪೇರಿಗೆಂದು ಬಂದಾಗ ಅವರು ನಂಬರ್‌ ಕೊಡುತ್ತಿದ್ದರು. ಹಾಗೆ ಸಿಕ್ಕಿದ ಮೊಬೈಲ್‌ ನಂಬರ್‌ಗಳಲ್ಲಿ ಹಿಂದೂ ಹೆಣ್ಮಕ್ಕಳ ನಂಬರ್‌ ಎತ್ತಿಕೊಂಡು ಮೆಸೇಜ್‌ ಮಾಡಿ ತನ್ನ ಆಟ ಶುರು ಮಾಡುತ್ತಿದ್ದ.

ಆರಂಭದಲ್ಲಿ ಮೊಬೈಲ್‌ ಸರಿಯಾಗಿದೆಯಾ? ಏನಾದರೂ ಸಮಸ್ಯೆ ಇದ್ದರೆ ಹೇಳಿ ಎಂದು ಕಂಪನಿಯ ಒಬ್ಬ ಗ್ರಾಹಕ ಸ್ನೇಹಿಯಂತೆ ಮೆಸೇಜ್‌ ಮಾಡುತ್ತಿದ್ದ ಆತ ಒಮ್ಮೆ ಮಹಿಳೆಯರು ನಂಬಿ ವಿಶ್ವಾಸವಿಟ್ಟರೆ ಬಳಿಕ ತನ್ನ ವರಸೆಯನ್ನು ಬದಲಿಸುತ್ತಿದ್ದ ಎನ್ನಲಾಗಿದೆ.

ಮೊದಲು ಗ್ರಾಹಕ ಸಂಪರ್ಕದಂತೆ ಶುರು ಹಚ್ಚಿಕೊಳ್ಳುತ್ತಿದ್ದ ಆತ ತನ್ನ ನಯವಿನಯದ ವರ್ತನೆ, ಮೆಸೇಜ್‌ ಮಾಡುವ ಶೈಲಿಯಿಂದ ಅವರ ಮನಸು ಗೆಲ್ಲುತ್ತಿದ್ದ. ಬಳಿಕ ಅವರ ಜತೆ ಸ್ನೇಹದಿಂದ ವರ್ತಿಸುತ್ತಿದ್ದ. ಬಳಿಕ ಮೊಬೈಲ್‌ ವಿಷಯ ಬಿಟ್ಟು ಪರ್ಸನಲ್‌ ಸಂಗತಿಗಳ ಚರ್ಚೆಗೆ ಎಳೆಯುತ್ತಿದ್ದ. ಅಲ್ಲಿಂದ ಮುಂದೆ ಬೇರೆ ಬೇರೆ ವಿಚಾರಗಳ ಚರ್ಚೆ ಶುರು ಮಾಡುತ್ತಿದ್ದ. ಕೆಲವು ಯುವತಿಯರು ಆತನ ನಯವಾದ ವರ್ತನೆಗೆ ಬಲಿ ಬೀಳುತ್ತಿದ್ದರು.

ಈ ರೀತಿ ಆತ್ಮೀಯವಾಗಿ ಹರಟಿದ್ದನ್ನು, ವಿನಿಮಯ ಮಾಡಿಕೊಂಡ ಫೋಟೊಗಳನ್ನು ಇಟ್ಟುಕೊಂಡು ಅಷ್ಟೇ ವಿನಯದಿಂದ ಬ್ಲ್ಯಾಕ್‌ಮೇಲ್‌ ಮಾಡಲು ಆತ ಶುರು ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಇಲ್ಲಿನ ಬಜರಂಗ ದಳ ಕಾರ್ಯಕರ್ತರಿಗೆ ದೂರು ಬಂದಿತ್ತು. ಅವರು ಮಂಗಳವಾರ ರಿಲಯನ್ಸ್ ಡಿಜಿಟಲ್ ಶಾಪ್‌ಗೆ ನುಗ್ಗಿ ಯುವಕನನ್ನು ಹಿಡಿದು ಚೆನ್ನಾಗಿ ತದುಕಿದ್ದಾರೆ.

ಇದನ್ನೂ ಓದಿ : Love Case : ಪ್ರೇಮಿಗಳ ನಡುವೆ ಕಿರಿಕ್‌; ನಡುರಸ್ತೆಯಲ್ಲೇ ಯುವತಿಗೆ ಚೂರಿ ಹಾಕಿದ ಯುವಕ

ವಿಷಯ ತಿಳಿಯುತ್ತಿದ್ದಂತೆಯೇ ಉಪನಗರ ಪೊಲೀಸ್‌ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ವಶಕ್ಕೆ ಪಡೆದರು. ಇದೀಗ ಆತನ ವಿಚಾರಣೆ ನಡೆಯುತ್ತಿದೆ. ದೊಡ್ಡ ಕಂಪನಿಗಳ ಹೆಸರಿನಲ್ಲಿ ಇಂಥವರು ಕೆಟ್ಟ ಕೃತ್ಯಗಳನ್ನು ನಡೆಸುತ್ತಿರುವುದು ಕಂಪನಿಗಳಿಗೂ ಕಳಂಕ ಹಚ್ಚುವ ಕೆಲಸ. ಮಳಿಗೆಗಳು ಕೂಡಾ ಇಂಥವರ ಬಗ್ಗೆ ಎಚ್ಚರದಿಂದಿರಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

Exit mobile version